ಮೆಜೆಸ್ಟಿಕ್ ಶೌಚಾಲಯದಲ್ಲಿ ಮಹಿಳೆಯ ಫೋನ್ ನಂಬರ್ ಬರೆದು ಕಾಲ್ ಗರ್ಲ್ ಎಂದು ಉಲ್ಲೇಖಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದೆ.
ಬೆಂಗಳೂರು(ಜೂ.19) ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ, ಬೇಡಿಕೆ ಈಡೇರಲಿಲ್ಲ ಎಂದಾಗ ಪರಿಚಯಸ್ಥರೆ ತಮ್ಮ ಗೆಳೆತಿಯರ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಶೌಚಾಲಯದಲ್ಲಿ ಬರೆದು ವಿಕೃತ ಆನಂದ ಪಡುವ ಹಲವು ಘಟನೆಗಳು ನಡೆದಿದೆ. ಹೀಗೆ ಪರಿಚಯಸ್ಥರೊಬ್ಬರ ಮಹಿಳೆಯ ಫೋನ್ ನಂಬರ್‌ನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಬಳಿ ಇರುವ ಶೌಚಾಲಯದಲ್ಲಿ ಈಕೆಯ ಫೋನ್ ನಂಬರ್ ಬರೆದು ಕಾಲ್ ಗರ್ಲ್ ಎಂದು ಉಲ್ಲೇಖಿಸಿದ್ದಾನೆ. ಸತತ ಕರೆಗಳಿಂದ ಮಹಿಳೆಗೆ ಆಘಾತವಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ಇತ್ತ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ಹಿನ್ನಡೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಆರೋಪಿ ಅರ್ಜಿಯನ್ನು ತಿರಸ್ಕರಿಸಿದೆ.
ಚಿತ್ರದುರ್ಗದ ಆರೋಗ್ಯ ಕೇಂದ್ರದಲ್ಲಿನ ಮಹಿಳಾ ಸಿಬ್ಬಂಧಿ ಪ್ರತಿ ದಿನ ತಕ್ಕ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದರು. ಇದರ ನಡುವೆ ಮೇಲಾಧಿಕಾರಿ ಸೂಚನೆ ಮೇರೆಗೆ ಫೋನ್ ನಂಬರ್‌ನ್ನು ಅಧಿಕಾರಿಗೆ ನೀಡಿದ್ದಳು. ಇದಾದ ಕೆಲ ದಿನಗಳಲ್ಲಿ ಮಹಿಳೆಗೆ ಸತತ ಕರೆಗಳು ಬರಲು ಆಗಮಿಸಿದೆ. ದಿನಕ್ಕೆಷ್ಟು? ರಾತ್ರಿಗೆಷ್ಟು ಎಂದು ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾರೆ. ಪ್ರತಿ ದಿನ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಕರೆ ಮಾಡಿದವರಲ್ಲೇ ಈ ನಂಬರ್ ಎಲ್ಲಿ ಸಿಕ್ಕಿತ್ತು ಎಂದು ಪ್ರಶ್ನಿಸಿದಾಗ ಕೆಲ ಮಾಹಿತಿಗಳು ಬಯಲಾಗಿದೆ. ಮೆಜೆಸ್ಟಿಕ್ ಶೌಚಾಲಯದಲ್ಲಿ ಕಾಲ್ ಗರ್ಲ್ ನಂಬರ್ ಎಂದು ಈ ಸಂಖ್ಯೆ ಹಾಕಲಾಗಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಸಂತ್ರಸ್ತೆ ವರಿಸಲು ಬೇಲ್..!
ಈ ಮಾಹಿತಿ ಆಧಾರದ ಮೇಲೆ ಮಹಿಳೆ ದೂರು ದಾಖಲಿಸಿದ್ದಾಳೆ. ಆರೋಪಿ ಅಲ್ಲಾಬಕ್ಷ್ ಪಾಟೀಲ್ ವಿರುದ್ಧ ಸೆಕ್ಷನ್ 501, 504, 507 ಹಾಗೂ 509ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಕೆಲ ಮಾಹಿತಿಗಳು ಲಭ್ಯವಾಗಿದೆ. ಇದು ಅಲ್ಲಾಬಕ್ಷ್ ಸಂಕಷ್ಟ ಹೆಚ್ಚಿಸಿದೆ.
ಇತ್ತ ಅಲ್ಲಾಬಕ್ಷ್ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇದು ಗಂಭೀರ ಪ್ರಕರಣವಾಗಿದೆ. ಮಹಿಳೆಗೆ ದೈಹಿಕ ಹಾನಿಗಿಂತ ಮಾನಸಿಕವಾಗಿ ನೀಡುವ ಹಾನಿ ಗಂಭೀರವಾಗಿದೆ. ಈ ಮಹಿಳೆಯ ಫೋಟೋ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದು, ನಂಬರ್ ಬಹಿರಂಪಡಿಸವುದು ಆಕೆಯ ಘತನೆಗೆ ಧಕ್ಕೆಯಾಗಲಿದೆ. ಇಂತಹ ಪ್ರಕರಣಗಳು ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೀಗಾಗಿ ಪ್ರಕರಣ ರದ್ದುಕೋರಲು ಸಾಧ್ಯವಿಲ್ಲ. ವಿಚಾರಣೆ ಎದುರಿಸಿ, ತನಿಖೆಗೆ ಸಹಕರಿಸಲು ಹೈಕೋರ್ಟ್ ಆದೇಶಿಸಿದೆ.
ನರ್ಸ್‌ಗೆ ಪಾಸ್‌ಪೋರ್ಟ್ ಮರಳಿಸುವ ಬಗ್ಗೆ ಕ್ರಮಕ್ಕೆ ಹೈಕೋರ್ಟ್ ಸೂಚನೆ