Accident| ಟ್ರ್ಯಾಕ್ಟರ್‌-ಕಾರಿನ ಮಧ್ಯೆ ಅಪಘಾತ: 6 ವರ್ಷದ ಬಾಲಕಿ ಸೇರಿ ಮೂವರ ಸಾವು

By Kannadaprabha News  |  First Published Nov 22, 2021, 12:00 PM IST

*  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಮೀಪದ ಡಂಬಳ ಬಳಿ ನಡೆದ ಅಪಘಾತ
*  ತೈಲ ಸಾಗಾಟ ಲಾರಿ ಅಪಘಾತ; ಚಾಲಕ ಪಾರು
*  ಬೈಕ್‌ ಬಿದ್ದು ಸವಾರ ಪಾರು


ಡಂಬಳ(ನ.22): ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ(Collision) ಹೊಡೆದ ಪರಿಣಾಮ 6 ವರ್ಷದ ಬಾಲಕಿ ಸೇರಿದಂತೆ ಮೂವರು ಮೃತಪಟ್ಟು(Death), ಇಬ್ಬರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಭಾನುವಾರ ರಾತ್ರಿ ಗದಗ(Gadag) ಜಿಲ್ಲೆಯ ಮುಂಡರಗಿ(Mundargi) ತಾಲೂಕಿನ ಸಮೀಪದ ಡಂಬಳ-ಮೇವುಂಡಿ ಗ್ರಾಮಗಳ ಮಧ್ಯೆ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಶಿವಾನಂದಯ್ಯ ಹಿರೇಮಠ (45), ಅವರ ತಾಯಿ ಅನುಸೂಯಾ ಹಿರೇಮಠ (65) ಹಾಗೂ ಪುತ್ರಿ ಮನಸ್ವಿ (6) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಗಿರಿಜಾ ಹಿರೇಮಠ ಮತ್ತು ಚಾಲಕ ಸಂತೋಷ ರಾವಲ್‌ ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ(Hospital) ದಾಖಲಿಸಲಾಗಿದೆ. ಅಪಘಾತಕ್ಕೀಡಾದವರು(Accident) ಹುಬ್ಬಳ್ಳಿ(Hubballi) ಮೂಲದವರು ಎಂದು ತಿಳಿದು ಬಂದಿದ್ದು, ಅಲ್ಲಿಂದ ಮುಂಡರಗಿಯ ಸಿಂಗಟಾಲೂರಿನ ವೀರಭದ್ರ ದೇವಸ್ಥಾನಕ್ಕೆ ಹೋಗಿ, ಮರಳಿ ಹುಬ್ಬಳ್ಳಿಗೆ ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುಂಡರಗಿ ಮತ್ತು ಡಂಬಳ ಠಾಣೆ ಪೊಲೀಸ್‌(Police) ಸಿಬ್ಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tap to resize

Latest Videos

Accident| ರಾಜ್ಯದಲ್ಲಿ ಪ್ರತ್ಯೇಕ ಅಪಘಾತ: ಐವರ ದುರ್ಮರಣ

ಕಾರು ಮರಕ್ಕೆ ಡಿಕ್ಕಿ: ಮಹಿಳೆ ಸಾವು

ಗೋಣಿಕೊಪ್ಪ(ಕೊಡಗು): ತಿತಿಮತಿ ಮುಖ್ಯರಸ್ತೆಯ ಭದ್ರಗೋಳ ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ವಿರಾಜಪೇಟೆ ತೆಲುಗರ ಬೀದಿ ನಿವಾಸಿ ರಾಜ ಅವರ ಪತ್ನಿ ಚಂದ್ರಕಲಾ (55) ಮೃತರು. ಕಾರಿನಲ್ಲಿದ್ದ ಚಂದ್ರಕಲಾ ಅವರ ಮೂವರು ಪುತ್ರರು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಇವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಣಿಕೊಪ್ಪದಿಂದ ತಿತಿಮತಿ ಮಾರ್ಗದತ್ತ ಚಂದ್ರಕಲಾ ಕುಟುಂಬದ ನಾಲ್ವರು ಟಿಯಾಗೊ ಕಾರಿನಲ್ಲಿ ಹುಣಸೂರಿಗೆ ತೆರಳುತ್ತಿದ್ದ ಸಂದರ್ಭ ಭದ್ರಗೋಳ ಎಂಬಲ್ಲಿ ಮುಂದೆ ಸಾಗುತ್ತಿದ್ದ ವ್ಯಾಗನಾರ್‌ ಕಾರು ಬಲಕ್ಕೆ ತಿರುಗಿಸಿದಾಗ ಅಪಘಾತ ಸಂಭವಿಸಿದೆ. ಟಿಯಾಗೊ ಕಾರು ಹಿಂಬದಿಯಿಂದ ಡಿಕ್ಕಿಯಾಗಿ, ನಂತರ ಸಮೀಪದಲ್ಲಿದ್ದ ಮರಕ್ಕೆ ಬಡಿದಿದೆ. ಈ ಸಂದರ್ಭ ಕಾರು ನಜ್ಜುಗುಜ್ಜಾಗಿದ್ದು, ಚಂದ್ರಕಲಾ ಗಂಭೀರ ಗಾಯಗೊಂಡರು. ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರು ಎಳೆದರು. ಚಂದ್ರಕಲಾ ಅವರ ಪುತ್ರ ಮಧುಸೂದನ (30) ತಲೆ, ಮುಖ ಭಾಗಕ್ಕೆ ಪೆಟ್ಟಾಗಿದೆ. ಗಗನ್‌, ಪವನ್‌ ಸಣ್ಣಪುಟ್ಟಗಾಯದಿಂದ(Injured) ಪಾರಾಗಿದ್ದಾರೆ. ವ್ಯಾಗನಾರ್‌ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದದಾರೆ.

ಬೈಕ್‌ ಬಿದ್ದು ಸವಾರ ಪಾರು

ಮೂಲ್ಕಿ(ದಕ್ಷಿಣ ಕನ್ನಡ): ಮೂಲ್ಕಿ(Mulki)- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೂಲ್ಕಿ ಸಮೀಪದ ಕುಬೆವೂರು ಶಿಮಂತೂರು ದ್ವಾರದ ಬಳಿ ಬೈಕ್‌ ಅಪಘಾತ ಸಂಭವಿಸಿ, ಸವಾರ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ. 

ಯಮನಾಗಿ ಬಂದ ಕಾಂಕ್ರೀಟ್ ಮಿಕ್ಸರ್ ಟ್ರಕ್.. ತಪ್ಪಿಲ್ಲದಿದ್ದರೂ ನವದಂಪತಿ ದುರಂತ ಅಂತ್ಯ

ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ, ಮೂಲತಃ ಉತ್ತರ ಕರ್ನಾಟಕ ಕೂಡಲಸಂಗಮದ ಮುತ್ತು (24) ಮೂಲ್ಕಿ ಸಮೀಪದ ಕೆಂಪುಗುಡ್ಡೆ ಹೇರ್‌ ಕಟ್ಟಿಂಗ್‌ ಶಾಪ್‌ನಲ್ಲಿ ಕೆಲಸಕ್ಕಿದ್ದು ಬೈಕ್‌ನಲ್ಲಿ ಹೋಗುವಾಗ ಕುಬೆವೂರು- ಶಿಮಂತೂರು ದ್ವಾರದ ಬಳಿಯ ತಿರುವಿನಲ್ಲಿ ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಸುಮಾರು 30 ಫೀಟ್‌ ಆಳದಲ್ಲಿ ಗಿಡಗಂಟಿಗಳ ನಡುವಿನ ಚರಂಡಿಯಲ್ಲಿ ಬಿದ್ದಿದೆ. ಬೈಕ್‌ ಸವಾರ ಮುತ್ತು ಜೀವಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತೈಲ ಸಾಗಾಟ ಲಾರಿ ಅಪಘಾತ; ಚಾಲಕ ಪಾರು

ನಾಪೋಕ್ಲು(ಕೊಡಗು): ಮೈಸೂರಿನಿಂದ(Mysuru)ಮಂಗಳೂರಿಗೆ(Mangaluru) ಆಯಿಲ್‌ ಸಾಗಿಸುತ್ತಿದ್ದ ಲಾರಿಯೊಂದು ಮಡಿಕೇರಿ ಸಮೀಪದ ಜೋಡುಪಾಲ ಜಲಪಾತದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ರಸ್ತೆಯಲ್ಲಿ ತೈಲ ಹರಿದಾಡಿದೆ. ಅಪಘಾತದ ರಭಸಕ್ಕೆ ಲಾರಿಯ ಮುಂಭಾಗದ ಎರಡು ಚಕ್ರಗಳು ಹಾರಿ ಹೋಗಿದ್ದು ಚಾಲಕ ಮತ್ತು ಲಾರಿಯ ಕ್ಲೀನರ್‌ ಅಪಾಯದಿಂದ ಪಾರಾಗಿದ್ದಾರೆ.
 

click me!