ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ ಆರೋಪಿಗಳು ಕೋರ್ಟ್‌ಗೆ ಹಾಜರ್

Published : Nov 03, 2025, 02:39 PM IST
Darshan Pavithra Gowda

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ ಆರೋಪಿಗಳು ಕೋರ್ಟ್‌ಗೆ ಹಾಜರ್, ಭಾರಿ ಭಿಗಿ ಭದ್ರತೆಯೊಂದಿಗೆ 6 ಆರೋಪಿಗಳನ್ನು ಕೋರ್ಟ್‌ಗೆ ಕರೆ ತಂದಿದ್ದಾರೆ. ಕೋರ್ಟ್ ಸುತ್ತಲೂ ಭಿಗಿ ಭದ್ರತೆ ಕಲ್ಪಿಸಲಾಗಿದೆ.

ಬೆಂಗಳೂರು (ನ.03) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ಆರೋಪಿಗಳು ಇಂದು 57ನೇ ಸೆಷನ್ ಕೋರ್ಟ್ ಹಜರಾಗಿದ್ದಾರೆ. ಇಂದು ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳ ಮೇಲೆ ಕೋರ್ಟ್ ದೋಷಾರೋಪ ಫ್ರೇಮ್ ಮಾಡಲಿದೆ. ಹೀಗಾಗಿ ಖುದ್ದು ಹಾಜರಾಗಲು ಕೋರ್ಟ್ ಸೂಚಿಸಿತ್ತು. ಇದರಂತೆ ಭಾರಿ ಬಿಗಿ ಭದ್ರತೆಯೊಂದಿಗೆ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಸೆಷನ್ ಕೋರ್ಟ್‌ಗೆ ಹಾಜರಾಗಿದ್ದಾರೆ.

ಎರಡು ಸಿಎಆರ್ ವಾಹನಗಳಲ್ಲಿ ದರ್ಶನ್ ಅಂಡ್ ಗ್ಯಾಂಗ್‌ನ್ನು ಪೊಲೀಸರು ಕೋರ್ಟ್‌ಗೆ ಕರೆ ತಂದಿದ್ದಾರೆ. ಆರೋಪಿಗಳ ಪೊಲೀಸ್ ವಾಹನಕ್ಕೆ ಮೂರು ಪೊಲೀಸ್ ಜೀಪ್ ಗಳಲ್ಲಿ ಎಸ್ಕಾರ್ಟ್ ನೀಡಲಾಗಿದೆ. ಬಿಳಿ ಬಣ್ಣದ ಸಿಎಆರ್ ಟಿಟಿ ವಾಹನದಲ್ಲಿ ಪವಿತ್ರಾ ಗೌಡ, ನೀಲಿ ಬಣ್ಣದ ಸಿಎಆರ್ ಬಸ್ ನಲ್ಲಿ ದರ್ಶನ್ ಸಹಿತ ನಾಲ್ವರ ರವಾನೆ ಮಾಡಲಾಗಿತ್ತು.

ಕೊಲೆ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ

ರೇಣುಕಾಸ್ವಾಮಿ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ವಿಚಾರಣೆ ನಡೆಸಿರವ ಕೋರ್ಟ್ ಇಂದು ಕೋರ್ಟ್‌ಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ಕೋರ್ಟ್‌ಗೆ ಹಾಜರಾಗಲು ಸೂಚಿಸಿದ್ದರು. ಕೋರ್ಟ್‌ಗೆ ಎಲ್ಲಾ ಆರೋಪಿಗಳು ಹಾಜರಾದ ಬಳಕ ಆರೋಪಿಗಳ ಮೇಲಿರುವ ದೋಷಾರೋಪಗಳನ್ನ ಜಡ್ಜ್ ಓದಿ ಹೇಳಲಿದ್ದಾರೆ. ಬಳಿಕ‌ ದೋಷಾರೋಪಗಳ ಕುರಿತು ಆರೋಪಿಗಳನ್ನು ನ್ಯಾಯಾಧೀಶರು ಪ್ರಶ್ನಿಸಲಿದ್ದಾರೆ .

ಆರೋಪಿಗಳು ದೋಷಾರೋಪ ಒಪ್ಪಕೊಂಡರೆ ಶಿಕ್ಷೆ ಪ್ರಕಟ ಸಾಧ್ಯತೆ

ಆರೋಪಿಗಳು ದೋಷಾರೋಪ ನಿರಾಕರಿಸಿದರೆ ಸಾಕ್ಷ್ಯಗಳ ಮೂಲಕ ಪ್ರಕರಣದ ವಿಚಾರಣೆ ನಡೆಯಲಿದೆ. ದೋಷಾರೋಪ ಪಟ್ಟಿ ಓದಿದ ಬಳಿಕ ಆರೋಪಿಗಳು ಯಾವುದೇ ತಕರಾರಿಲ್ಲದೆ ದೋಷಾರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!