ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ

Published : Nov 03, 2025, 03:44 PM IST
Darshan case

ಸಾರಾಂಶ

ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ ಮಾಡಲಾಗಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ರಿಂದ ಆರಂಭಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಬೆಂಗಳೂರು (ನ.03) ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಇಂದು ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಚಾರ್ಜ್ ಫ್ರೇಮ್ ಕಾರಣ ಇಂದು ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಆರೋಪಿಗಳ ಮೇಲಿನ ದೋಷಾರೋಪ ಪಟ್ಟಿ ಓದಿದ ನ್ಯಾಯಾಧೀಶರು, ಎಲ್ಲಾ ಆರೋಪಿಗಳ ವಿರುದ್ದ ಆರೋಪ ನಿಗದಿ ಮಾಡಿದ್ದರೆ. ಇನ್ನು ನಟ ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಈ ಆರೋಪ ಸುಳ್ಳು ಎಂದಿದ್ದಾರೆ.ಹೀಗಾಗಿ ಪ್ರಕರಣದ ವಿಚಾರಣೆಯನ್ನು ನೆವೆಂಬರ್ 10 ರಿಂದ ಆರಂಭಿಸುವುದಾಗಿ ಕೋರ್ಟ್ ಹೇಳಿದೆ.

ಆರೋಪಿಗಳಿಂದ ಸಹಿ ಪಡೆದ ಕೋರ್ಟ್ ಆಫೀಸರ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಚಾರ್ಜ್ ಫ್ರೇಮ್ ಮಾಡಲಾಗಿದೆ. ಆರೋಪ ನಿರಾಕರಿಸಿರುವ ಕಾರಣ ನವೆಂಬರ್ 10 ರಿಂದ ವಿಚಾರಣೆ ಆರಂಭಗೊಳ್ಳುತ್ತಿದೆ. ಇತ್ತ ಎಲ್ಲಾ ಆರೋಪಿಗಳ ಜೊತೆ ಮಾತನಾಡಲು ವಕೀಲರು ಅವಕಾಶ ಕೋರಿದ್ದಾರೆ. ಇದರ ನಡುವೆ ಚಾರ್ಜ್ ಫ್ರೇಮ್ ದಾಖಲೆಗೆ ಎಲ್ಲಾ ಆರೋಪಿಗಳಿಂದ ಕೋರ್ಟ್ ಆಫೀಸರ್ ಸಹಿ ಪಡೆಯಲಿದ್ದಾರೆ. ಸಹಿ ಪಡೆದ ಬಳಿಕ ದರ್ಶನ್ ಸೇರಿ 7ಆರೋಪಿಗಳು ಜೈಲಿಗೆ ಶಿಫ್ಟ್ ಆಗಲಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸರು ಬಾರಿ ಭಿಗಿ ಭದ್ರತೆಯಲ್ಲಿ ಆರೋಪಿಗಳನ್ನು 57ನೇ ಸೆಷನ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಳಿಕ ಜಡ್ಜ್ ಐ.ಪಿ.ನಾಯ್ಕ್, ಎಲ್ಲಾ ಆರೋಪಿಗಳ ಹೆಸರು ಕೂಗಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳ ದೋಷಾರೋಪ ಪಟ್ಟಿ ಓದಿದ್ದಾದರೆ.

ಪವಿತ್ರಾಗೌಡ ಪಾತ್ರದ ಬಗ್ಗೆ ಇರುವ ಸಾರಾಂಶ ಓದಿದ ಜಡ್ಜ್

ಪವಿತ್ರಾಗೌಡ ಗೆ ಮೆಸೆಜ್ ಬಂದ ವಿಚಾರ, ಕಿಡ್ನಾಪ್ ಗೆ ನಡೆಸಿದ ಸಂಚು, ಅಕ್ರಮಕೂಟ, ಒಳಸಂಚು, ಅಪಹರಣ, ಮಾಡಿರುವ ಬಗ್ಗೆ ನ್ಯಾಯಾಧೀಶರು ಸಾರಾಂಶ ಓದಿದ್ದಾರೆ. ಪವಿತ್ರಾಗೌಡಗೆ ರೇಣುಕಾಸ್ವಾಮಿ ಮೇಸೇಜ್ ಮಾಡಿದ ಬಳಿಕ ಕಿಡ್ನಾಪ್ ಪ್ಲಾನ್ ಮಾಡಲಾಗಿತ್ತು. ವ್ಯವಸ್ಥಿತವಾಗಿ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆ ತಂದು ಸಂಚಿನ ಪ್ರಕಾರ ಹಲ್ಲೆ ಮಾಡಲಾಗಿದೆ ಎಂದು ನ್ಯಾಯಾಧೀಶರು

ರೇಣುಕಾಸ್ವಾಮಿ ಯನ್ನ ಕಿಡ್ನಾಪ್ ಮಾಡಿ ಶೆಡ್ ಗೆ ಕರೆತಂದು ಹಲ್ಲೆ ಮಾಡಿರುವುದು, ಚಪ್ಪಲಿಯಲ್ಲಿ ಹೊಡೆದಿರುವುದು, ಯಾಕೆ ಮೆಸೇಜ್ ಮಾಡಿದ್ದೀಯಾ ಎಂದು ಹೊಡೆದು ಅವಮಾನ ಮಾಡಿದ್ದೀರಿ. ಚಪ್ಪಲಿಯಿಂದ ಮರದ ದಿಮ್ಮಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಿರಿ.ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿ ಎ2 ದರ್ಶನ್ ಹಲ್ಲೆ ಮಾಡಿ ಕೊಲೆ ಮಾಡಿದ್ದಿರಿ. ಕೊಲೆ ಬಳಿಕ ಕೆಲವರಿಗೆ ಹಣ ಆಸೆ ತೊರಿಸಿ ತಪ್ಪು ಒಪ್ಪಿಕೊಳ್ಳುವಂತೆ ಸಂಚು ರೂಪಿಸಿದ್ದೀರಿ ಎಂದು ಜಡ್ಜ್ ದೋಷಾರೋಪ ಓದಿದ್ದರೆ.

ಸ್ನೇಹಿತೆ ಸಮತಾಗೆ ತಿಳಿಸಿ ಸಾಕ್ಷಿ ನಾಶ ಮಾಡುವ ಯತ್ನ ಮಾಡಿದ್ದೀರಿ. 2ನೇ ಆರೋಪಿಯಿಂದ 17ನೇ ಆರೋಪಿ ಜತೆ ಸೇರಿ ಒಳಸಂಚು ಮಾಡಿದ್ದೀರಿ ಎಂದು ಜಡ್ಜ್ ದೋಷಾರೋಪ ಪಟ್ಟಿ ಓದಿದ್ದಾರೆ. ಈ ವೇಳೆ ಇದೆಲ್ಲಾ ಸುಳ್ಳು ಎಂದು ಎಲ್ಲಾ 17 ಆರೋಪಿಗಳು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!