ನಾನು ಆರ್‌ಆರ್ ನಗರ ಕ್ಷೇತ್ರ ಶಾಸಕ; ಇಲ್ಲಿ ನನ್ನ ಮಾತಿಗೆ ಕಿಮ್ಮತ್ತಿಲ್ಲ; ಪೊಲೀಸರ ವಿರುದ್ಧ ಮುನಿದ ಮುನಿರತ್ನ

Published : Nov 10, 2023, 01:16 PM ISTUpdated : Nov 10, 2023, 01:23 PM IST
ನಾನು ಆರ್‌ಆರ್ ನಗರ ಕ್ಷೇತ್ರ ಶಾಸಕ; ಇಲ್ಲಿ ನನ್ನ ಮಾತಿಗೆ ಕಿಮ್ಮತ್ತಿಲ್ಲ; ಪೊಲೀಸರ ವಿರುದ್ಧ ಮುನಿದ ಮುನಿರತ್ನ

ಸಾರಾಂಶ

ನಾನು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ. ಆದ್ರೆ ನನ್ನ ಮಾತಿಗೆ ಕಿಂಚಿತ್ ಬೆಲೆ ಇಲ್ಲ. ನನ್ನ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಾಸಕ ಮುನಿರತ್ನ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದರು.

ಬೆಂಗಳೂರು (ನ.10): ನಾನು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ. ಆದ್ರೆ ನನ್ನ ಮಾತಿಗೆ ಕಿಂಚಿತ್ ಬೆಲೆ ಇಲ್ಲ. ನನ್ನ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಾಸಕ ಮುನಿರತ್ನ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ನನ್ನ ಕ್ಷೇತ್ರ ಗಾಂಜಾ ಅಡ್ಡೆಯಾಗಿದೆ. ಇದಕ್ಕೆ ಕಾರಣ ಯಾರು ಅನ್ನೋದು ಗೊತ್ತು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಎಲ್ಲವನ್ನೂ ದಾಖಲೆ ಸಮೇತ ಹೆಸರುಗಳನ್ನ ಹೇಳ್ತಿನಿ. 20 ಕೇಜಿ ಗಾಂಜಾ ಆರ್ ಆರ್  ನಗರ ಕ್ಷೇತ್ರದಲ್ಲಿ ಮಾರಾಟ ಆಗ್ತಿದೆ. ಈ ಬಗ್ಗೆ ನಾನೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇನೆ. ಆದರೂ ಇಲ್ಲಿನ ಇನ್ಸ್‌ಪೆಕ್ಟರ್ ಕ್ರಮ ತೆಗೆದುಕೊಂಡಿಲ್ಲ. ಇವರು ವರ್ಗಾವಣೆ ದಂಧೆಯ ಹಿನ್ನೆಲೆಯಲ್ಲಿ ಬಂದಿದ್ದಾರೆ. ಇಂಥವರು ಹೇಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ? ಇಸ್ಪೀಟ್ ದಂಧೆ ನಡೆಸುವವರು , ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುವವರು ಇವರದ್ದೇ ಆಧಿಕಾರ ಆಗಿದೆ ಇಲ್ಲಿ. ಮಾಗಡಿ, ರಾಮನಗರದಲ್ಲಿ ಇಸ್ಪೀಟ್  ಕ್ಲಬ್ ಗಳನ್ನ ನಡೆಸ್ತಾರೆ. ಬೇರೆ ಕಡೆಯಿಂದ ಬಂದು ದುಷ್ಕೃತ್ಯ ಮಾಡಿಲ್ಲ ಇಲ್ಲಿನವರೆ ಮಾಡಿರೋ ಕೃತ್ಯ ಇದು.  ಯಾವುದೇ ಕೆಲಸ ಮಾಡಿಸದೆ ಅವರಿಗೆ ಗಾಂಜಾ ಕೊಟ್ಟು ಅವರ ಹಿಂದೆ ಮುಂದೆ ತಿರುಗುಸ್ತಾರೆ. ಈಗ ನಡೆದಿರೋ ಘಟನೆಯಲ್ಲಿ ಮಾಧ್ಯಮದವರೇ ಬಂದರೂ ಪೊಲೀಸರು ಇನ್ನೂ ಬಂದಿಲ್ಲ ಎಂದು ಪೊಲೀಸರ ಕಾರ್ಯವೈಖರಿ ಬಗ್ಗೆ ಗಂಭೀರ ಆರೋಪ ಮಾಡಿದರ

ಬೆಂಗಳೂರಿನ ಹೈಟೆಕ್ ಹೆರಿಗೆ ಆಸ್ಪತ್ರೆಗೆ ಬೀಗ: ಯಶವಂತಪುರದ ದೊಡ್ಡ ದವಖಾನೆಯೇ ಮೂಲೆಗುಂಪು

ಮಾಧ್ಯಮವರು ಬಂದರೂ ಪೊಲೀಸರು ಬಂದಿಲ್ಲ:

ಗೊಂಬೆ  ಮಾಸ್ಕ್ ಧರಿಸಿ ಪುಂಡರು ಏರಿಯಾ ಒಂದರಲ್ಲೇ ಹದಿನೈದಕ್ಕೂ ಹೆಚ್ಚು ವಾಹನಗಳ ಗಾಜು ಪುಡಿಪುಡಿ ಮಾಡಿದ್ದಾರೆ. ಲಗ್ಗೆರೆ, ರಾಜೀವ್ ಗಾಂಧಿನಗರದ ಪುಂಡರ ಅಟ್ಟಹಾಸ ಮಿತಿಮೀರಿದೆ. ಡಿಯೋ ದ್ವಿಚಕ್ರ ವಾಹನದಲ್ಲಿ ಬಂದು ಲಾಂಗು ಮಚ್ಚಿನಿಂದ ಅಟ್ಯಾಕ್‌ ಮಾಡಿದ್ದಾರೆ. ಮದ್ಯ ರಾತ್ರಿ ಮೂವರು ಪುಂಡರಿಂದ  ಕೃತ್ಯ. ಇಷ್ಟೆಲ್ಲ ಆಗಿ ಸ್ಥಳಕ್ಕೆ ಮಾಧ್ಯಮದವರೇ ಬಂದ್ರೂ ಪೊಲೀಸರು ಬಂದಿಲ್ಲ ಎಂದು ದೂರಿದ ಶಾಸಕ. ಈ ವೇಳೆ ಘಟನೆ ನಡೆದಾಗ್ಲೆ ಬಂದಿದ್ದೇವೆ. ಎಸಿಪಿ ಕೂಡ ಬಂದಿದ್ರು ಸ್ಪಾಟ್ ಪರಿಶೀಲನೆ ನಡೆಸಿದ್ರು. ಬೆಳಗ್ಗೆಯಿಂದ ಇದೀವಿ ಎಂದ ಎಂದ ಪಿಎಸ್‌ಐ ಆದರ್ಶಗೌಡ.

ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ ಮದ್ದಿನೇನಿ ಪತಿಯೇ ಕಾರಣ: ವಿದ್ಯಾ ಹಿರೇಮಠ ಆರೋಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!