ಷೋ ಮ್ಯಾನ್‌ಗಳಿಗೆ ರುದ್ರನಾದ ತಿಪ್ಪೆ: ವಿಧಾನ ಮಂಡಲದಲ್ಲಿ ಚರ್ಚೆಯಾಯ್ತು ಲೀಗಲ್‌ ಅಫೇರ್‌!

Published : Jul 17, 2023, 05:00 AM IST
ಷೋ ಮ್ಯಾನ್‌ಗಳಿಗೆ ರುದ್ರನಾದ ತಿಪ್ಪೆ: ವಿಧಾನ ಮಂಡಲದಲ್ಲಿ ಚರ್ಚೆಯಾಯ್ತು ಲೀಗಲ್‌ ಅಫೇರ್‌!

ಸಾರಾಂಶ

ತಿಪ್ಪೇರುದ್ರಪ್ಪ ವಿಧಾನ ಸೌಧಕ್ಕೆ ನುಗಿದ್ದಕ್ಕೆ ಶಕ್ತಿ ಸೌಧದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ. ಪೊಲೀಸರು ನಕಲಿ ಪಾಸ್ ಇಟ್ಟುಕೊಂಡು ವಿಧಾನಸೌಧಕ್ಕೆ ನುಗ್ಗುತ್ತಿದ್ದ ಷೋ ಮ್ಯಾನ್‌ಗಳನ್ನು ಅಡ್ಡಗಟ್ಟು ಹೊರಗಟ್ಟಿದ್ದಾರೆ.

ಷೋ ಮ್ಯಾನ್‌ಗಳಿಗೆ ರುದ್ರನಾದ ತಿಪ್ಪೆ!
‘ಶಕ್ತಿಸೌಧ’ದ ಕಚೇರಿಗಳಲ್ಲಿ ಶಾಪಿಂಗ್ ಮಾಡುತ್ತಾ ಟೈಂ ಸಿಕ್ಕಾಗ ಸ್ವಲ್ಪ ಕೆಲಸ ಮಾಡೋ ಕೆಲ ಮಹಿಳಾ ಮಣಿಗಳು ಹಾಗೂ ಕೆಲಸ ಇರಲಿ, ಇಲ್ಲದಿರಲಿ ಸದಾ ಇಲ್ಲಿ ‘ಠಳಾಯಿಸು’ತ್ತಿದ್ದ ‘ಷೋ’ ಮ್ಯಾನ್‌ಗಳು ‘ತಿಪ್ಪೇರುದ್ರಪ್ಪ’ನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಯಾರಿದು ತಿಪ್ಪೇರುದ್ರಪ್ಪ ಎಂದು ಯೋಚಿಸುತ್ತಿದ್ದೀರಾ ? 
ಅದೇ ಜುಲೈ 7 ರಂದು ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  14 ನೇ ಬಜೆಟ್ ಮಂಡಿಸಲು ಪ್ರಾರಂಭಿಸುತ್ತಿದ್ದರೆ, ಇತ್ತ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡು ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಅವರ ಸೀಟಿನಲ್ಲಿ ವಿರಾಜಮಾನನಾಗಿ ಸುದ್ದಿಯಾದ ತ್ರಿವಿಕ್ರಮನೇ ಈ ತಿಪ್ಪೇರುದ್ರ!

ಇದನ್ನು ಓದಿ: ಅನಂತಾಲಿಂಗನ ಹಿಂದೆ ನಾನಾ ಲೆಕ್ಕಾಚಾರ: ನಂಗೆ ಮೋದಿಯಷ್ಟೇ ವಯಸ್ಸು ಎಂದು ಕರಡಿ ಸಂಗಣ್ಣ ಹೇಳಿದ ಮೇಲೆ ಆಗಿದ್ದೇನು?

ಅಂದಹಾಗೆ ಈ ತಿಪ್ಪೇರುದ್ರಪ್ಪ ಅನಾಯಾಸವಾಗಿ ವಿಧಾನಸಭೆಗೆ ನುಗ್ಗಿ ಕರೆಮ್ಮ ಅವರ ಸೀಟಿನಲ್ಲಿ ಕುಳಿತಿದ್ದಕ್ಕೂ ಶಕ್ತಿ ಸೌಧದ ಕೆಲ ಮಹಿಳಾ ಮಣಿಗಳು ಹಾಗೂ ಷೋ ಮ್ಯಾನ್‌ಗಳಿಗೂ ಎತ್ತಂಣಿದೆತ್ತಣ ಸಂಬಂಧ ಎನ್ನವಿರಾ!

ಇದೆ ಏನಾಯ್ತು ಎಂದರೆ ತಿಪ್ಪೇರುದ್ರಪ್ಪ ಸೌಧಕ್ಕೆ ನುಗಿದ್ದಕ್ಕೆ ಶಕ್ತಿ ಸೌಧದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ. ಪೊಲೀಸರು ನಕಲಿ ಪಾಸ್ ಇಟ್ಟುಕೊಂಡು ವಿಧಾನಸೌಧಕ್ಕೆ ನುಗ್ಗುತ್ತಿದ್ದ ಷೋ ಮ್ಯಾನ್‌ಗಳನ್ನು ಅಡ್ಡಗಟ್ಟು ಹೊರಗಟ್ಟಿದ್ದಾರೆ.

ಇದನ್ನೂ ಓದಿ: ಬಜೆಟ್ ವೇಳೆ ಅಪರಿಚಿತ ವ್ಯಕ್ತಿ ಪ್ರವೇಶ: ವಿಧಾನಸೌಧ, ಶಾಸಕರ ಭವನಕ್ಕೆ ಹೈಟೆಕ್‌ ಭದ್ರತೆ

ಇನ್ನು ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಕೆಲ ಮಹಿಳಾ ಮಣಿಗಳು ಮಧ್ಯಾಹ್ನ ಊಟದ ಸಮಯದಲ್ಲೋ ಅಥವಾ ಇನ್ಯಾವ ಸಮಯದಲ್ಲೋ ಒಂದಷ್ಟು ಹೊತ್ತು ಹೊರಗೆ ಹೋಗಿ ಚಾಕು, ಚೂರಿ, ತರಕಾರಿ, ಪರಕಾರಿ  ಸೇರಿದಂತೆ ಮನೆಗೆ ಬೇಕಾದ ಅಗತ್ಯ ಸರಂಜಾಮುಗಳನ್ನೆಲ್ಲಾ ಖರೀದಿಸಿ ತರುತ್ತಿದ್ದರು. ಆದರೆ ಈಗ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿರುವುದರಿಂದ ಇಂತಹ ಸರಂಜಾಮುಗಳಿಗೆ ವಿಧಾನಸೌಧದೊಳಕ್ಕೆ ಪ್ರವೇಶವಿಲ್ಲ. 

ಪಾಪ ಶಾಪಿಂಗ್ ಇಲ್ಲದೇ ಈ ಹೈಣ್ಣೈಕ್ಳು ಕೆಲಸ ಮಾಡೋದು ಹೇಗೆ?

ಛೇ.. ಏ ತಿಪ್ಪೇರುದ್ರಪ್ಪ ಎಂಥಾ ಕೆಲಸ ಮಾಡಿಬಿಟ್ಟೆ!!!

ಇದನ್ನೂ ಓದಿ: ಶಾಸಕನೆಂದು ಹೇಳಿ ವಿಧಾನಸಭೆ ಒಳಹೋದ ವಕೀಲ: ಪೊಲೀಸರ ಕೈಗೆ ಸಿಕ್ಕು ವಿಲವಿಲ

ಲೀಗಲ್ ಅಫೇರ್!
ವಿಧಾನ ಮಂಡಲದಲ್ಲಿ ಈ ವಾರ ಅತಿ ಹೆಚ್ಚು ಚರ್ಚೆಯಾಗಿದ್ದು ವರ್ಗಾವಣೆ ವ್ಯವಹಾರ ವಿಚಾರ. ಕುಮಾರಸ್ವಾಮಿ-ಸಿದ್ದರಾಮಯ್ಯ ಅವರಿಂದ ಮೊದಲುಗೊಂಡು ಯತ್ನಾಳ್ - ಬೈರತಿ ಸುರೇಶ್‌ವರೆಗೆ ವರ್ಗಾವಣೆ ವಿಚಾರದಲ್ಲಿ ವಾಕ್ ಕಾದಾಟವೋ ಕಾದಾಟ…

ಇಂತಹ ವಾಕ್ ಕಾದಾಟಗಳ ಪೈಕಿ  ಹೈಲೈಟ್ ಆಗಿದ್ದು  ಬಿಜೆಪಿ ಬಸವನಗೌಡ ಯತ್ನಾಳ್ ಹಾಗೂ ಸಚಿವ ಬೈರತಿ ಸುರೇಶ್ ನಡುವೆ ವ್ಯಾಪಾರ - ವ್ಯವಹಾರ ಜಗಳಾಟ. 

ಇದನ್ನೂ ಓದಿ: ವಿಧಾನಸೌಧ ಬಜೆಟ್‌ ಅಧಿವೇಶನದಲ್ಲಿ ಕುಳಿತ ಅನಾಮಿಕ ವ್ಯಕ್ತಿ: 15 ನಿಮಿಷವಾದರೂ ಗೊತ್ತಾಗಿಲ್ಲ

ಈ ಜಗಳದ ವೇಳೆ ಯತ್ನಾಳ್ ಪರ ಧರಣಿಗಿಳಿದಿದ್ದ ಬಿಜೆಪಿಯ ಉದಯ ಗರುಡಾಚಾರ್ ಅವರು ಮೊಗಸಾಲೆಯಲ್ಲಿ  ಸಚಿವ ಬೈರತಿ ಸುರೇಶ್ ಅವರಿಗೆ ಎದುರಾದರು. ಕೂಡಲೇ ಸುರೇಶ್ ಅವರು, ‘ಏನ್ ಗುರು ನಾನು ವ್ಯವಹಾರ ಮಾಡಿದ್ದೀನಾ? ನನ್ನ ವ್ಯಾಪಾರ-ವ್ಯವಹಾರ ಏನು ಎನ್ನೋದು ನಿಂಗೆ ಗೊತ್ತಿಲ್ವಾ? ಅವಯ್ಯನ ಮಾತಿಗೆ ಕೈ ಎತ್ತುತಿಯಲ್ಲಾ?’ ಎಂದು ಪ್ರೀತಿಯಿಂದ ಗದರಿದರು.

ಇದಕ್ಕೆ ಉದಯ್, ‘ಯತ್ನಾಳ್ ಆ ರೀತಿ ಮಾಡಿದ್ದು ತಪ್ಪು. ನಾವು ನಮ್ಮ ‘ವ್ಯವಹಾರ’ ಮುಂದುವರೆಸೋಣ. ಯತ್ನಾಳ್ ಹೇಳಿದ ವ್ಯವಹಾರ ಅಲ್ಲ ಮಾರಾಯಾ?’ ಎಂದು ಹಾಸ್ಯಚಟಾಕಿ ಹಾರಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ  ಸೀನಿಯರ್ ಬಿಜೆಪಿ ಶಾಸಕರು ‘ಸದನದಲ್ಲಿ ವ್ಯವಹಾರ ಮಾಡ್ತಿದ್ದೀರಿ ಎಂದು ಆರೋಪಿಸುವುದು ಎಷ್ಟು ಅಸಂಬಂದ್ಧ ಎಂದು ತಮ್ಮ ಬುದ್ದಿಮತ್ತೆ ಪ್ರದರ್ಶಿಸತೊಡಗಿದರು.

ಮುಂದುವರೆದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಂತೂ ‘ಸಂಸದೀಯ’ ಎನ್ನುವ ಪದವನ್ನೇ ಬಿಟ್ಟುಬಿಡುತ್ತಾರೆ. ಕಾನೂನು ಮತ್ತು ‘ವ್ಯವಹಾರಗಳ ಸಚಿವ’ ಎನ್ನುತ್ತಾರೆ ಎಂದರು. ಜತೆಗೆ ಈ ವ್ಯವಹಾರ ಎಂಬ ಪದವನ್ನು ಇಂಗ್ಲೀಷ್‌ನಲ್ಲಿ ಹೇಳಿದರೆ ಅಫೇರ್ ಎಂಬ ಅರ್ಥ ಬರುತ್ತದೆ ಆಗ ಎಂತಹ ಆಪಾರ್ಥವಾಗುತ್ತದೆ ನೋಡಿ ಎಂದರು.

ಏನಾಗತ್ತೆ ಸಾರ್ ಎಂಬ ಪತ್ರಕರ್ತರ ಪ್ರಶ್ನೆಗೆ, ಕಾನೂನು ಮತ್ತು ವ್ಯವಹಾರ  ಸಚಿವ ಎಂಬುನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದರೆ ಲೀಗಲ್ ಅಫೇರ್ ಮಿನಿಸ್ಟ್ರರ್ ಆಗ್ತಾರೆ ಕಣ್ರೀ.. ಎಂದು ನಕ್ಕರು. 
‘ಲೀಗಲ್ ಅಫೇರ್ ಒಳ್ಳೆಯದೇ ಅಲ್ವಾ ಸರ್ ಎಂಬ ಪತ್ರಕರ್ತರ ಪ್ರಶ್ನೆಗೆ ಜಾಣ ಕಿವುಡರಾದ ಈ ಮಾಜಿ ಲೀಗಲ್ ಅಫೇರ್ಸ್‌ ಸಚಿವರು ಅಲ್ಲಿಂದ ಮಾಯವಾದರು.

ಮೇಲೆ ಬಿದ್ದರು!!!
ಮಹಿಳೆಯರಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ ಬಗ್ಗೆ ನಾಡಿನಾದ್ಯಂತ ಭರ್ಜರಿ ಚರ್ಚೆ ನಡೆಯುತ್ತಿರುವಾಗ ಅದು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಗೊಳ್ಳದೆ ಇರುತ್ತದೆಯೇ? ಖಂಡಿತ ಪ್ರಸ್ತಾಪ ಆಯ್ತು.

ಮೊನ್ನೆ ಸದನದಲ್ಲಿ  ಆಡಳಿತ ಪಕ್ಷದವರು ಈ ಯೋಜನೆ ಹೇಗೆ ನಾಡಿನ ಮಹಿಳೆಯರಿಗೆ ಶಕ್ತಿ ತುಂಬಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರೆ, ಎಲ್ಲ ಬಸ್ಸನ್ನಲೂ ಫ್ರೀ ಬಿಡಬೇಕು. ಎಸಿ ಬಸ್‌ನಲ್ಲಿ ಫ್ರೀ ಕೊಟ್ಟಿಲ್ಲ. ನೀವು ಮಾತು ತಪ್ಪಿದಿರಿ ಎಂದು ಪ್ರತಿಪಕ್ಷಗಳು ಟೀಕೆಗೆ ಯತ್ನಿಸುತ್ತಿದ್ದವು. ಇದರ ಮಧ್ಯೆ ಬಿಜೆಪಿಯ ಅ. ದೇವೇಗೌಡ ಅವರ ಒಂದು ಹೇಳಿಕೆ ಚರ್ಚೆಯನ್ನು ಬೇರೆ ಸ್ಥರಕ್ಕೆ ಒಯ್ದಿತ್ತು. ಶಕ್ತಿ ಯೋಜನೆಯ ಟೀಕಿಸುವ ಭರದಲ್ಲಿ ಅ. ದೇವೇಗೌಡರು ‘ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಎಲ್ಲೆಂದರಲ್ಲಿಗೆ ಹೋಗುತ್ತಿದ್ದಾರೆ’ ಎಂದು ಬಿಟ್ಟರು.

‘ಎಲ್ಲೆಂದರಲ್ಲಿಗೆ’ ಅಂದರೆ ಏನರ್ಥ ಎಂದು ಕಾಂಗ್ರೆಸ್ಸಿಗರು ಪಟ್ಟು ಹಾಕತೊಡಗಿದರು. ಕಾಂಗ್ರೆಸ್‌ನ ಎಸ್.ರವಿ. ಇಂತ ಮಾತಿಗೆ ಏನು ಅರ್ಥ? ಮಹಿಳೆಯರ ಬಗ್ಗೆ ಹೀಗೆ ಮಾತನಾಡುವುದು ತಪ್ಪು ಎಂದರು. ಅಷ್ಟಕ್ಕೆ ಬಿಡದೇ ಮಹಿಳೆಯರ ಅವಹೇಳನ ನಡೆಯುತ್ತಿದ್ದರು ಬಿಜೆಪಿಯ ತೇಜಸ್ವಿನಿ ಗೌಡ ಸುಮ್ಮನಿದ್ದಾರೆ ಇದು ಸರಿಯೇ ಎಂದು ತೇಜಸ್ವಿನಿ ಅವರನ್ನು ಚರ್ಚೆಗೆ ಎಳೆಯಲು ನೋಡಿದರು.

ಏ. ಬಿಡ್ರಿ, ದೇವೇಗೌಡರು ಬೇರೆ ಅರ್ಥದಲ್ಲಿ ಹೇಳಿಲ್ಲ ಎಂದೇನೋ ತೇಜಸ್ವಿನಿ ಸಬೂಬು ನೀಡುತ್ತಿದ್ದರು, ಅಷ್ಟರೊಳಗೆ  ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ನೋಡಿ ಬಿಜೆಪಿಯವರು ಹೇಳಿಕೆ ನೀಡಿದ್ದಕ್ಕೆ ಸುಮ್ಮನಿದ್ದಾರೆ. ಆಡಳಿತ ಪಕ್ಷದವರು ಮಹಿಳೆಯರ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದರೆ ‘ತೇಜಸ್ವಿನಿಯವರು ಮೇಲೆ ಬೀಳುತ್ತಿದ್ದರು’  ಎಂದು ಬಿಟ್ಟರು. ತಕ್ಷಣ ಎದ್ದು ನಿಂತ ತೇಜಸ್ವಿನಿ ಈ ಮೇಲೆ ಬೀಳುವುದು ಎಂದರೆ ಏನು? ಸ್ವಲ್ಪ ಸರಳ ಕನ್ನಡದಲ್ಲಿ ವಿವರಿಸಿ ಎಂದು ಪಟ್ಟು ಹಾಕಿದಾಗ ತಿಬ್ಬೇಗೌಡ ಸೈಲೆಂಟ್!

ಸಿದ್ದು ಚಿಕ್ಕಬಳ್ಳೇಕೆರ
ಶ್ರೀಕಾಂತ್ ಎನ್ ಗೌಡಸಂದ್ರ
ಮೋಹನ್ ಹಂಡ್ರಂಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ