ಬೀದರ್ ಪೊಲೀಸ್ ಇಲಾಖೆಯಿಂದ 'ರನ್ ಫಾರ್ ರೋಡ್ ಸೇಫ್ಟಿ' ಅಭಿಯಾನ

Published : Aug 26, 2023, 07:35 PM IST
ಬೀದರ್ ಪೊಲೀಸ್ ಇಲಾಖೆಯಿಂದ 'ರನ್ ಫಾರ್ ರೋಡ್ ಸೇಫ್ಟಿ' ಅಭಿಯಾನ

ಸಾರಾಂಶ

ಟ್ರಾಫಿಕ್ ನಿಯಮಗಳ ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ ಇಲಾಖೆಯಿಂದ ರನ್ ಫಾರ್ ಸೇಫ್ಟಿ ಅಭಿಯಾನ ನಾಳೆ ನಡೆಯಲಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.

ವರದಿ:- ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೀದರ್ (ಆ.26) : ಟ್ರಾಫಿಕ್ ನಿಯಮಗಳ ಕುರಿತು ಅರಿವು ಮೂಡಿಸಲು ಬೀದರ್ ಪೊಲೀಸ್ ಇಲಾಖೆಯಿಂದ ರನ್ ಫಾರ್ ಸೇಫ್ಟಿ ಅಭಿಯಾನ ನಾಳೆ ನಡೆಯಲಿದೆ. ನಗರದ ಕೋಟೆ ಆವರಣದಿಂದ ಪ್ರಾರಂಭ ಆಗಲಿರುವ ಓಟ ಸಿದ್ದಾರ್ಥ ಕಾಲೇಜ್, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಕ್ಲಾಸಿಕ ದಾಬಾ, ಹೆಣ್ಣು ಮಗು ವೃತ್ತ, ಕೆಇಬಿ ಕಚೇರಿ, ಗುದುಗೆ ಆಸ್ಪತ್ರೆ, ಹರಳಯ್ಯಾ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರ, ಗವಾನ ಚೌಕ್ ಮೂಲಕ ವಾಪಸ ಕೋಟೆಗೆ ಬಂದು ತಲುಪಲಿದೆ.

 2.5 ಕಿಮಿ, 5 ಕಿಮಿ ಮತ್ತು 10 ಕಿಮಿಗಳ ಓಟ ಪೊಲೀಸ್ ಇಲಾಖೆ(Bidar police department) ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆ.27 ರಂದು  ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮ್ಯಾರಥಾನ್ (Run for sefty) ಕಾರ್ಯಕ್ರಮ ನಡೆಯಲಿದೆ. ಈ ಮ್ಯಾರಥಾನ್‍ದಲ್ಲಿ ಸುಮಾರು 5000 ಜನರು ಭಾಗವಹಿಸುವ ಸಂಭವ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದ್ದಾರೆ.

 

ವ್ಹೀಲಿಂಗ್‌ ಹಾವಳಿಗೆ ಬ್ರೇಕ್‌ ಹಾಕಿ: ಅಲೋಕ್‌ ಕುಮಾರ್‌ ಸೂಚನೆ

 ಒಂದೇ ವರ್ಷದಲ್ಲಿ 332 ಸಾವು 

ಬೀದರ್ ಜಿಲ್ಲೆಯಾದ್ಯಂತ 2022ರ ವರ್ಷದಲ್ಲಿ ನಡೆದ ಅಪಘಾತಗಲ್ಲಿ ಹೆಲ್ಮೆಟ್ ಬೈಕ್ ಸವಾರಿ ಮಾಡಿದ 332 ಜನ ಸಾವನಪ್ಪಿದಾರೆಂದು ಎಸ್ಪಿ ಅವರು‌ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 198ಕ್ಕೂ ಹೆಚ್ಚು ಮಂದಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿ ಮೃತಪಟ್ಟಿದಾರೆಂದು ಮಾಹಿತಿ ನೀಡಿದಾರೆ. ಹೀಗಾಗಿ  ಬೀದರ್ ಜನರಿಗೆ ಹೆಲ್ಮೆಟ್ ಮತ್ತು ಟ್ರಾಫಿಕ್ ನಿಯಮದ ಮಹತ್ವ, ಅರಿವು ಮೂಡಿಸುವ ಸಲುವಾಗಿ  ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ,. ಖಾಸಗಿ ಸಂಸ್ಥೆಗಳು ಈ ಅಭಿಯಾನದ ಜೊತೆ ಕೈಜೋಡಿಸಿದಾರೆಂದು ಬೀದರ್ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಹೇಳಿದರು.

ರಸ್ತೆ ಸುರಕ್ಷಾ ಅಭಿಯಾನ ಹಿನ್ನೆಲೆ ಮಾರ್ಗ ಬದಲಾವಣೆ

ರಸ್ತೆ ಸುರಕ್ಷಾ ಅಭಿಯಾನ 2023(Road Safety Campaign 2023)ರ ಅಂಗವಾಗಿ ಆಯೋಜಿಸಿದ ಈ ಓಟದಲ್ಲಿ ಯಾವುದೇ ಅಡಿಯಾಗದಂತೆ ಸಾರ್ವಜನಿಕ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಹೈದರಾಬಾದ್ ನಿಂದ ಬೀದರ್ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ಗುಂಪಾ ರಿಂಗ್ ರೋಡ್ ಮೂಲಕ ಹಳೆ ಆರ್ಟಿಒ ಕಚೇರಿಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಮತ್ತು ಔರಾದ್ ನಿಂದ ಬೀದರ್ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ಗುರುದ್ವಾರ ಗೇಟ್ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ಬರಲು ಮಾರ್ಗ ಬದಲಾಯಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರಸ್ತೆ ಸುರಕ್ಷತೆ ಕಾಯ್ದೆ ವ್ಯಾಪ್ತಿಗೆ ಬಿಬಿಎಂಪಿ: ಮಸೂದೆ ಮಂಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ