ಮುಡಾ ಹಗರಣದ ಕುರಿತು ಸರ್ಕಾರ ತಪ್ಪೊಪ್ಪಿಗೆ: ಬಿಜೆಪಿ

By Kannadaprabha News  |  First Published Sep 4, 2024, 6:13 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಾಬೀತಾದಂತಾಗಿದೆ ಎಂದು ಆರೋಪಿಸಿದ ಪ್ರತಿಪಕ್ಷದ ನಾಯಕ ಆ‌ರ್.ಅಶೋಕ್ ಹಾಗೂ ವಿಧಾನಪರಿಷತ್ತಿನ ಸದಸ್ ರವಿಕುಮಾ‌ರ್


ಬೆಂಗಳೂರು(ಸೆ.04):  ಮುಡಾದ ಮಾಜಿ ಆಯುಕ್ತರನ್ನು ಅಮಾನತು ಮಾಡುವ ಮೂಲಕ ಹಿಂದಿನನಿರ್ಣಯಗಳುಹಾಗೂನಿರ್ದೇಶನಗಳು ತಪ್ಪಾಗಿವೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಹೇಳಿದೆ. 

ಮಂಗಳವಾರ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎನ್.ರವಿಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಾಬೀತಾದಂತಾಗಿದೆ ಎಂದು ಆರೋಪಿಸಿದರು. 

Tap to resize

Latest Videos

ಮುಡಾ ಸುಳಿಯಲ್ಲಿ ಸಿಲುಕಿ ಚಾಮುಂಡಿ ತಾಯಿಗೆ ಶರಣಾದ ಸಿದ್ದರಾಮಯ್ಯ, ಅರ್ಚಕರಿಂದ ಕುಂಕುಮ ಹಚ್ಚಿಸಿಕೊಂಡ ಸಿಎಂ!

ಅಶೋಕ್ ಮಾತನಾಡಿ, 50:50 ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನ ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಪರಿಗಣಿಸಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್‌ ಅವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ಪೂರ್ವಾನ್ವಯವಾಗುತಂತೆ 50:50 ಅಮಪಾತದಲ್ಲಿ ನೀಡಿರುವುದೂ ಸಹ ತಪ್ಪು ಎಂದು ಮುಡಾ ಮಾಜಿ ಆಯುಕ್ತ ದಿನೇಶ್‌ರ ಅಮಾನತು ಪತ್ರ. ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ತಾಂತ್ರಿಕ ಸಮಿತಿ ಮುಡಾ ಅಕ್ರಮದ ಬಗ್ಗೆ ವರದಿ ನೀಡಿ 10 ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತನಿಖೆ ನಡೆಯುತ್ತಿದ್ದರೂ ತಪ್ಪಿತಸ್ಥ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಹಾವೇರಿವಿ ಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈಗ ದಿಢೀರನೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯ ಮುಡಾ ಹಗರಣ ಬಯಲಿಗೆ ಬಂದಾಗಿನಿಂದ ಗಲಿಬಿಲಿಗೊಂಡಿದ್ದಾರೆ. ಈಗಲಾದರೂ ನೈತಿಕ ಹೊಣೆ ಹೊತ್ತು ಸಿದರಾಮಯ ಅವರು ಮುಖ್ಯ ಮಂತಿ ಸಾವಣೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸಬೇಕು. ತಮ್ಮ ಗೌರವ ಕಾಪಾಡಿಕೊಳ್ಳುವುದರ ಜೊತೆಗೆ ರಾಜ್ಯದ ಗೌರವವನ್ನೂ ಉಳಿಸಬೇಕು ಎಂದು ಆಗ್ರಹಿಸಿದರು. 

ಚಾಮುಂಡಿ ಬೆಟ್ಟಕ್ಕೆ ಸಿಎಂ ಕಾಲಿಟ್ಟಾಗಲೇ ಆಯ್ತಾ ಅಪಶಕುನ, ಚಾಮುಂಡೇಶ್ವರಿಯ ಪ್ರಸಾದ ಪಡೆಯದ ಮಹದೇವಪ್ಪ

ರವಿಕುಮಾರ್‌ ಮಾತನಾಡಿ, ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ದವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್‌ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೀರಿ ಎಂದರು. 

ದಿನೇಶ್ ಕುಮಾರ್‌ ಅಮಾನತು ತಮಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳಉ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ಅವರ ಜಾಣ ಉತ್ತರವು ಕರ್ನಾಟಕದ ಜನರನ್ನು ದಿಗ್ಗಾಂತರನ್ನಾಗಿ ಮತ್ತು ಮೂಢರನ್ನಾಗಿ ಮಾಡುವಂಥದ್ದು ಎಂದು ಟೀಕಿಸಿದರು. ಅಕ್ರಮವಾಗಿ ಸಿಕ್ಕಿದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

click me!