Republic Day ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Published : Jan 25, 2022, 05:41 PM IST
Republic Day ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಸಾರಾಂಶ

* 2022ನೇ ಸಾಲಿನ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಘೋಷಣೆ * ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಆಯ್ಕೆ * ಗಣರಾಜ್ಯೋತ್ಸವ ದಿನದಂದು  ಆಯ್ಕೆಯಾದ ಪೊಲೀಸ್ ಅಧಿಕಾರಿಗಳಿಗೆ ಪದಕ ವಿತರಣೆ

ಬೆಂಗಳೂರು, (ಜ.25): ಪ್ರತಿ ವರ್ಷ ಗಣರಾಜ್ಯೋತ್ಸವ (Republic Day) ಸಂದರ್ಭದಲ್ಲಿ ನೀಡಲಾಗುವ ಪೊಲೀಸ್ ಪದಕ ಹಾಗೂ ರಾಷ್ಟ್ರಪತಿ ಪದಕಗಳನ್ನು ಘೋಷಣೆ ಮಾಡಲಾಗಿದೆ

2022ನೇ ಸಾಲಿನ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಇನ್ನು 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಪೊಲೀಸ್ ಪದಕ ಸಂದಿದೆ.

Republic Day: ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ಕರಕುಶಲ ಕಲಾ ವೈಭವದ ಟ್ಯಾಬ್ಲೋ

ಪೊಲೀಸ್ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ ನೀಡಲಾಗುವ ಪ್ರಶಂಸನೀಯ ಪದಕಕ್ಕೆ ಕರ್ನಾಟಕದ 19 ಅಧಿಕಾರಿಗಳು ಈ ಬಾರಿ ಆಯ್ಕೆ ಆಗಿದ್ದಾರೆ.  ಭಾರತದ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವ ದಿನದಂದು ಈ ಪದಕ ನೀಡಲಾಗುತ್ತದೆ.  ಶ್ಲಾಘನೀಯ ಸೇವಾ ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದವರು
* ಬನ್ನಿಕಲ್ ದಯಾನಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಗುಪ್ತಚರ ಇಲಾಖೆ, ಬೆಂಗಳೂರು
* ಹಿತೇಂದ್ರ ಆರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕ್ರೈಂ ಹಾಗೂ ಟೆಕ್ನಿಕಲ್ ಸರ್ವಿಸ್, ಬೆಂಗಳೂರು

ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದವರು
* ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ)
* ರಾಮಯ್ಯ ಜನಾರ್ದನ್, KSRP 5ನೇ ಬೆಟಾಲಿಯನ್
* ಡಿ. ಕುಮಾರ್, ಎಸಿಪಿ, ಹಲಸೂರು ಉಪವಿಭಾಗ
* ಪ್ರಭುದೇವ್ ರವಿಪ್ರಸಾದ್, ಹುಣಸೂರು DySP
* ವೆಂಕಟಪ್ಪ ನಾಯ್ಕ್ ಓಲೇಕಾರ್, ಸಿಂಧನೂರು DySP
* ಎಂ. ಮಲ್ಲೇಶಯ್ಯ, DySP, ಆನೇಕಲ್ ಉಪವಿಭಾಗ
* ಯಶವಂತಕುಮಾರ್, DySP, ಸೈಬರ್ ಕ್ರೈಂ ಸಿಐಡಿ
* ಗಂಗಾಧರ್ ಮಠಪತಿ, ಎಸಿಪಿ, ಸಿಸಿಆರ್‌ಬಿ, ಕಲಬುರಗಿ
* ಕೆ.ಎಂ. ರಮೇಶ್. DySP, ಕರ್ನಾಟಕ ಲೋಕಾಯುಕ್ತ
* ಎಸ್‌.ಬಿ. ಕೆಂಪಯ್ಯ, ಸಿಐಡಿ ಡಿವೈಎಸ್‌ಪಿ
* ಎಸ್. ಕೃಷ್ಣಮೂರ್ತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್
* ಸಿ.ಎಸ್. ಸಿಂಪಿ, KSRP, 1ನೇ ಬೆಟಾಲಿಯನ್ ಬೆಂಗಳೂರು
* ಮೊಹಮ್ಮದ್ ದನೀಫ್, ARSIA, ಡಿಆರ್ ಬೆಳಗಾವಿ
* ಎಮ್.ಎಚ್. ರೇವಣ್ಣ, ಎಎಸ್‌ಐ, ಜಂಟಿ ಸಿಪಿ ಕಚೇರಿ ಬೆಂಗಳೂರು

ಕರ್ನಾಟಕದಿಂದ ಕರಕುಶಲ ಕಲಾ ವೈಭವದ ಟ್ಯಾಬ್ಲೋ
ರಾಷ್ಟ್ರ ರಾಜಧಾನಿ ನವದೆಹಲಿಯ(New Delhi) ರಾಜಪಥದಲ್ಲಿ ಜ.26ರ ಗಣರಾಜ್ಯೋತ್ಸವದಂದು(Republic Day) ಕರ್ನಾಟಕದ ಸಮಸ್ತ ಕರಕುಶಲ ವೈಭವದ ವಿಶ್ವರೂಪ ದರ್ಶನವಾಗಲಿದೆ!

‘ಕರ್ನಾಟಕ- ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’(Karnataka - Cradle of Heritage Handicrafts) ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ(Tableau) ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿದ್ದು, ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.

ನೂರಾರು ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಕರ್ನಾಟಕವು(Karnataka) ಭಾರತದಲ್ಲೇ(India) ಅತಿ ಹೆಚ್ಚು ಉತ್ಪನ್ನಗಳಿಗೆ ಜಿಐ (ಜಿಯೋಗ್ರಾಫಿಕಲ್‌ ಇಂಡಿಕೇಷನ್‌) ಟ್ಯಾಗ್‌ ಪಡೆದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲೂ ಕರಕುಶಲ ವಸ್ತುಗಳಿಗೆ ರಾಜ್ಯ ಜಗದ್ವಿಖ್ಯಾತಿ ಪಡೆದಿದೆ. ಭಾರತದಲ್ಲಿ 346 ವಸ್ತು ಮತ್ತು ಉತ್ಪನ್ನಗಳಿಗೆ ಜಿಐ ಟ್ಯಾಗ್‌ ಇದ್ದರೆ ಇದರಲ್ಲಿ ಸಿಂಹಪಾಲು ಅಂದರೆ 46 ವಸ್ತು ಮತ್ತು ಉತ್ಪನ್ನಗಳು ಕರ್ನಾಟಕದ್ದಾಗಿವೆ. ಕರಕುಶಲ ವಿಭಾಗದಲ್ಲಿ 16 ವಸ್ತು ಮತ್ತು ಉತ್ಪನ್ನಗಳಿಗೆ ಜಿಐ ಟ್ಯಾಗ್‌ ಇದೆ. ಹಾಗಾಗಿ ನಮ್ಮ ಪಾರಂಪರಿಕತೆಯ ಪ್ರತೀಕವಾಗಿ ಈ ಬಾರಿ ಕರಕುಶಲ ವಸ್ತುಗಳ ತೊಟ್ಟಿಲಿನ ಸ್ತಬ್ಧಚಿತ್ರದ ಮೂಲಕ ಕರ್ನಾಟಕ ಸಂಸ್ಕೃತಿ ರಾಜಪಥದಲ್ಲಿ ಅನಾವರಣವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್