SAI Sanctuary Private Forest ನಿರ್ಮಾತೃ ಅನಿಲ್‌ ಮಲ್ಹೋತ್ರ ವಿಧಿವಶ

Kannadaprabha News   | Asianet News
Published : Nov 23, 2021, 09:57 AM IST
SAI Sanctuary Private Forest  ನಿರ್ಮಾತೃ  ಅನಿಲ್‌ ಮಲ್ಹೋತ್ರ ವಿಧಿವಶ

ಸಾರಾಂಶ

ಪರಿಸರ ಪ್ರೇಮಿ ಮೂಲತಃ  ಪೂಣೆಯವರಾದ ಅನಿಲ್‌ ಮಲ್ಹೋತ್ರ (60) ಸೋಮವಾರ ಹೃದಯಾಘಾತದಿಂದ ನಿಧನ ಭಾರತದ ಪ್ರಥಮ ಖಾಸಗಿ ಕಾಡು ನಿರ್ಮಿಸಿದ್ದ ಅನಿಲ್‌ ಮಲ್ಹೋತ್ರ

ಮಡಿಕೇರಿ (ನ.23): ಪರಿಸರ ಪ್ರೇಮಿ (environmentalist) ಮೂಲತಃ  ಪೂಣೆಯವರಾದ (Pune) ಅನಿಲ್‌ ಮಲ್ಹೋತ್ರ (60) (Anil Malhotra) ಸೋಮವಾರ ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ. ದಕ್ಷಿಣ ಕೊಡಗಿನ (Kodagu) ತೆರಾಲು ಗ್ರಾಮದ ಬಳಿಯ 300 ಎಕರೆ ಖಾಸಗಿ ಸಾಯ್‌ ಸ್ಯಾಂಚುರಿ (Sai Sanctuary ) ( ಸೇವ್‌ ಅನಿಮಲ್‌ ಇನಿಷಿಯೇಟಿವ್‌) ಭಾರತದ ಪ್ರಥಮ ಖಾಸಗಿ ಕಾಡು (Private Forest) ನಿರ್ಮಿಸಿದ್ದರು. 1991ರಲ್ಲಿ ಕೊಡಗಿಗೆ ಬಂದ ಡಾ.ಅನಿಲ್‌ ಕುಮಾರ್‌ ಮಲ್ಹೋತ್ರ ಹಾಗೂ ಅಮೆರಿಕದ (America) ನ್ಯೂಜೆರ್ಸಿಯ ಪಮೇಲಾ ಮಲ್ಹೋತ್ರ (pamela Mlhotra) ದಂಪತಿ ಈ ಕಾಡಿನ ಸಂರಕ್ಷಕರು. ಆರಂಭದಲ್ಲಿ ಖರೀದಿಸಿದ್ದ 55 ಎಕರೆಯಷ್ಟು ಕಾಫಿ ತೋಟ (Coffee Estate) ಮತ್ತು ಅರೆ ಬರೆ ಕಾಡಿನ ಜೊತೆಗೆ ವರ್ಷದಿಂದ ವರ್ಷಕ್ಕೆ ಒಂದಿಷ್ಟು ಜಾಗ ಖರೀದಿಸಿ 300 ಎಕರೆಯಷ್ಟು ವಿಸ್ತರಿಸಿದ್ದಾರೆ.

ಪತ್ನಿ ಪಮೇಲಾ ಮಲ್ಹೋತ್ರ ಮೂಲತಃ ಕೆನಡಾದವರು (Canada). ಅನಿಲ್‌ ಮಲ್ಹೋತ್ರ ಅವರನ್ನು ಮದುವೆ (Marriage) ಆಗಿ, ಬಿರುನಾಣಿಯ ತೆರಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಥಳ ಖರೀದಿಸಿ ನೆಲೆಸಿದ್ದರು.

ಸಸ್ಯಹಾರಿಗಳಾದ (vegetarians)  ಇವರು ತಮ್ಮ ಪ್ರದೇಶದ ಒಂದೇ ಒಂದು ಮರ ನಾಶವಾಗದಂತೆ ದಶಕಗಳಿಂದ ಸಂರಕ್ಷಿಸಿದ್ದರು. ತಮ್ಮ ಪರಿಸರ ಸ್ನೇಹಿ ಹೋಂ ಸ್ಟೇ (Home Stay) ಅಲ್ಲಿ ಕೂಡ ಇವರು ಮಾಂಸಹಾರ ನಿಷಿದ್ಧ ಮಾಡಿದ್ದರು. ಆ ಮೂಲಕ ಪ್ರಾಣಿ, ಪಕ್ಷಿ ಸಂಕುಲದ ಮೇಲೆ ಇವರು ಇಟ್ಟಿರುವ ಪ್ರೇಮವನ್ನು ಅವರಲ್ಲಿಗೆ ಬರುವ ಅಥಿತಿಗಳಿಗೆ ಉಣ ಬಡಿಸುತ್ತಿದ್ದರು.

ಮಕ್ಕಳಿಲ್ಲದ ದಂಪತಿಗಳು (couple) ತಮ್ಮ ಪರಿಸರವನ್ನೇ ಮಕ್ಕಳಂತೆ ನೋಡಿಕೊಂಡವರು. ಇವರ ಪತ್ನಿಯೂ ಭಾರತದ (India) ಪೌರತ್ವ (Citizenship) ಪಡೆದುಕೊಂಡು ಇಲ್ಲಿ ನೆಲೆಸಿ, ತಮ್ಮ ಪತಿಯೊಂದಿಗೆ ಅನನ್ಯ ಸಂಪತ್ತಿನ ಸಂರಕ್ಷಣೆ ಮಾಡುತ್ತಿದ್ದಾರೆ. ಭಾರತದ ಅತ್ಯುತ್ತಮ ಪರಿಸರ ಸಂರಕ್ಷಕಿ ಎನ್ನುವ ಬಿರುದನ್ನು ಕೇಂದ್ರ ಸರ್ಕಾರ (Govt Of India) ಪಮೇಲ ಅವರಿಗೆ ನೀಡಿ ಗೌರವಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ (award), ಸನ್ಮಾನಗಳು ಇವರದ್ದಾಗಿದೆ. ಪ್ರತಿಷ್ಟಿತ ಡಿಸ್ಕವರಿ  ಚಾನಲ್‌ನಲ್ಲಿ (Discovery channel )ಇವರ ಜೀವಮಾನ ಸಾಧನೆಯ ಕಥೆಯನ್ನು ತೋರಿಸಿ ಗೌರವಿಸಲಾಗಿದೆ.

ಸೋಮವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಅನಿಲ್‌  ಮಲ್ಹೋತ್ರ ಅವರನ್ನು ಸ್ಥಳೀಯ ಲೋಪ ಮುದ್ರೆ ಆಸ್ಪತ್ರೆಗೆ (Hospital) ಸಾಗಿಸಿದರಾದರೂ ಅವರು ಅಲ್ಲೇ ಕೊನೆಯುಸಿರೆಳಿದ್ದಿದ್ದಾರೆ.

ಹಕ್ಕಿಗಳಂತೆ ಮೌನವಾಗಿಯೇ ಪರಿಸರ ಸಂರಕ್ಷಣೆ ಮಾಡಿದ ಅನಿಲ್‌ ಮಲ್ಹೋತ್ರ ಅವರ ಅಂತಿಮ ಸಂಸ್ಕಾರ ಅವರ ಕನಸಿನ ನೆಲ ತೆರಾಲು ಗ್ರಾಮದ (Teralu Village) ಸ್ವ-ಗೃಹದಲ್ಲಿ ಇಂದು ನೆರವೇರಲಿದೆ ಎಂದು ಸಂಬಂಧಿಗಳು ತಿಳಿಸಿದ್ದು, ಅವರ ಸಹೋದರ ಸಂಬಂಧಿಗಳು (relatives) ಪೂಣೆಯಿಂದ ಅವರ ಅಂತಿಮ ನಮನಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

  • ಭಾರತದ ಪ್ರಥಮ ಖಾಸಗಿ ಕಾಡು ನಿರ್ಮಾತೃ  ಅನಿಲ್‌ ಮಲ್ಹೋತ್ರ ವಿಧಿವಶ
  • ಪರಿಸರ ಪ್ರೇಮಿ ಮೂಲತಃ  ಪೂಣೆಯವರಾದ ಅನಿಲ್‌ ಮಲ್ಹೋತ್ರ
  • ದಕ್ಷಿಣ ಕೊಡಗಿನ ತೆರಾಲು ಗ್ರಾಮದ ಬಳಿಯ 300 ಎಕರೆ ಖಾಸಗಿ ಸಾಯ್‌ ಸ್ಯಾಂಚುರಿ
  • 1991ರಲ್ಲಿ ಕೊಡಗಿಗೆ ಬಂದ ಡಾ.ಅನಿಲ್‌ ಕುಮಾರ್‌ ಮಲ್ಹೋತ್ರ
  • . ಆರಂಭದಲ್ಲಿ ಖರೀದಿಸಿದ್ದ 55 ಎಕರೆಯಷ್ಟು ಕಾಫಿ ತೋಟದಿಂದ ಆರಂಭ
  • ಸಸ್ಯಹಾರಿಗಳಾದ ಇವರು ತಮ್ಮ ಪ್ರದೇಶದ ಒಂದೇ ಒಂದು ಮರ ನಾಶವಾಗದಂತೆ ದಶಕಗಳಿಂದ ಸಂರಕ್ಷಿಸಿದ್ದರು
  • ಇಂದು ತೆರಾಲು ಗ್ರಾಮದಲ್ಲಿ ಅಂತಿಮ ನಮನಕ್ಕೆ ಸಿದ್ಧತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ