Revenue Documents ಒಂದೇ ದಿನ 5 ಕೋಟಿ ದಾಖಲೆಗಳ ವಿತರಣೆ!

By Kannadaprabha News  |  First Published Mar 13, 2022, 4:45 AM IST

- ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ರೈತರ ಮನೆಗೇ ತಲುಪಿಸುವ ಯೋಜನೆ

- ಚಿಕ್ಕಬಳ್ಳಾಪುರದಲ್ಲಿ ‘ಮನೆ ಬಾಗಿಲಿಗೆ ಕಂದಾಯ ಇಲಾಖೆ’ಗೆ ಬೊಮ್ಮಾಯಿ ಚಾಲನೆ

- ರಾಜ್ಯದ 224 ಕ್ಷೇತ್ರಗಳ 55 ಲಕ್ಷ ರೈತ ಕುಟುಂಬಕ್ಕೆ ದಾಖಲೆ ತಲುಪಿಸಿದ ಸರ್ಕಾರ


ಬೆಂಗ​ಳೂ​ರು (ಮಾ.13): ರೈತರ ಮನೆ​ಬಾ​ಗಿ​ಲಿಗೆ (farmer Doorstep) ಕಂದಾಯ ಇಲಾ​ಖೆಯ ದಾಖ​ಲೆಗಳನ್ನು (Revenue Documents) ತಲು​ಪಿ​ಸುವ ಮಹ​ತ್ವಾ​ಕಾಂಕ್ಷೆಯ ‘ಮನೆ ಬಾಗಿ​ಲಿಗೆ ಕಂದಾಯ ದಾಖಲೆ’ ಯೋಜ​ನೆ​ಗೆ ರಾಜ್ಯದ 31 ಜಿಲ್ಲೆ​ಗಳ 224 ಕ್ಷೇತ್ರ​ಗ​ಳಲ್ಲಿ ಶನಿ​ವಾರ ಚಾಲನೆ ನೀಡ​ಲಾ​ಯಿತು. ದೇಶ​ದಲ್ಲೇ ಮೊದ​ಲ​ನೆ​ಯದ್ದು ಎನ್ನ​ಲಾದ ಈ ಕಾರ್ಯ​ಕ್ರ​ಮಕ್ಕೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ  (CM basavaraj bommai) ಅವರು ಚಿಕ್ಕ​ಬ​ಳ್ಳಾ​ಪುರ ಜಿಲ್ಲೆ​ಯ ಕುಗ್ರಾಮ ಗುಂಗೀರ್ಲಹಳ್ಳಿಯಲ್ಲಿ ಅಧಿ​ಕೃ​ತ​ವಾಗಿ ಚಾಲನೆ ನೀಡಿದರು. ಈ ಕಾರ್ಯ​ಕ್ರ​ಮದ ಮೂಲಕ ಒಂದೇ ದಿನ ರಾಜ್ಯಾ​ದ್ಯಂತ 55 ಲಕ್ಷ ರೈತರಿಗೆ 5 ಕೋಟಿಯಷ್ಟುಕಂದಾಯ ದಾಖಲೆಗಳನ್ನು ಉಚಿ​ತ​ವಾಗಿ ವಿತ​ರಿ​ಸ​ಲಾ​ಯಿ​ತು.

ಗುಂಗೀ​ರ್ಲ​ಹ​ಳ್ಳಿ​ಯಲ್ಲಿ 13 ಕುಟುಂಬ​ಗ​ಳಿಗೆ ಸಾಂಕೇ​ತಿ​ಕ​ವಾಗಿ ಕಂದಾಯ ದಾಖ​ಲೆ​ಗ​ಳನ್ನು ವಿತ​ರಿ​ಸಿದ ಬಳಿಕ ಮಾತ​ನಾ​ಡಿದ ಬೊಮ್ಮಾಯಿ, ಕಂದಾಯ ಇಲಾ​ಖೆ​ಯ​ಲ್ಲಿ ಈ ಯೋಜ​ನೆ ಹೊಸ ಕ್ರಾಂತಿ ಸೃಷ್ಟಿ​ಸ​ಲಿದೆ ಎಂದು ಬಣ್ಣಿ​ಸಿ​ದರು. ಈ ಕಾರ್ಯ​ಕ್ರ​ಮ​ದಿಂದ ರೈತ​ರು, ಸಾರ್ವ​ಜ​ನಿ​ಕರು ದಾಖಲೆ ಪತ್ರ​ಗ​ಳಿ​ಗಾಗಿ ಪದೇ ಪದೇ ಸರ್ಕಾರಿ ಕಚೇ​ರಿಗೆ ಅಲೆ​ದಾ​ಡು​ವುದು ತಪ್ಪ​ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವರು, ರೈತರು, ದೀನದಲಿತರು ಹಿಂದುಳಿದ ವರ್ಗದವರ ಬಗ್ಗೆ ಕಾಂಗ್ರೆ​ಸ್ಸಿ​ಗರು ಮಾತನಾಡಿದ್ದೇ ಹೆಚ್ಚು. ಬಡ​ವರು, ದೀನ​ದ​ಲಿ​ತರೆಲ್ಲ ಉದ್ಧಾರವಾಗಿದ್ದರೆ ಇಂದು ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲು​ಪಿ​ಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

Tap to resize

Latest Videos

ಭೂ ದಾಖಲೆಯನ್ನು (Land Documents) ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಲು ಈ ಮಹತ್ವದ ಯೋಜನೆ ಸಹಕಾರಿಯಾಗಲಿದೆ. ಕಂದಾಯ ದಾಖಲೆಗಳನ್ನು ಫಲಾ​ನು​ಭ​ವಿ​ಗಳ ಮನೆ​ಬಾ​ಗಿ​ಲಿಗೆ ವಿತ​ರಿ​ಸುವ ಈ ವಿನೂತನ ಯೋಜನೆ 224 ಕ್ಷೇತ್ರಗಳಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮ ರೀತಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್‌.​ಅ​ಶೋಕ್‌ ( Revenue Minister R. Ashoka ) ಹೇಳಿ​ದ​ರು.

ರೈತರ ಹಕ್ಕನ್ನು ನಿರ್ಧ​ರಿ​ಸು​ವ ದಾಖ​ಲೆ​ಗ​ಳಾದ ಪಹಣಿ (Pahani), ಅಟ್ಲಾಸ್‌ (Map), ಜಾತಿ ಹಾಗೂ ಆದಾಯ ಪ್ರಮಾಣ ಪತ್ರ​ಗ​ಳನ್ನು ಮುದ್ರಿಸಿ ಕುಟುಂಬವಾರು, ಗ್ರಾಮವಾರು ವಿಂಗಡಿಸಿ ಪೂರ್ವಮುದ್ರಿತ ಫೈಲ್‌ ಅಥವಾ ಫೋಲ್ಡರ್‌ನಲ್ಲಿ ಹಾಕಿ ಸಂಬಂಧಿಸಿದ ರೈತ ಕುಟುಂಬಕ್ಕೆ ತಲುಪಿಸುವ ವಿಶಿಷ್ಟಯೋಜನೆ ಇದಾ​ಗಿದ್ದು, ಕಂದಾಯ ಇಲಾಖೆ ಸಿಬ್ಬಂದಿಯೇ ಖುದ್ದು ರೈತರ ಮನೆ ಬಾಗಿ​ಲಿಗೆ ತೆರಳಿ ದಾಖ​ಲೆ​ಗ​ಳನ್ನು ವಿತ​ರಿ​ಸುವ​ರು.

ಹಬ್ಬದ ವಾತಾ​ವ​ರ​ಣ: ಬೊಮ್ಮಾಯಿ ಆಗ​ಮ​ನದ ಹಿನ್ನೆ​ಲೆ​ಯಲ್ಲಿ ಗ್ರಾಮ​ದಲ್ಲಿ ಹಬ್ಬದ ವಾತಾ​ವ​ರಣ ನಿರ್ಮಾ​ಣ​ವಾ​ಗಿತ್ತು. ಚಿಕ್ಕಬಳ್ಳಾಪುರ ನಗ​ರದಿಂದ 15 ಕಿ.ಮೀ. ದೂರ​ದ​ಲ್ಲಿ​ರುವ ಪರಿಶಿಷ್ಟಸಮುದಾಯದವರೇ ಹೆಚ್ಚಿನ ಸಂಖ್ಯೆ​ಯ​ಲ್ಲಿ​ರುವ ಈ ಕುಗ್ರಾ​ಮ​ದ​ಲ್ಲಿ ಸಿಎಂಗೆ ಪೂರ್ಣ ಕುಂಭ ಸ್ವಾಗತ ನೀಡ​ಲಾ​ಯಿ​ತು. ಕಾರ್ಯ​ಕ್ರ​ಮಕ್ಕೂ ಮೊದಲು ಮುಖ್ಯ​ಮಂತ್ರಿ ಅವರು ಗ್ರಾಮ​ಸ್ಥರ ಮನೆಗೆ ಹೋಗಿ ಅವರ ಅಹ​ವಾಲು ಆಲಿ​ಸಿದ್ದು ವಿಶೇ​ಷ​ವಾ​ಗಿ​ತ್ತು.

'ದೇವೇಗೌಡ-ಎಚ್‌ಡಿಕೆ ಜೊತೆ ಚರ್ಚೆ ಫಲಪ್ರದ, ಸ್ವಾಮೀಜಿಗಳ ಜತೆ ಚರ್ಚಿಸಿ JDS ಸೇರ್ಪಡೆ ದಿನಾಂಕ ನಿಗದಿ'
ಶಿಕಾ​ರಿ​ಪು​ದಲ್ಲಿ ಬಿಎ​ಸ್‌​ವೈ: ಮುಖ್ಯ​ಮಂತ್ರಿ ಚಿಕ್ಕ​ಬ​ಳ್ಳಾ​ಪು​ರ​ದಲ್ಲಿ ಈ ಯೋಜ​ನೆಗೆ ಚಾಲನೆ ನೀಡಿ​ದರೆ, ಶಿವ​ಮೊಗ್ಗದ ಶಿಕಾ​ರಿ​ಪು​ರ​ದಲ್ಲಿ ಮಾಜಿ ಸಿಎಂ ಬಿ.ಎ​ಸ್‌.​ಯ​ಡಿ​ಯೂ​ರಪ್ಪ, ಮೈಸೂ​ರಲ್ಲಿ ಸಚಿವ ಎಸ್‌.​ಟಿ.​ಸೋ​ಮ​ಶೇ​ಖರ್‌, ಬೆಳ​ಗಾ​ವಿಯಲ್ಲಿ ಜಲ​ಸಂಪ​ನ್ಮೂಲ ಸಚಿವ ಗೋವಿಂದ ಕಾರ​ಜೋ​ಳ, ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡು ಗ್ರಾಪಂನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸು​ನಿಲ್‌ ಕುಮಾ​ರ್‌, ಬಂಟ್ವಾಳದ ಅಮ್ಮುಂಜೆಯಲ್ಲಿ ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ವಿವಿಧ ಸಚಿ​ವರು, ಜನ​ಪ್ರ​ತಿ​ನಿ​ಧಿ​ಗಳು, ಶಾಸ​ಕ​ರು ಕಾರ್ಯ​ಕ್ರಮ ಉದ್ಘಾ​ಟಿ​ಸಿ​ದ​ರು.

ಯುಟಿ ಖಾದರ್‌ಗೆ ಶಾಕ್‌, 24 ವರ್ಷದಿಂದ ಜೊತೆಗಿದ್ದ ಮುಖಂಡ ಬಿಜೆಪಿ ಸೇರ್ಪಡೆ
ಅಶೋ​ಕ​ಣ್ಣ​ನಿಂದ ಕ್ರಾಂತಿ-ಸಿಎಂ

ಕಾರ್ಯ​ಕ್ರ​ಮ​ದಲ್ಲಿ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ಕಂದಾಯ ಸಚಿವ ಆರ್‌.​ಅ​ಶೋಕ್‌ ಅವರ ಕುರಿತು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದರು. ಅಶೋ​ಕಣ್ಣ ಮುಂದಾ​ಳ​ತ್ವ​ದಲ್ಲಿ ಈ ಕಾರ್ಯ​ಕ್ರಮ ಕಂದಾಯ ಇಲಾ​ಖೆ​ಯಲ್ಲಿ ಕ್ರಾಂತಿ ಸೃಷ್ಟಿಸ​ಲಿದೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ​ರು. ನಂತರ ಮಾತ​ನಾ​ಡಿದ ಸಚಿವ ಅಶೋಕ್‌, ಜನಪರವಾದ ಸರ್ಕಾರ, ಜನರ ಮುಖ್ಯಮಂತ್ರಿಯಿಂದ ಮಾತ್ರ ಈ ರೀತಿ​ಯ ಕಾರ್ಯ​ಕ್ರಮ ಮಾಡಲು ಸಾಧ್ಯ ಎಂದು ಬೊಮ್ಮಾಯಿ ಅವ​ರನ್ನು ಹೊಗ​ಳಿ​ದ​ರು. ಗರೀಬಿ ಹಟಾವೋ ಹೆಸರೇಳಿ ರಾಜಕಾರಣ ಮಾಡಿದ ಕಾಂಗ್ರೆಸ್‌ ಬಡವರು, ದಲಿತರ ಉದ್ಧಾರ ಮಾಡಲಿಲ್ಲ. ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ಹೋಗಿ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಶೋಕಣ್ಣ ಮುಂದಾಳತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಈ ಕಾರ್ಯಕ್ರಮ ಕ್ರಾಂತಿ ಸೃಷ್ಟಿಸಲಿದೆ ಎಂದು ಹೇಳಿದರು.

click me!