ಜೆಡಿಎಸ್ ನಾಯಕಿ, ದೊಡ್ಡ ಗೌಡರ ಸೊಸೆ ಭವಾನಿ ರೇವಣ್ಣ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ತಮ್ಮ 1.5 ಕೋಟಿ ರೂ ಕಾರಿಗೆ ಬೈಕ್ ಡಿಕ್ಕಿಯಾದ ಬೆನ್ನಲ್ಲೇ ಸಾಯಲು ನನ್ನ ಕಾರೇ ಬೇಕಿತ್ತಾ ಎಂದು ದರ್ಪದ ಮಾತುಗಳನ್ನಾಡಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದರೆ. ಅಷ್ಟಕ್ಕೂ ಭವಾನಿ ರೇವಣ್ಣ ತಮ್ಮ ವೆಲ್‌ಫೈರ್ ಕಾರಿಗೆ ಆಗಿರುವ ಸಣ್ಣ ಸ್ಕ್ರಾಚ್‌ಗೆ ಇಷ್ಟೊಂದು ಉರಿದುಬೀಳಲು ಕಾರಣವಿದೆ.
ಹಾಸನ(ಡಿ.04) ಸಾಯೋಕೆ ನನ್ನ 1.5 ಕೋಟಿ ರೂಪಾಯಿ ಕಾರೇ ಬೇಕಿತ್ತಾ? ಯಾವಾದಾದರೂ ಬಸ್ ಇರಲಿಲ್ವೇ? ಆ ಬೈಕ್ ಸುಟ್ಟು ಹಾಕಿ ಎಂಬ ದರ್ಪದ ಮಾತುಗಳನ್ನಾಡಿರುವ ಶಾಸಕ ಹೆಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ಒಂದೂವರೆ ಕೋಟಿ ಕಾರ್ ಎಂದು ಟ್ರೋಲ್ ಆಗಿದ್ದಾರೆ. ಇದೇ ವೇಳೆ ಭವಾನಿ ರೇವಣ್ಣ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಭವಾನಿ ರೇವಣ್ಣ ಡಿಸೆಂಬರ್ 3 ರಂದು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ತೆರಳುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಭವಾನಿ ರೇವಣ್ಣ ತಮ್ಮ ಟೊಯೋಟಾ ವೆಲ್‌ಫೈರ್ ಕಾರಿನಲ್ಲಿ ಸಂಚರಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಘಟನೆಗೆ ರಾಂಗ್ ಸೈಡ್‌ನಿಂದ ಬೈಕ್ ಬೈಕ್ ಸವಾರನೆ ಕಾರಣ. ಆದರೆ ಬೈಕ್ ಡಿಕ್ಕಿಯಾದ ಬೆನ್ನಲ್ಲೇ ಕಾರಿನಿಂದ ಇಳಿದ ಭವಾನಿ ರೇವಣ್ಣ ತಮ್ಮ ಎಲ್ಲಾ ಆಕ್ರೋಶ ಹೊರಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ.
ತಮ್ಮ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್‌ನಿಂದ ಭವಾನಿ ರೇವಣ್ಣ ಉರಿದು ಬಿದ್ದಿದ್ದಾರೆ. ಮಾನವೀಯತೆ ಮರೆತ ಭವಾನಿ ರೇವಣ್ಣ, ಸಾಯಲು ನನ್ನ 1.5 ಕೋಟಿ ರೂಪಾಯಿ ಕಾರೇ ಬೇಕಿತ್ತಾ? ಬಸ್ ಚಕ್ರಕ್ಕೆ ಸಿಕ್ಕಿ ಸಾಯಬೇಕಿತ್ತು ಎಂದು ದರ್ಪದಿಂದ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಸ್ಥಳೀಯರು ಬಿಟ್ಟು ಬಿಡಿ ಮೇಡಂ ಎಂದಿದ್ದಾರೆ. ಮತ್ತೆ ಉರಿದುಬಿದ್ದ ಭವಾನಿ ಎಲ್ಲರ ಮೇಲೂ ರೇಗಿದ್ದಾರೆ.
Idu Actually chennagirodu 😂🙌 pic.twitter.com/ukiutgg1Tj
— Veena Jain (@DrJain21)
ಭವಾನಿ ರೇವಣ್ಣ ಈ ಪಾಟಿ ಉರಿದು ಬೀಳಲು ಮುಖ್ಯ ಕಾರಣ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್. ಭವಾನಿ ರೇವಣ್ಣ ಅವರ ಟೋಯೋಟಾ ವೆಲ್‌ಫೈರ್ ಕಾರಿನ ಎಕ್ಸ್ ಶೋ ರೂಂ ಬೆಲೆ 1.2 ಕೋಟಿ ರೂಪಾಯಿ. ಆನ್ ರೋಡ್ ಬೆಲೆ 1.5 ಕೋಟಿ ರೂಪಾಯಿಗೂ ಹೆಚ್ಚು. ಈಗ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್ ಸರಿಪಡಿಸಲು ಲಕ್ಷ ರೂಪಾಯಿ ಖರ್ಚಿದೆ. ಕಾರಣ ಟೋಯೋಟಾ ವೆಲ್‌ಫೈರ್ ದುಬಾರಿ ಕಾರು. ಇದರ ನಿರ್ವಹಣೆ ಕೂಡ ಅಷ್ಟೇ ದುಬಾರಿ.
ಈ ದುಬಾರಿ ಕಾರಿಗೆ ಆಗಿರುವ ಸ್ಕ್ರಾಚ್ ಹಾಗೂ ಡೆಂಟ್‌ನ್ನು ವಿಮೆ ಮೂಲಕ ಸರಿಪಡಿಸಲು ಸಾಧ್ಯವಿದೆ. ಕಾರಿನ ರಿಪೇರಿಗೆ ತಗಲುವು ವೆಚ್ಚ ಸಂಪೂರ್ಣವಾಗಿ ವಿಮೆಯಲ್ಲಿ ಸಿಗಲಿದೆ. ಆದರೆ ಇಲ್ಲೊಂದು ತಾಂತ್ರಿಕ ಸಮಸ್ಯೆ ಇದೆ. ವಿಮೆ ಕ್ಲೈಮ್ ಮಾಡಿದರೆ ಕಾರಿನ ಹಿಸ್ಟರಿಯಲ್ಲಿ ಅಪಘಾತ ಅನ್ನೋದು ದಾಖಲಾಗಲಿದೆ. ಇದರಿಂದ ಈ ಕಾರನ್ನು ಮರು ಮಾರಾಟ ಮಾಡುವಾಗ ಬೆಲೆ ಮತ್ತಷ್ಟು ಕುಸಿತಗೊಳ್ಳಲಿದೆ. ಸಾಮಾನ್ಯವಾಗಿ ದುಬಾರಿ ಕಾರುಗಳ ಮರು ಮಾರಾಟ(ಸೆಕೆಂಡ್ ಹ್ಯಾಂಡ್ ಕಾರು)ದರ ಅತ್ಯಂತ ಕಡಿಮೆ. ಈ ಎಲ್ಲಾ ಲೆಕ್ಕಾಚಾರಗಳು ಭವಾನಿ ರೇವಣ್ಣ ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಇದರ ಜೊತೆಗೆಹೊಸ ಕಾರು ತನ್ನದಲ್ಲದ ತಪ್ಪಿಗೆ ಸ್ಕ್ರಾಚ್ ಆಗಿದೆ ಅನ್ನೋ ನೋವು, ರಾಂಗ್ ಸೈಡ್‌ನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ ಅನ್ನೋ ಆಕ್ರೋಶ ಭವಾನಿ ರೇವಣ್ಣಗೆ ಮುಳುವಾಗಿದೆ.
ನಮ್ಮ ಕುಟುಂಬ ಯಾರಿಗೂ ನೋವುಂಟು ಮಾಡಲ್ಲ: ಭವಾನಿ ಕಾರು ಅಪಘಾತ ಪ್ರಕರಣಕ್ಕೆ ಕ್ಷಮೆ ಕೇಳಿದ ಎಚ್‌ಡಿ ರೇವಣ್ಣ
ಟೊಯೋಟಾ ವೆಲ್‌ಫೈರ್ ಕಾರು ಗಾತ್ರದಲ್ಲಿ ದೊಡ್ಡ ಕಾರು. 5,010 mm ಉದ್ದ, 1,850 mm ಅಗಲ ಹಾಗೂ 3,000 mm ವ್ಹೀಲ್‌ಬೇಸ್ ಹೊಂದಿದೆ. 2494 cc ಎಂಜಿನ್ 4 ಸಿಲಿಂಡರ್, 4 ವೇಲ್ವ್ ಹೊಂದಿದ್ದು, 141 bhp ಪವರ್ 240 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಕಾರು ಗರಿಷ್ಠ ಸುರಕ್ಷತೆಯನ್ನೂ ನೀಡಲಿದೆ. ಏರ್‌ಬ್ಯಾಗ್, ಎಬಿಎಸ್ ಬ್ರೇಕ್, ಇಬಿಡಿ ಬ್ರೇಕಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ಲೆವೆಲ್ 1 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ ಈ ಕಾರಿನಲ್ಲಿದೆ.
ಅಕ್ಕ ಎರಡೇ ಎರಡು ನಿಂಬೆಹಣ್ಣು ಜೊತೆಗೆ ಇಡ್ಕೊಂಡಿದ್ದಿದ್ರೆ ಒಂದೂವರೆ ಕೋಟಿ ಕಾರು ಸ್ಕ್ರಾಚ್🤭ಆಗ್ತಿರ್ಲಿಲ್ಲ https://t.co/isBMapzuvw
— ನಿಶಾ ಗೌರಿ 💛❤ (@Nisha_gowru)