Ramanagara ಇಂದು ರೇವಣ ಸಿದ್ದೇಶ್ವರ ಕ್ಷೇತ್ರದಲ್ಲಿ ಸಾಮೂ​ಹಿಕ ವಿವಾಹ

By Kannadaprabha News  |  First Published Mar 13, 2022, 3:15 AM IST

- ಶ್ರೀ ರೇವ​ಣ​ಸಿ​ದ್ದೇ​ಶ್ವರ ಸ್ವಾಮಿ ಕ್ಷೇತ್ರ​ದಲ್ಲಿ ಕಾರ್ಯ​ಕ್ರಮ ಆಯೋ​ಜನೆ

- ಸಮುದಾಯ ಭವನವೂ ಲೋಕಾರ್ಪಣೆ

- ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಕಿರಿಯ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ


ರಾಮನಗರ  (ಮಾ.13): ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಳ್ಳಿಯ ಶ್ರೀ ರೇವಣಸಿದ್ದೇಶ್ವರ ( Revana Siddeshwara ) ಬೆಟ್ಟದ ದಾಸೋಹ ಮಠದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶ ಮತ್ತು ಉಚಿತ ಸಾಮೂಹಿಕ ವಿವಾಹ ಹಾಗೂ 15ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ನೂತನ ದಾಸೋಹ ನಿಲಯ ಮತ್ತು ಸಮುದಾಯ ಭವನದ ಉದ್ಘಾಟನೆ ಮಾ.13 ರಂದು ನಡೆಯಲಿದೆ ಎಂದು ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಕಿರಿಯ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ (Sri Rajashekara Shivacharya Swamiji) ತಿಳಿಸಿದರು.

ಸು​ದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ದಾಸೋಹ ಮಠ 144 ವರ್ಷ ಇತಿಹಾಸ ಇದ್ದು, ಕ್ಷೇತ್ರಕ್ಕೆ ಬಂದ ಭಕ್ತಕರಿಗೆ ಆಗಿನಿಂದಲೂ ಅನ್ನ ದಾಸೋಹ ನಡೆಸಿಕೊಂಡು ಬಂದಿದೆ. ಮಾ.13 ರಂದು ಶ್ರೀ ಕ್ಷೇತ್ರದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶ, ಉಚಿತ ಸಾಮೂಹಿಕ ವಿವಾಹ ಹಾಗೂ 15ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಹಾಗೂ ಭಕ್ತರ ಅನುಕೂಲಕ್ಕಾಗಿ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ದಾಸೋಹ ನಿಲಯದ ಕಟ್ಟಡ ಉದ್ಘಾಟನೆ ನಡೆಯಲಿದೆ ಎಂದ​ರು.

Tap to resize

Latest Videos

ಈ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಹಾಗೂ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾ​ಟಿ​ಸು​ವರು. ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಉಪಸ್ಥಿತರಿರಲಿದ್ದು, ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ಸಚಿವರಾದ ವಿ.ಸೋಮಣ್ಣ, ಎಸ್‌.ಟಿ.ಸೋಮಶೇಖರ್‌, ಶಾಸಕರಾದ ಎ.ಮಂಜು, ಎಂ.ಕೃಷ್ಣಪ್ಪ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ, ಎಂಎಲ್ಸಿಗಳಾದ ಸಿ.ಎಂ.ಲಿಂಗಪ್ಪ, ಸಿ.ಪಿ.ಯೋಗೇಶ್ವರ್‌, ಕೆಆರ್‌ ಐಡಿಎಲ… ಅಧ್ಯಕ್ಷ ಎಂ.ರುದ್ರೇಶ್‌, ಮಾಜಿ ಶಾಸಕ ಪ್ರಿಯಕೃಷ್ಣ, ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿಗೌಡ ಮ​ತ್ತಿ​ತ​ರರು ಭಾಗವಹಿಸಲಿದ್ದಾರೆ ಎಂದು ಹೇಳಿ​ದ​ರು.

10 ಜೋಡಿಗಳಿಂದ ಹೆಸರು ನೋಂದಣೆ: ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನವ ವಧು- ವರರಿಗೆ ಮಠದಿಂದ ಮಾಂಗಲ್ಯ ಸೂತ್ರ, ವಧುವಿಗೆ ಸೀರೆ, ವರನಿಗೆ ಬಟ್ಟೆಕೊಡಲಾಗುವುದು. ನಾಡಿನ ಹೆಸರಾಂತ ಮಠಗಳ ಸ್ವಾಮೀಜಿಗಳ, ಗಣ್ಯರ ಸಮ್ಮುಖದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ ಎಂದರು.

Channapatna: ಆಸ್ಪತ್ರೆಯ ಶೌಚಾಲಯದಲ್ಲಿ ಮೃತ ಭ್ರೂಣ ಪತ್ತೆ: ಕೊಲೆ ಶಂಕೆ?
ಮುಂದಿನ ದಿನಗಳಲ್ಲಿ ಶ್ರೀ ಮಠದಿಂದ ವೇದ-ಸಂಸ್ಕೃತ ವಿದ್ಯಾ ಶಾಲೆ, ಗೋ ಶಾಲೆ, ವೃದ್ಧಾಶ್ರಮ, ವಿದ್ಯಾರ್ಥಿ ವಸತಿ ನಿಲಯ ತೆರೆಯುವ ಆಲೋಚನೆ ಇದೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮಗಳು ಮಠದ ಹಿರಿಯ ಸ್ವಾಮೀಜಿ ಪಟ್ಟದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿ​ಸಿ​ದರು.

Congress Padayatre: ಮೇಕೆದಾಟು ಜಾರಿ ಇಚ್ಛಾಶಕ್ತಿ ಬಿಜೆಪಿಗಿಲ್ಲ: ಸುರ್ಜೇವಾಲಾ
ರೇವಣ್ಣಸಿದ್ಧೇಶ್ವರ ಸ್ವಾಮಿ ದಾಸೋಹ ಮಠದ ಅಭಿವೃದ್ಧಿ ಸೇವಾ ಟ್ರಸ್ವ್‌ ಅಧ್ಯಕ್ಷ ಕೇತೋಹಳ್ಳಿ ಕೆ.ಎಸ್‌. ರಾಜಣ್ಣ, ಸದಸ್ಯರಾದ ಬಿಡದಿ ಶಿವಸ್ವಾಮಿ, ನಾಯಂಡಹಳ್ಳಿ ಷಡಕ್ಷರಿ, ಅವ್ವೇರಹಳ್ಳಿ ಶಿವಲಿಂಗಯ್ಯ, ಪಿಎಲ್‌ ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಆರ್‌ . ಶಿವಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶಂಕರಪ್ಪ, ರಾಮನಗರ ಪ್ರಾಧಿಕಾರ ಸದಸ್ಯ ಕಾಡನಕುಪ್ಪೆ ರಾಘವೇಂದ್ರ, ಗ್ರಾಪಂ ಮಾಜಿ ಸದಸ್ಯ ಗೋಪಾಲನಾಯ್ಕ, ಮುಖಂಡರಾದ ನೆಲೆಮಲೆ ಗಂಗಾಧರ್‌ , ಅವ್ವೇರಹಳ್ಳಿ ಪ್ರಶಾಂತ್‌, ವಿಭೂತಿಕೆರೆ ಶಿವಲಿಂಗಯ್ಯ, ಕನಕಪುರ ಕೈಲಾಶ್‌ ಶಂಕರ್‌ , ಮಧು, ಕೋಟಹಳ್ಳಿ ರವಿ, ರೇಣುಕಪ್ಪ ಇದ್ದರು.

click me!