ಕೋವಿಡ್‌ ಲ್ಯಾಬ್‌ನ 922 ನೌಕರರಿಗೆ ಅಪಾಯ ಭತ್ಯೆ

By Kannadaprabha News  |  First Published Jun 3, 2021, 7:29 AM IST

* ಪ್ರಯೋಗಾಲಯಗಳಲ್ಲಿ ಕೋವಿಡ್‌ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಸಿಬ್ಬಂದಿ ನೇಮಕ
* 10 ಸಾವಿರ ರು. ಕೋವಿಡ್‌ ಅಪಾಯ ಪ್ರೋತ್ಸಾಹಧನ 
* 922 ಮಂದಿ ಹೊರ ಗುತ್ತಿಗೆ ನೌಕರರಿಗೆ ಕೋವಿಡ್‌ ಮಾಸಿಕ ಅಪಾಯ ಭತ್ಯೆ ಘೋಷಣೆ


ಬೆಂಗಳೂರು(ಜೂ.03): ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 922 ಮಂದಿ ಹೊರ ಗುತ್ತಿಗೆ ನೌಕರರಿಗೆ ಕೋವಿಡ್‌ ಮಾಸಿಕ ಅಪಾಯ ಭತ್ಯೆ ಘೋಷಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿದೆ. 

ರಾಜ್ಯದ 20 ಪ್ರಯೋಗಾಲಯಗಳಲ್ಲಿ ಕೋವಿಡ್‌ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಹೊರ ಗುತ್ತಿಗೆ ಆಧಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕವಾಗಿದ್ದಾರೆ. 

Latest Videos

undefined

ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು

ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕ, ಲ್ಯಾಬ್‌ ತಂತ್ರಜ್ಞ, ಡೇಟಾ ಎಂಟ್ರಿ ಆಪರೇಟರ್‌ಗಳಿಗೆ 5000 ರು., ಶುಶ್ರೂಷಕರಿಗೆ 8000 ರು. ಮತ್ತು ಡಿ ಗ್ರೂಪ್‌ ನೌಕರರಿಗೆ 10 ಸಾವಿರ ರು. ಕೋವಿಡ್‌ ಅಪಾಯ ಪ್ರೋತ್ಸಾಹಧನ ನೀಡಲು ಇಲಾಖೆ ಆದೇಶಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!