Karnataka Dams water in-flow today: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಹಾಗಾದರೆ ಲಿಂಗನಮಕ್ಕಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಹಾರಂಗಿ, ಕೆಆರ್‌ಎಸ್ ಸೇರಿದಂತೆ ಎಲ್ಲ ಜಲಾಶಯಗಳ ನೀರಿನ ಇಂದಿನ ಮಟ್ಟ ಎಷ್ಟು? ಈ ಕೆಳಗಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು, (ಜುಲೈ.08): ಕರ್ನಾಟಕದ ಹಲವೆಡೆ ಬಿಡದೇ ಮಳೆ ಸುರಿಯುತ್ತಿದ್ದು (Heavy Rain across Karnataka), ರಾಜ್ಯದ ಜನತೆಗೆ ಸಂತೋಶ ಮತ್ತು ದುಖಃ ಎರಡನ್ನೂ ನೀಡುತ್ತಿದೆ. ರಾಜ್ಯದ ಕೆಲ ಭಾಗಗಳಲ್ಲಿ ಅನಾವೃಷ್ಟಿಯಿಂದ ಕಂಗೆಟ್ಟಿದ್ದ ಜನತೆಗೆ ವರುಣ ಸಂತಸ ತಂದರೆ, ಅತೀವೃಷ್ಟಿಯಿಂದ ಹಲವಾರು ಜಿಲ್ಲೆಯ ಜನ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕೊಡುಗು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.
ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಹಳ್ಳ-ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇನ್ನು ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ನದಿಗಳ ಒಳಹರಿವಿನ ಪ್ರಮಾಣ ಪ್ರವಾಹ ಮಟ್ಟದಲ್ಲಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 8) ನೀರಿನ ಮಟ್ಟ ಈ ಕೆಳಗಿನಂತಿದೆ ನೋಡಿ.
ಪ್ರಮುಖ ಜಲಾಶಯ 08-07-2022 ರಂದು ಮಟ್ಟ, ಸಂಗ್ರಹಣೆ, ಹರಿವುಗಳು. pic.twitter.com/70MdRBPKhQ
— KSNDMC (@KarnatakaSNDMC)ಕೆಆರ್‌ಎಸ್ ಜಲಾಶಯ - KRS Dam:
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 36.40 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 27.31 ಟಿಎಂಸಿ
ಇಂದಿನ ಒಳಹರಿವು - 38,858 ಕ್ಯೂಸೆಕ್ಸ್
ಇಂದಿನ ಹೊರಹರಿವು - 3,453 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ - Tungabhadra Dam:
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ - 64.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 35.26 ಟಿಎಂಸಿ
ಇಂದಿನ ಒಳಹರಿವು - 75,843 ಕ್ಯೂಸೆಕ್ಸ್
ಇಂದಿನ ಹೊರಹರಿವು - 434 ಕ್ಯೂಸೆಕ್ಸ್
ಕಬಿನಿ ಜಲಾಶಯ-Kabini Dam:
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 16.49 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 14.71 ಟಿಎಂಸಿ
ಇಂದಿನ ಒಳಹರಿವು - 17,353 ಕ್ಯೂಸೆಕ್ಸ್
ಇಂದಿನ ಹೊರಹರಿವು - 2,875 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ-Almatti Dam:
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 63.84 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 90.33 ಟಿಎಂಸಿ
ಇಂದಿನ ಒಳಹರಿವು- 75,207 ಕ್ಯೂಸೆಕ್ಸ್
ಇಂದಿನ ಹೊರಹರಿವು - 451 ಕ್ಯೂಸೆಕ್ಸ್
ಇದನ್ನೂ ಓದಿ: ನದಿನೀರಿನಲ್ಲಿ ಕೊಚ್ಚಿ ಹೋದ ಕಾರು, 9 ಮಂದಿ ಸಾವು!
ಭದ್ರಾ ಜಲಾಶಯ-Bhadra Dam:
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 49.07 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 39.01 ಟಿಎಂಸಿ
ಇಂದಿನ ಒಳಹರಿವು- 29,942 ಕ್ಯೂಸೆಕ್ಸ್
ಇಂದಿನ ಹೊರಹರಿವು - 143 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ-Ghataprabha Dam:
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 8.98 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 25.06 ಟಿಎಂಸಿ
ಇಂದಿನ ಒಳಹರಿವು - 14,608 ಕ್ಯೂಸೆಕ್ಸ್
ಇಂದಿನ ಹೊರಹರಿವು - 100 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ-Malaprabha Dam:
ಗರಿಷ್ಠ ಮಟ್ಟ- 633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 12.90 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.18 ಟಿಎಂಸಿ
ಇಂದಿನ ಒಳಹರಿವು - 4,881 ಕ್ಯೂಸೆಕ್ಸ್
ಇಂದಿನ ಹೊರಹರಿವು - 194 ಕ್ಯೂಸೆಕ್ಸ್
ಹೇಮಾವತಿ ಜಲಾಶಯ-Hemavathi Dam:
ಗರಿಷ್ಠ ಮಟ್ಟ - 2,922 ಅಡಿ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 31.06 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 17.49 ಟಿಎಂಸಿ
ಇಂದಿನ ಒಳಹರಿವು - 18,221 ಕ್ಯೂಸೆಕ್ಸ್
ಇಂದಿನ ಹೊರಹರಿವು - 250 ಕ್ಯೂಸೆಕ್ಸ್
ವರಾಹಿ ಜಲಾಶಯ-Varahi Dam:
ಗರಿಷ್ಠ ಮಟ್ಟ - 594.36 ಮೀಟರ್
ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 6.43 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.40 ಟಿಎಂಸಿ
ಇಂದಿನ ಒಳಹರಿವು - 8,288 ಕ್ಯೂಸೆಕ್ಸ್
ಇಂದಿನ ಹೊರಹರಿವು - 0 ಕ್ಯೂಸೆಕ್ಸ್
ಇದನ್ನೂ ಓದಿ: ನೋಡುಗರ ಕಣ್ಮನ ಸೆಳೆಯುತ್ತಿವೆ ನಯನಮನೋಹರ ಜಲಪಾತಗಳು
ಹಾರಂಗಿ ಜಲಾಶಯ-Harangi Dam:
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 4.46 ಟಿಎಂಸಿ
ಇಂದಿನ ಒಳಹರಿವು - 13,317 ಕ್ಯೂಸೆಕ್ಸ್
ಇಂದಿನ ಹೊರಹರಿವು - 12,567 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ-Linganamakki Dam:
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 540.26 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 543.72 ಟಿಎಂಸಿ
ಇಂದಿನ ಒಳಹರಿವು - 56,645 ಕ್ಯೂಸೆಕ್ಸ್
ಇಂದಿನ ಹೊರಹರಿವು - 284 ಕ್ಯೂಸೆಕ್ಸ್
ಸೂಪಾ ಜಲಾಶಯ-Supa Dam:
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 31.53 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 56.8 ಟಿಎಂಸಿ
ಇಂದಿನ ಒಳಹರಿವು - 28,526 ಕ್ಯೂಸೆಕ್ಸ್
ಇಂದಿನ ಹೊರಹರಿವು - 0 ಕ್ಯೂಸೆಕ್ಸ್
ಇದನ್ನೂ ಓದಿ: Karnataka Rain Live Updates: ಭೀಕರ ಮಳೆಗೆ ಜನಜೀವನ ತತ್ತರ, ಬೆಳಕಿಗೆ ಬರುತ್ತಿದೆ ಸರ್ಕಾರದ ತಾತ್ಸಾರ
ನಾರಾಯಣಪುರ ಜಲಾಶಯ Narayanapura Dam:
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.96 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 26.58 ಟಿಎಂಸಿ
ಇಂದಿನ ಒಳಹರಿವು - 700 ಕ್ಯೂಸೆಕ್ಸ್
ಇಂದಿನ ಹೊರಹರಿವು - 236 ಕ್ಯೂಸೆಕ್ಸ್