ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ನಂತರ ಅಯೋಧ್ಯೆಗೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಮೂಲಕ ಅಯೋಧ್ಯೆಗೆ ವಿಶೇಷ ರೈಲು ಓಡಿಸಲು ಸಂಸದ ಜಿ.ಎಂ.ಸಿದ್ದೇಶ್ವರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷೆ ಜಯವರ್ಮ ಸಿನ್ಹಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ದಾವಣಗೆರೆ (ಜ.28): ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ನಂತರ ಅಯೋಧ್ಯೆಗೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಮೂಲಕ ಅಯೋಧ್ಯೆಗೆ ವಿಶೇಷ ರೈಲು ಓಡಿಸಲು ಸಂಸದ ಜಿ.ಎಂ.ಸಿದ್ದೇಶ್ವರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷೆ ಜಯವರ್ಮ ಸಿನ್ಹಾರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ರಾಜ್ಯದಿಂದ ಈಗಾಗಲೇ ಘೋಷಿಸಿರುವ ಅಯೋಧ್ಯೆ ವಿಶೇಷ ರೈಲುಗಳು ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ ಹಾಗೂ ಬೆಂಗಳೂರು, ಮೈಸೂರು ಕಡೆಯಿಂದ ಹೊರಡುವ ರೈಲುಗಳು ಚಿತ್ರದುರ್ಗದವರೆಗೆ ಬಂದು ಚಿತ್ರದುರ್ಗ-ರಾಯದುರ್ಗ ಮುಖಾಂತರ ಹೊಸಪೇಟೆ ತಲುಪಿ ಅಲ್ಲಿಂದ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಲಿವೆ.
ಮಧ್ಯ ಕರ್ನಾಟಕದಲ್ಲಿರುವ ದಾವಣಗೆರೆ ಮೂಲಕ ವಿಶೇಷ ರೈಲುಗಳು ಇಲ್ಲದಿರುವುದರಿಂದ ಈ ಭಾಗದ ಭಕ್ತರಿಗೆ ಅನಾನುಕೂಲವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಬೆಂಗಳೂರು ಅಥವಾ ಮೈಸೂರು ಕಡೆಯಿಂದ ಹೊರಡುವ ವಿಶೇಷ ರೈಲುಗಳು ಅರಸೀಕರೆ-ಚಿಕ್ಕಜಾಜೂರು-ದಾವಣಗೆರೆ-ಹರಪನಹಳ್ಳಿ-ಕೊಟ್ಟೂರು ಮೂಲಕ ಹೊಸಪೇಟೆ ತಲುಪಿ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಬಹುದು ಎಂದು ಸಂಸದ ಸಿದ್ದೇಶ್ವರ ರೈಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ.
undefined
ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ: ಸಚಿವ ಜಮೀರ್ ಅಹಮದ್ ಖಾನ್
ರಾಮಮಂದಿರದಲ್ಲಿ ಬಿಜೆಪಿ ಪಾತ್ರ ಜನರಿಗೆ ಗೊತ್ತು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಫಲವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದು, ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಪಾತ್ರ ಏನಿತ್ತು, ಅದರ ಶ್ರಮ ಎಷ್ಟೆಂದು ದೇಶವಾಸಿಗಳಿಗೆ ಗೊತ್ತಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿಪಕ್ಷ ಕಾಂಗ್ರೆಸ್ ಮುಖಂಡರ ಟೀಕೆಗಳಿಗೆ ತಿರುಗೇಟು ನೀಡಿದರು. ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಜ.14ರಿಂದ 22ರವರೆಗೆ ಧಾರ್ಮಿಕ ಕೇಂದ್ರಗಳ ಬಳಿ ಸ್ವಚ್ಛತಾ ಆಂದೋಲನದ ಭಾಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದರು.
ಜಗದೀಶ್ ಶೆಟ್ಟರ್‌ಗೆ ವಯಸ್ಸಾಗಿದೆ, ಪಾಪ ಅವರ ಬಗ್ಗೆ ಏಕೆ ಮಾತನಾಡಬೇಕು: ಸಚಿವ ಮಂಕಾಳು ವೈದ್ಯ
ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದು, ಯಾರು ಹೋರಾಟ ಮಾಡಿದ್ದಾರೋ ಅಂತಹವರಿಗೆ ಫಲ ಸಿಕ್ಕೇ ಸಿಗುತ್ತದೆ ಎಂದರು. ರಾಮ ಮಂದಿರ ನಿರ್ಮಾಣ ಯಾರು ವಿರೋಧಿಸಿದ್ದರೋ, ಯಾರು ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದ್ದರೋ, ಯಾರು ಶ್ರೀರಾಮ ಕೇವಲ ಕಾಲ್ಪನಿಕ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದರೋ ಅಂತಹವರಿಗೂ ಫಲ ಸಿಕ್ಕೇ ಸಿಗುತ್ತದೆ. ಆದರೆ, ಆ ಫಲ ಯಾವ ರೀತಿಯದ್ದು ಎಂಬುದನ್ನು ಕಾಲ ನಿರ್ದರಿಸಲಿದೆ. ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಅಖಂಡ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ ಎಂದು ತಿಳಿಸಿದರು.