ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದರ್ಥ: ಕೆ.ಎಸ್. ಭಗವಾನ್‌ ಟೀಕೆ

By Sathish Kumar KH  |  First Published Aug 17, 2023, 4:14 PM IST

ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘವಲ್ಲ‌. ಆರ್‌ಎಸ್‌ಎಸ್‌ ಎಂದರೆ ಬರೀ ಸುಳ್ಳನ್ನೇ ಪ್ರಚಾರ ಮಾಡುವ ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿದೆ.


ಮೈಸೂರು (ಆ.17): ದೇಶದಲ್ಲಿ ಸಂಘಟನೆಗೆ ಪ್ರಸಿದ್ಧವಾಗಿರುವ ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘವಲ್ಲ‌. ಆರ್‌ಎಸ್‌ಎಸ್‌ ಎಂದರೆ ಬರೀ ಸುಳ್ಳನ್ನೇ ಪ್ರಚಾರ ಮಾಡುವ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರೊಫೆಸರ್ ಕೆ.ಎಸ್. ಭಗವಾನ್ ಹೇಳಿದ್ದಾರೆ.

ಮೈಸೂರಿನಲ್ಲಿ ಗುರುವಾರ ಮಹಿಷ ದಸರಾ ಆಚರಣೆ ಸಮಿತಿಯಿಂದ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘವಲ್ಲ‌. ಅದರ ಬದಲಾಗಿ ಅದು ರಾಷ್ಟ್ರೀಯ ಸುಳ್ಳುಗಾರರ ಸಂಘ. ಬರೀ ಸುಳ್ಳನ್ನೇ ಪ್ರಚಾರ ಮಾಡುವ ಸಂಘ ಆರ್‌ಎಸ್‌ಎಸ್‌ ಆಗಿದೆ ಎಂದು ವಾಗ್ದಾಳಿ ನಡೆಸಿದರು.

Latest Videos

undefined

ಇದಕ್ಕಿಂತ ಮೊದಲು ಮಾತನಾಡಿದ ಪ್ರೊಫೆಸರ್ ಮಹೇಶ್ ಚಂದ್ರಗುರು  ಅವರು, ರಾಜ್ಯದಲ್ಲಿ ಹಿಂದುತ್ವ ವಾದಿಗಳು ಮಹಿಷ ದಸರಾ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದವರು ಸೃಷ್ಟಿ ಮಾಡುವ ಸುಳ್ಳಿನ ಸರಮಾಲೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಷ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಹಿಷ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗುಲ್ಬರ್ಗ, ಮೈಸೂರು, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಲ್ಲಿ ಮಹಿಷ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು. 

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌: ಹಲಸೂರು ಗೇಟ್‌ ಠಾಣೆಯ ಎಫ್‌ಐಆರ್‌ಗೂ ತಡೆಕೊಟ್ಟ ಹೈಕೋರ್ಟ್‌

ಇನ್ನು ಮಹಿಷ ಬೌದ್ಧನಾಗಿದ್ದಾನೆ‌. ಹೀಗಾಗಿ ಮಹಿಷ ಬೌದ್ಧ ದಸರಾವನ್ನು ಆಚರಿಸುತ್ತೇವೆ‌. ಈ ಮೂಲಕ ವಿರೋಧಿಸುವವರಿಗೆ ತಕ್ಕ ಉತ್ತರ ಕೊಡುತ್ತೇವೆ. ಸಂಸದ ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ ಆಗಿದ್ದಾರೆ. ನಾವು ಮನವತಾ ವಾದಿಗಳು. ಮನವತಾವಾದಿಗಳಾಗಿರುವ ನಮ್ಮ ಮುಂದೆ ಕಟ್ಟರ್ ಹಿಂದುತ್ವ ವಾದಿ ಪ್ರತಾಪ್ ಸಿಂಹ ಆಟ ನಡೆಯುವುದಿಲ್ಲ. ರಾಜ್ಯದಲ್ಲಿರುವುದು ಅಹಿಂದ ಪರವಾದ ಸರ್ಕಾರವಲ್ಲ, ಇದು ಮೇಲ್ವರ್ಗದ ಪರವಾದ ಸರ್ಕಾರ ಎಂದು ಟೀಕೆ ಮಾಡಿದರು.

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಮೇಲ್ವರ್ಗದವರ ಪರವಾಗಿದೆ:  ರಾಜ್ಯದಲ್ಲಿ ಅಹಿಂದ ಹೆಸರಿನಲ್ಲಿ ಈ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೂ ಆಳುವವರು ಮೇಲ್ವರ್ಗದವರೇ ಆಗಿದ್ದಾರೆ. ದಲಿತರ ಅಭಿವೃದ್ಧಿ ಇವರಿಂದ ಸಾಧ್ಯವಿಲ್ಲ. ಪರಮೇಶ್ವರ್ ದಲಿತರಿಗಾಗಿ ಎಂದೂ ಕೂಡ ಧ್ವನಿ ಎತ್ತಿಲ್ಲ. ಡಾ ಜಿ ಪರಮೇಶ್ವರ್ ಒಬ್ಬ ಅವಕಾಶವಾದಿ, ಅವರ  ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವವರು. ಇವರಿಂದ ದಲಿತರ ಉದ್ದಾರ ಸಾಧ್ಯವಿಲ್ಲ. ಗೃಹ ಸಚಿವರಾಗಿದ್ದರೂ ದಲಿತರ ಸಮಸ್ಯೆಗೆ ಸ್ಪಂದಿಸಿಲ್ಲ. ಇಂತವರು ಸಿಎಂ ಆದರೂ ಸ್ಪಂದಿಸುವ ನಿರೀಕ್ಷೆಯಿಲ್ಲ ಎಂದು ಪ್ರೊಫೆಸರ್ ಮಹೇಶ್ ಚಂದ್ರಗುರು ಹೇಳಿದರು.

ಸಿದ್ದರಾಮಯ್ಯ ಸ್ವಜಾತಿ ಪ್ರೇಮದಿಂದ ಪ್ರತಾಪ್ ಸಿಂಹ ಗೆಲುವು: ಇನ್ನು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ವಜಾತಿ ಪ್ರೇಮದಿಂದ ಪ್ರತಾಪ್ ಸಿಂಹ ಗೆದಿದ್ದಾರೆ. ಪ್ರತಾಪ್ ಸಿಂಹ ನನ್ನ ವಿದ್ಯಾರ್ಥಿ ಅವನು ಕಟ್ಟರ್ ಹಿಂದುವಾದಿ. ನಾನು ಕಟ್ಟರ್ ಮಾನವಾತವಾದಿ. ಸ್ವಜಾತಿ ಪ್ರೇಮದಿಂದ ವಿಜಯ್ ಶಂಕರ್, ವಿಶ್ವನಾಥ್ ಗೆ ಟಿಕೆಟ್ ಕೊಟ್ಟರು. ಗೌಡರೆಲ್ಲ ಪ್ರತಾಪ್ ಸಿಂಹನಿಗೆ ವೋಟ್ ಹಾಕಿದ್ದಾರೆ. ನಾನು ಸಿದ್ದರಾಮಯ್ಯಗೆ ವೀರಶೈವ ಲಿಂಗಾಯತರಿಗೆ ಇಲ್ಲವೇ ಗೌಡರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆನು. ಆವಾಗ ನನ್ನ ಮಾತು ಕೇಳಿದ್ದರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ ಎಂದು ಪ್ರೊ. ಮಹೇಶ್ ಚಂದ್ರ ಗುರು ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ತಿವಿದರು.

ನಾನು ಯಾವುದೇ ಪಕ್ಷಕ್ಕೆ ಸೇರಿ​ದ​ವ​ನ​ಲ್ಲ: ಹರೇ​ಕಳ ಹಾಜಬ್ಬ ಸ್ಪಷ್ಟ​ನೆ ನಾನು ಯಾವುದೇ ಪಕ್ಷಕ್ಕೆ ಸೇರಿ​ದ​ವ​ನ​ಲ್ಲ: ಹರೇ​ಕಳ ಹಾಜಬ್ಬ ಸ್ಪಷ್ಟ​ನೆ

ಮಹಿಷನ ಮಾಹಿತಿ ಸುಳ್ಳೆಂದು ಸಾಬೀತಾದರೆ ಎಂದೂ ಮಹಿಷ ದಸರಾ ಮಾಡೊಲ್ಲ: ಈ ಬಾರಿ ಮಹಿಷ ದಸರಾ ಆಚರಣೆಗೂ ಒಂದು ತಿಂಗಳು ಮೊದಲು ವಿಚಾರ ಸಂಕಿರಣ ಆಯೋಜಿಸಲಾಗುತ್ತದೆ. ಸದ್ಯದಲ್ಲೇ ಸ್ಥಳ ಹಾಗು ದಿನಾಂಕ ಘೋಷಣೆ ಮಾಡಲಾಗುವುದು. ದಸರಾ ವಿರುದ್ಧ, ಚಾಮುಂಡಿ ವಿರುದ್ಧ ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ. ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ವಿಚಾರ ಸಂಕಿರಣದಲ್ಲಿ ಎಲ್ಲ ವಿಚಾರಗಳನ್ನು ಮುಂದಿಡುತ್ತೇವೆ. ನಾವು ನೀಡುವ ಮಾಹಿತಿಗಳು ಸುಳ್ಳು ಎಂದು ಸಾಬೀತಾದರೆ ಇನ್ನೆಂದೂ ಮಹಿಷ ದಸರಾ ಆಚರಣೆ ಮಾಡುವುದಿಲ್ಲ. ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸುತ್ತಿರುವ ಸಂಸದ ಪ್ರತಾಪ್ ಸಿಂಹರ ರಾಜಕೀಯ ಭವಿಷ್ಯ 2024ರ ಲೋಕಸಭಾ ಚುನಾವಣೆಯಲ್ಲಿ ಕೊನೆಯಾಗಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು. 

click me!