ಕರ್ನಾಟಕ ಪರಿಸರ ಇಲಾಖೆಗೆ ಸಾಲು ಮರದ ತಿಮ್ಮಕ್ಕ ರಾಯಭಾರಿ: ಆದೇಶ ಹೊರಡಿಸಿದ ಸರ್ಕಾರ

Published : Jul 08, 2022, 02:17 PM IST
ಕರ್ನಾಟಕ  ಪರಿಸರ ಇಲಾಖೆಗೆ ಸಾಲು ಮರದ ತಿಮ್ಮಕ್ಕ ರಾಯಭಾರಿ: ಆದೇಶ ಹೊರಡಿಸಿದ ಸರ್ಕಾರ

ಸಾರಾಂಶ

ಮರಗಳನ್ನು ಬೆಳೆಸಿ ವೃಕ್ಷ ಮಾತೆ ಎಂದು ಖ್ಯಾತಿ ಹೊಂದಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಿದೆ.

ಬೆಂಗಳೂರು (ಜು.08): ಮರಗಳನ್ನು ಬೆಳೆಸಿ ವೃಕ್ಷ ಮಾತೆ ಎಂದು ಖ್ಯಾತಿ ಹೊಂದಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಿದೆ. ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ನವಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಿನ ವನ ಉದ್ಘಾಟನೆಯಾಗಿತ್ತು.

ಸರ್ಕಾರದಿಂದಲೇ ತಿಮ್ಮಕ್ಕಗೆ ಮನೆ ನಿರ್ಮಾಣ: ತಿಮ್ಮಕ್ಕ ಪರಿಸರ ರಾಯಭಾರಿಯಾಗಿರುವುದರಿಂದ ರಾಜ್ಯ, ಅಂತಾರಾಜ್ಯ ಪ್ರವಾಸ ಕೈಗೊಂಡಾಗ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅವರಿಗೆ ಈಗಾಗಲೇ ನೀಡಿರುವ ಬಿಡಿಎ ನಿವೇಶನದಲ್ಲಿ ಸರ್ಕಾರವೇ ಮನೆ ಕಟ್ಟಿಸಿಕೊಡಲಿದೆ. ಜತೆಗೆ ಸರ್ಕಾರ ಹತ್ತು ಎಕರೆ ಜಮೀನು ನೀಡಲಿದೆ ಎಂದು ಪ್ರಕಟಿಸಿಲಾಗಿದೆ. ತಿಮ್ಮಕ್ಕ ಅವರ ಬಗ್ಗೆ ವೆಬ್‌ಸೈಟ್‌ ಮತ್ತು ತಿಮ್ಮಕ್ಕ ಸೇರಿದಂತೆ ರಾಜ್ಯದಲ್ಲಿರುವ ಇಂತಹ ಮಹಾನ್‌ ಸಾಧಕರನ್ನು ಪರಿಚಯಿಸುವ ವೆಬ್‌ ಸೀರಿಸ್‌ ರೂಪಿಸುವಂತೆ ಈಗಾಗಲೇ ವಾರ್ತಾ ಇಲಾಖೆಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಾಲುಮರದ ತಿಮ್ಮಕ್ಕ ಅವರ 111ರ ಜನುಮದಿನದ ಸಂಭ್ರಮ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸಾಧನೆ ಮಾಡಲು ಯಾವುದೇ ಪದವಿ, ನೆರವು, ಅವಕಾಶದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಆಗಬಹುದು ಎಂಬುದಕ್ಕೆ ತಿಮ್ಮಕ್ಕ ನಿದರ್ಶನ. ಅವರು ತಾವೇ ಅವಕಾಶ ಮಾಡಿಕೊಂಡು ಸಾಧನೆ ಮಾಡಿದವರು. ಅವರ ಸಾಧನೆ ಚಿರಸ್ಥಾಯಿ ಆಗಿರುತ್ತದೆ ಎಂದು ತಿಳಿಸಿದ್ದರು. ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವಾಗಬೇಕು. ಅವರ ಬಗ್ಗೆ ಪ್ರಚಾರ ಎಂದರೆ ಅದು ಹಸಿರಿನ ಪ್ರಚಾರ. ಯುವಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು. 

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ, ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ!

ಕಳೆದ ಎರಡು ಸಾವಿರ ವರ್ಷಗಳಲ್ಲಿ ಆಗಿರುವುದಕ್ಕಿಂತ ಕಳೆದ ಇಪ್ಪತ್ತು ವರ್ಷದಲ್ಲಿ ಹೆಚ್ಚು ಮಾಲಿನ್ಯವಾಗಿದೆ. ಮನುಷ್ಯನ ಆಸೆಯಿಂದ ಪರಿಸರ ನಾಶಕ್ಕೆ ಕಾರಣವಾಗಿದೆ. ನಾವು ಇವತ್ತು ಪರಿಸರ ಹಾಳು ಮಾಡಿದರೆ ಮುಂದಿನ ಪೀಳಿಗೆಯ ಆಸ್ತಿ ಕಳ್ಳತನ ಮಾಡಿದಂತೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದರು. ಸರ್ಕಾರ 100 ಕೋಟಿ ರು.ಗಳ ಪರಿಸರ ಬಜೆಟ್‌ ರೂಪಿಸಿದೆ. ಅವಶ್ಯಕತೆ ಬಿದ್ದರೆ ಈ ಬಜೆಟ್‌ನ ಗಾತ್ರವನ್ನು ಇನ್ನಷ್ಟು ಹಿಗ್ಗಿಸಲು ಬದ್ಧರಿದ್ದೇವೆ ಎಂದು ಸಿಎಂ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!