
ಬೆಂಗಳೂರು(ಅ.13): ನೋಡಿ ಆರ್‌ಎಸ್‌ಎಸ್ ಒಂದು ಪೊಲಿಟಿಕಲ್ ಸಂಸ್ಥೆ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಅಂತ ಅವರು ಏನಾದ್ರೂ ಹೇಳಿಕೊಳ್ಳಬಹುದು. ಅದು ನೇರವಾಗಿ ರಾಜಕೀಯದಲ್ಲಿ ಭಾಗಿಯಾಗಿರೋದು ಗೊತ್ತಿದೆ. ಅದರ ಬಗ್ಗೆ ಸಾರ್ವಜನಿಕರಿಗೂ ಕೂಡ ಗೊತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಟೀಕಿಸಿದರು
ಆರೆಸ್ಸೆಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿರುವುದನ್ನ ಸಮರ್ಥಿಸಿಕೊಂಡ ಸಚಿವರು,ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಉಪಯೋಗಿಸೋದು ಸರಿಯಲ್ಲ. ಖಾಸಗಿ ಜಾಗದಲ್ಲಿ ಬೇಕಾದರೆ ಅವರು ಉಪಯೋಗ ಮಾಡಿಕೊಳ್ಳಲಿ. ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಮಾಡಕ್ಕೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರವು ಕೂಡ ಅಧಿಕಾರಿಗಳಿಗೆ ಆರ್‌ಎಸ್ಎಸ್ ಸದಸ್ಯ ಆಗೋದಕ್ಕೆ ಅವಕಾಶ ಕೊಡಬಾರದು.
ಇದನ್ನೂ ಓದಿ: ನಾನು ಹಿಂದೂ ವಿರೋಧಿಯಲ್ಲ, ಆರೆಸ್ಸೆಸ್ ವಿರೋಧಿ: ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ
ಅರೆಸ್ಸೆಸ್ ಬಜರಂಗದಳ ಎಬಿವಿಪಿ ಎಲ್ಲವೂ ರಾಜಕೀಯ ಸಂಸ್ಥೆಗಳು:
ಆರ್‌ಎಸ್‌ಎಸ್, ಬಿಜೆಪಿ, ಭಜರಂಗದಳ, ಎಬಿವಿಪಿ ಎಲ್ಲವೂ ರಾಜಕೀಯ ಸಂಸ್ಥೆಗಳು. ಇವು ಸರ್ಕಾರ ಬದಲಾವಣೆ, ಸಚಿವರ ನೇಮಕಾತಿಯಂತಹ ರಾಜಕೀಯ ಕಾರ್ಯಗಳಲ್ಲಿ ನೇರವಾಗಿ ಭಾಗಿಯಾಗುತ್ತವೆ. ಇದರ ಬಗ್ಗೆ ಸಾರ್ವಜನಿಕರಿಗೂ ಗೊತ್ತಿದೆ. ಇಂತಹ ಸಂಘಟನೆಗಳು ಸರ್ಕಾರಿ ಜಾಗಗಳಾದ ಶಾಲೆ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ಆರ್‌ಎಸ್‌ಎಸ್ ಸದಸ್ಯತ್ವಕ್ಕೆ ಅವಕಾಶ ನೀಡಿರುವುದು ಕೂಡ ದೊಡ್ಡ ತಪ್ಪು. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ಆರೆಸ್ಸೆಸ್ ಒಂದು ಪ್ಯಾಸಿಸ್ಟ್ ಸಂಸ್ಥೆ:
ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶದಲ್ಲಿ ದ್ವೇಷ ಮತ್ತು ಕೋಮುಗಲಭೆಯನ್ನು ಉಂಟುಮಾಡುತ್ತವೆ ಎಂದು ಆರೋಪಿಸಿರುವ ಸಚಿವರು, ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ತ್ಯಾಗ ಮಾಡಿಲ್ಲ. ಇವರ ಸಿದ್ಧಾಂತವೆಂದರೆ ಹಿಂದುತ್ವದ ಹೆಸರಿನಲ್ಲಿ ದ್ವೇಷ ಬಿತ್ತುವುದು. ದೇಶದ ಧ್ವಜವನ್ನೇ ಇವರು ಹಾರಿಸಲಿಲ್ಲ. ಇದೊಂದು ಫ್ಯಾಸಿಸ್ಟ್ ಸಂಸ್ಥೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್ ತನ್ನ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುತ್ತಿದೆ. ಇದು ಬಹುಮುಖಿ ಸಂಸ್ಕೃತಿಗೆ ವಿರುದ್ಧವಾಗಿದೆ. ಅಂತರ್‌ಜಾತಿ ವಿವಾಹಗಳಿಗೂ ಇವರು ವಿರೋಧಿಗಳಾಗಿದ್ದಾರೆ. ಇಂತಹ ಸಂಸ್ಥೆಗೆ ಸರ್ಕಾರಿ ಅವಕಾಶಗಳನ್ನು ನೀಡುವುದು ತಪ್ಪು. ಇದಕ್ಕೆ ಕ್ಯಾಬಿನೆಟ್ ನಿರ್ಧಾರದ ಅಗತ್ಯವಿಲ್ಲ, ಆಡಳಿತಾತ್ಮಕ ಕ್ರಮ ಸಾಕು ಎಂದರು.
ಇದನ್ನೂ ಓದಿ: ಆರ್‌ಎಸ್‌ಎಸ್ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಬಸನಗೌಡ ಯತ್ನಾಳ ಕಿಡಿ
ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮುಂದಿನ ಕ್ರಮಗಳು ಏನಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ