ಶೋಲಾ ಅರಣ್ಯದಲ್ಲಿ ರೋಪ್‌ವೇ ನಿರ್ಮಾಣ: ಮರ ಕಡಿಯದೇ ಯೋಜನೆ ಜಾರಿಗೆ ತಜ್ಞರ ಭೇಟಿ

By Sathish Kumar KH  |  First Published Jul 13, 2023, 10:36 PM IST

ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರವಾದ ಮುಳ್ಳಯ್ಯನಗಿರಿ ಶಿಖರ ಹೊಂದಿರುವ ಶೋಲಾ ಅರಣ್ಯದಲ್ಲಿ ಸರ್ಕಾರ ರೋಪ್‌ ವೇ ನಿರ್ಮಾಣಕ್ಕೆ ಮುಂದಾಗಿದೆ. ಮರ ಕಡಿಯದೇ ಯೋಜನೆ ಜಾರಿಗೆ ತಜ್ಞರು ಸ್ಥಳ ಭೇಟಿ ಮಾಡಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ಜು.13): ರಾಜ್ಯದ ಅತ್ಯಂತ ಎತ್ತರವಾದಂತಹ ಪ್ರದೇಶ, ಪ್ರಪಂಚದ ಅತ್ಯಂತ ಅಪರೂಪದ ಸಸ್ಯಸಂಪತ್ತು ಹೊಂದಿರುವ ಶಿಖರ, ಪಶ್ಚಿಮಘಟ್ಟ ಶ್ರೇಣಿಯಲ್ಲಿ ಬರುವ ಈ ಶಿಖರಕ್ಕೆ ವರ್ಷ ಪೂರ್ತಿ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಆದರೆ, ಶೋಲಾ ಅರಣ್ಯವನ್ನು ಹೊಂದಿರುವ ಪ್ರದೇಶದಲ್ಲಿ ಇದೀಗ ಸರ್ಕಾರ ಹೊಸದೊಂದು ಯೋಜನೆಯನ್ನು ಮಾಡಲು ಉತ್ಸಾಹದಲ್ಲಿದೆ. ಆ ಯೋಜನೆಗೆ ವಿರೋಧವಿದ್ದರೂ ಕೂಡ ಇದರ ನಡುವೆಯೇ ಸರ್ಕಾರ ತಜ್ಞರ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳ ಪರಿಶೀಲಿಸಿದ ತಜ್ಞರ ತಂಡ, ಐದು ಕಡೆ ಜಾಗ ಗುರುತು :  ರಾಜ್ಯದ ಅತಿ ಎತ್ತರದ ಶಿಖರ ಚಿಕ್ಕಮಗಳೂರು ಜಿಲ್ಲೆಯ  ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಅಧ್ಯಯನ ಆರಂಭವಾಗಿದೆ. ಗಿರಿಶ್ರೇಣಿಯಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿದ್ದು, ಐದು ಸ್ಥಳಗಳನ್ನು ಗುರುತಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಈ ಹಿಂದಿನ ರಾಜ್ಯ ಬಜೆಟ್‌ನಲ್ಲಿ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ ಇದಾಗಿದೆ. ಪರ್ವತಮಾಲಾ ಯೋಜನೆಯಿಂದಲೂ ಅನುದಾನ ಪಡೆದು ರೋಪ್ ವೇ ನಿರ್ಮಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

Tap to resize

Latest Videos

undefined

ಶಕ್ತಿ ಯೋಜನೆಗೆ ವೀರೇಂದ್ರ ಹೆಗ್ಗಡೆ ಭಾರಿ ಮೆಚ್ಚುಗೆ: ಧರ್ಮಸ್ಥಳಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲುಯ ಸರ್ಕಾರದ ಯತ್ನ: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡೇನ್‌ಗಿರಿ, ದೇವೀರಮ್ಮ ಬೆಟ್ಟಗಳ ಸಾಲುಗಳಿವೆ. ಶೋಲಾ ಅರಣ್ಯ ಈ ಗಿರಿಶ್ರೇಣಿಯ ವೈಶಿಷ್ಟ್ಯವಾಗಿದೆ. ಯಗಚಿ, ವೇದಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ, ಝರಿಗಳು, ಜಲಪಾತಗಳು, ಹಸಿರು ಕಾನನದ ತಾಣ, ಜಿಂಕೆ ಅಳಿಲು ಸೇರಿ ವನಜೀವಿ ಸಂಕುಲದ ಆವಾಸ ಸ್ಥಾನವಾಗಿದೆ. ತಂಪು ರಮಣೀಯ ವಾತಾವರಣದ ಸೊಬಗಿನ ಈ ತಾಣಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ತಾಣವನ್ನು ಇನ್ನಷ್ಟು ರಮಣೀಯವಾಗಿ ಪ್ರವಾಸಿಗರಿಗೆ ಪರಿಚಯಿಸುವುದು ಪ್ರವಾಸೋದ್ಯಮ ಇಲಾಖೆಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿದೇರ್ಶಕರಾದ ಲೋಹಿತ್ ಅಭಿಪ್ರಾಯಿಸಿದ್ದಾರೆ. 

ಕಾಡು ಕಡಿಯದೇ ರೋಪ್‌ ವೇ ನಿರ್ಮಾಣಕ್ಕೆ ತಜ್ಞರ ತಂಡ ಭೇಟಿ: ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿದೆ.ಚಿಕ್ಕಮಗಳೂರು ತಾಲ್ಲೂಕಿನಲ್ಲಿರುವ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಭೇಟಿ ನೀಡಿದ್ದ ತಜ್ಞರ ತಂಡ 5 ಸ್ಥಳಗಳನ್ನು ಗುರುತು ಮಾಡಿದೆ. ಮುಳ್ಳಯ್ಯನಗಿರಿ, ಕವಿಕಲ್ ಗುಂಡಿ, ದತ್ತಪೀಠ ಟವರ್ ಪಾಯಿಂಟ್ ಮಾಣಿಕ್ಯಧಾರ, ಗಿರಿಯಿಂದ ಕೆಳಗೆ ಕಾಣಿಸುವ ತಿರುವು ರಸ್ತೆಯ ಜಂಕ್ಷನ್ ಸೇರಿ ಐದು ಕಡೆ ಸ್ಥಳ ಪರಿಶೀಲನೆ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು, ಕಾಶ್ಮೀರದಲ್ಲಿ ರೋಪ್ ವೇ ನಿರ್ಮಿಸಿರುವ ಪರಿಣತರು ಈ ತಂಡದಲ್ಲಿದ್ದರು. 'ಕಾಡು ಕಡಿಯದ ಜೀವ ವೈವಿಧ್ಯಕ್ಕೂ ಧಕ್ಕೆಯಾಗದಂತೆ ರೋಪ್ ವೇ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಈ ತಂಡ ಅಧ್ಯಯನ ನಡೆಸಿದೆ.

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಅಂಗನವಾಡಿಗೆ ಕೊಳೆತ ಮೊಟ್ಟೆ ಸರಬರಾಜು ಮಾಡಿದ ಗುತ್ತಿಗೆದಾರ ಕಪ್ಪುಪಟ್ಟಿಗೆ ಸೇರ್ಪಡೆ

ಪರಿಸರವಾದಿಗಳಿಂದ ತೀವ್ರ ವಿರೋಧ : ಇನ್ನು ಸರ್ಕಾರದ ಈ ರೋಪ್‌ವೇ ನಿರ್ಮಾಣ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಸಸ್ಯಸಂಪತ್ತನ್ನು ಗಿರಿ ಪ್ರದೇಶ ಹೊಂದಿದೆ. ಸ್ವಚ್ಛಂದ ಗಾಳಿ , ಪ್ರಾಣಿ ಪಕ್ಷಿಗಳ ಓಡಾಟಕ್ಕೆ ರೋಪ್ ವೇ ಅಡ್ಡಿಯಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆಯನ್ನು ಪರಿಸರವಾದಿಗಳು ನೀಡಿದ್ದಾರೆ. ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡಲು ಹಲವು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ದಿಗೊಳಿಸಿ ಮೂಲಭೂತಸೌಲಭ್ಯ ನೀಡಿದ್ರೆ ಸಾಕು. ಆದ್ರೆ ಸರ್ಕಾರ ಅದನ್ನು ಬಿಟ್ಟು  ಸ್ವಚ್ಚದ ಗಾಳಿ, ಪರಿಸರವನ್ನು ಹೊಂದಿರುವ ಸ್ಥಳದಲ್ಲಿ ರೋಪ್ ವೇ ಯೋಜನೆಯನ್ನು ಜಾರಿ ಮಾಡುವ ಮೂಲಕ ಪರಿಸರಕ್ಕೆ ಮಾರಕವಾಗುತ್ತಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುವ ಅಗತ್ಯವೂ ಇದ್ದು ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅನ್ನೋದನ್ನು ಮಾತ್ರ ಕಾದುನೋಡಬೇಕಾಗಿದೆ.

click me!