ರೇಣುಕಾಸ್ವಾಮಿ ಕೊಲೆ ಪ್ರಕರಣ; ಆಪ್ತ ಗೆಳೆಯ ದರ್ಶನ್‌ನಿಂದ ಅಂತರ ಕಾಯ್ದುಕೊಂಡ ನಟ ಲವ್ಲಿಸ್ಟಾರ್ ಪ್ರೇಮ್?

By Ravi Janekal  |  First Published Jun 19, 2024, 8:25 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬಳಿಕ ಅತ್ಯಾಪ್ತ ಗೆಳೆಯ ಲವ್ಲಿಸ್ಟಾರ್ ಪ್ರೇಮ್ ಅಂತರ ಕಾಯ್ದುಕೊಂಡರಾ? ದರ್ಶನ್ ಕುರಿತು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ "ಪ್ಲೀಸ್..ಆ ವಿಚಾರ ಏನೂ ಕೇಳಬೇಡಿ' ಎಂದ ನಟ.


ಬೆಂಗಳೂರು (ಜೂ.19): ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದನೆಂಬ ಕಾರಣಕ್ಕೆ ದರ್ಶನ್‌ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯ ಬರ್ಬರವಾಗಿ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿಬಿಳಿಸಿದೆ. ದರ್ಶನ್ ಬಂಧನ ಪ್ರಕರಣದ ಬಳಿಕ ಕನ್ನಡ ಚಿತ್ರರಂಗ ಮೌನಕ್ಕೆ ಶರಣಾಗಿತ್ತು. ಈ ಸಂಬಂಧ ಯಾರೂ ಪ್ರತಿಕ್ರಿಯಿಸಲು ಮುಂದೆ ಬರಲಿಲ್ಲ. ಬಳಿಕ ರಮ್ಯಾ, ಸುದೀಪ್, ಅನಿರುದ್ಧ ಸೇರಿದಂತೆ ಒಬ್ಬೊಬ್ಬರೇ ಪ್ರತಿಕ್ರಿಯಿಸಲು ಶುರು ಮಾಡಿದರು.

'ನಾವೆಲ್ಲರೂ ಅವನನ್ನು ತುಂಬಾ ಇಷ್ಟಪಟ್ಟಿದ್ದೆವು ಆದರೆ.,' ದರ್ಶನ್ ಬಗ್ಗೆ ನಟ ಅನಿರುದ್ಧ್ ಮಾತು!

Tap to resize

Latest Videos

undefined

ರೇಣುಕಾಸ್ವಾಮಿ ಹತ್ಯೆ ಘಟನೆ ಖಂಡಿಸಿದರು. ಆದರೆ ಕೆಲವು ನಟರು ಈಗಲೂ ದರ್ಶನ್ ವಿಚಾರ ಕೇಳಿದ್ರೆ ಬೆಚ್ಚಿಬಿಳುತ್ತಿದ್ದಾರೆ. 'ದಮಯ್ಯ, ಈ ವಿಚಾರದ ಬಗ್ಗೆ ನಮ್ಮನ್ನು ಏನೂ ಕೇಳಬೇಡಿ' ಎನ್ನುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಬಳಿಕ ಅತ್ಯಾಪ್ತರಾಗಿದ್ದವರು ದೂರ ಸರಿದುಕೊಂಡಿದ್ದಾರೆ. ಅದೇ ರೀತಿ ದರ್ಶನ್ನರ ಆಪ್ತ ಗೆಳೆಯರಲ್ಲಿ ಒಬ್ಬರಾದ ನಟ ಲವ್ಲಿ ಸ್ಟಾರ್ ಪ್ರೇಮ್ ಕೂಡ ದರ್ಶನ್ ವಿಚಾರವಾಗಿ ಮೌನಕ್ಕೆ ಶರಣಾಗಿದ್ದಾರೆ.

ಆಪ್ತ ಸ್ನೇಹಿತ ಬನ್ನೂರಿನ ಮಹೇಂದ್ರ ಸಿಂಗ್ ಕಾಳಪ್ಪ ಅವರ ತಂದೆಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಇ ಭಾಗಿಯಾಗಿದ್ದ ನಟ ಪ್ರೇಮ್ ಈ ವೇಳೆ ಮಾಧ್ಯಮದವರು ದರ್ಶನ್ ಕುರಿತಾಗಿ ಪ್ರಶ್ನಿಸುತ್ತಿದ್ದಂತೆ 'ಪ್ಲೀಸ್, ಆ ಬಗ್ಗೆ ಪ್ರಶ್ನಿಸಬೇಡಿ' 'ದಯಮಾಡಿ ಕಾರ್ಯಕ್ರಮದ ಬಗ್ಗೆ ಮಾತ್ರ ಮಾತಾಡಿ. ವೇದಿಕೆ ಮೇಲೆ ಆ ಕುರಿತು ಪ್ರತಿಕ್ರಿಯಿಸಲು ಪ್ರಶ್ನಿಸಬೇಡಿ' ಎಂದ ಪ್ರೇಮ್. ದರ್ಶನ್ ಕುರಿತು ಯಾವುದೇ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

click me!