ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಅಂಡ್ ಗ್ಯಾಂಗ್ ಆರೋಪಿಗಳಿಂದ ಕೊಲೆಯ ರಹಸ್ಯ ಬಾಯಿಬಿಡಿಸಲ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಲಾಗಿತ್ತು. ಡೈನಾಮಿಕ್ ಪೊಲೀಸ್ ಆಫೀಸರ್ ಡಿಸಿಪಿ ಗಿರೀಶ್ ಕೊಟ್ಟ ಲಾಠಿ ಏಟಿಗೆ ದರ್ಶನ್ ಆಪ್ತ ವಿನಯ್ ಕಾಲಿಗೆ ಗಂಭೀರ ಗಾಯವಾಗಿತ್ತು.
ಬೆಂಗಳೂರು (ಜೂ.17): ಪ್ರೇಯಸಿಗೆ ಅಶ್ಲೀಲ ಸಂದೇಶ ಕಳಿಸಿದನೆಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಬರ್ಬರವಾಗಿ ಕೊಂದ ಘಟನೆ ಸಂಬಂಧ ದರ್ಶನ್ ಅಂಡ್ ಗ್ಯಾಂಗ್ ಬಂಧನ ಆಗಿ ವಿಚಾರಣೆ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೊದಲ ದಿನ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿಸಿದಾಗಇಡೀ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ಸುದ್ದಿಮಾಧ್ಯಮಗಳಿಂದ ಇಡಿದು, ರಾಜಕಾರಣಿಗಳವರೆಗೆ ದರ್ಶನ್ ಬಂಧನದ್ದೇ ಮಾತು. ಅದರಲ್ಲೂ ಕನ್ನಡದ ಸ್ಟಾರ್‌ನಟ ಪ್ರಭಾವಿಯಾಗಿರುವ ನಟ ದರ್ಶನ್ ತೂಗುದೀಪ ಅವರ ಕೈಗೆ ಕೋಳ ಹಾಕಿ ಜೀಪ್‌ಗೆ ಹತ್ತಿಸುದುಂಟೇ ಅಂತಹ ಖಡಕ್ ಅಧಿಕಾರಿ ಈ ರಾಜ್ಯದಲ್ಲಿ ಯಾರಿದ್ದಾರಪ್ಪ ಎಂದು ಪ್ರಶ್ನಿಸಿದ್ದರು.
ಹೌದು, ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಮೊದಲಿಗೆ ಗೃಹಸಚಿವರ ಗಮನಕ್ಕೆ ಬಂದಿತ್ತು. ಅವರ ಸೂಚನೆ ಸಿಗುತ್ತಿದ್ದಂತೆ ಸೀದಾ ದರ್ಶನ್ ಇದ್ದ ಸ್ಥಳಕ್ಕೆ ಹೋಗಿ ವಶಕ್ಕೆ ಪಡೆದಿದ್ದ ಖಡಕ್ ಪೊಲೀಸ್ ಅಧಿಕಾರಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್, ಈ ಪ್ರಕರಣದಲ್ಲಿ ಯಾವ ಆರೋಪಿಗಳನ್ನು ತಪ್ಪಿಸಿಕೊಳ್ಳದಂತೆ ಸೆರೆಹಿಡಿಯುವಲ್ಲಿ ಪಾತ್ರ ದೊಡ್ಡದಿದೆ. ಇಂಥ ಖಡಕ್ ಅಧಿಕಾರಿ ಇಲ್ಲದಿದ್ರೆ ಕೇಸ್ ಆರಂಭದಲ್ಲಿ ಮುಚ್ಚಿಹೋಗುತ್ತಿತ್ತೇನೋ ಆದರೆ ಸ್ಟಾರ್ ನಟ ಎಂಬುದನ್ನ ನೋಡದೇ ಕೊಲೆ ಆರೋಪ ಕೇಳಿಬರುತ್ತಿದ್ದಂತೆ ಹಿಂದೆಮುಂದೆ ನೋಡದೇ ಬಂಧಿಸಿ ಎಳೆದುತಂದಿದ್ದರು.
undefined
ಡಿ'ಗ್ಯಾಂಗ್‌ನ ಒಬ್ಬೊಬ್ಬ ಆರೋಪಿಯದೂ ಒಂದೊಂದು ಅವತಾರ: ದರ್ಶನ್ ಜತೆ ಬಂಧಿತರ ವಿಸ್ತೃತ ಮಾಹಿತಿ
ನಟ ದರ್ಶನ್ ಅಂಡ್ ಗ್ಯಾಂಗ್ ಬಂಧನ ಬಳಿಕವೂ ಮೊದಲಿಗೆ ಹಣಕಾಸಿನ ವಿಚಾರಕ್ಕೆ ನಾವೇ ಕೊಂದಿದ್ದಾಗಿ ಹೇಳಿ ಗ್ಯಾಂಗ್ ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿತ್ತು. ಆದರೆ ಒಬ್ಬೊಬ್ಬರಾಗಿ ಬಂಧಿತರಾಗಿ ಪೊಲೀಸ್ ಭಾಷೆಯಲ್ಲಿ ವಿಚಾರಿಸುತ್ತಿದ್ದಂತೆ ನಿಜ ಬಾಯಿಬಿಟ್ಟಿದ್ದರು. ಆರೋಪಿಗಳಿಂದ ಬಾಯಿ ಬಿಡಿಸುವಲ್ಲಿ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕೊಟ್ಟಿದ್ದ ವಿಚಾರ ಇದೀಗ ಬಯಲಾಗಿದೆ.
Darshan Case: ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್ ಮಾತ್ರ ಇನ್ನೂ ನಾಪತ್ತೆ!
ಹೌದು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಬಳಿಕ ಕೊಲೆ ಘಟನೆ ಬಗ್ಗೆ ದರ್ಶನ್‌ರ ರಕ್ಷಿಸುವ ಪ್ರಯತ್ನ ನಡೆದಿತ್ತು. ಆದರೆ ಖಡಕ್ ಅಧಿಕಾರಿ ಡಿಸಿಪಿ ಗಿರೀಶ್ ಆರೋಪಿಗಳಿಗೆ ಸತ್ಯ ಬಾಯಿಬಿಡಿಸಲು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟಿದ್ದರು. ಲಾಠಿಯಿಂದ ಬಿದ್ದ ಏಟಿಗೆ ಕೊಲೆ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದ ದರ್ಶನ್ ಆಪ್ತ ವಿನಯ್. ಮೊದಲಿಗೆ ಬಾಯಿಮಾತಿನಿಂದ ವಿಚಾರಣೆ ಮಾಡಲಾಗಿತ್ತು. ಆದರೆ ಮಾಹಿತಿ ನೀಡದ ಆರೋಪಿ ವಿನಯ್‌ಗೆ ಲಾಠಿಯಿಂದ ಬೆಂಡೆತ್ತಿದ್ದ ಡಿಸಿಪಿ ಗಿರೀಶ್. ಕೊಲೆಯ ರಹಸ್ಯ ಬಿಡಿಸಲು ಆರೋಪಿಗಳಿಗೆ ಲಾಠಿ ರುಚಿ ತೋರಿಸಿದ್ದರಿಂದ ಆರೋಪಿಗಳ ಪೈಕಿ ವಿನಯ್ ಕಾಲಿಗೆ ಗಂಭೀರ ಗಾಯವಾಗಿತ್ತು. ಬಲವಾದ ಪೆಟ್ಟು ಬಿದ್ದ ಕೂಡಲೇ ಪೊಲೀಸರೇ ನಾಗರಭಾವಿಯ ಅಭಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇನ್ಶುಲಿನ್ ತೆಗೆದುಕೊಳ್ಳುತ್ತಿದ್ದ ಆರೋಪಿ ವಿನಯ್. ಪೊಲೀಸರ ಏಟಿನಿಂದ ಶುಗರ್ ಲೇವಲ್ 400ರ ಮೇಲೆ ಹೋಗಿತ್ತು. ಹೀಗಾಗಿ ಎರಡು ದಿನಗಳ ಹಿಂದಷ್ಟೇ ಅಭಯಾ ಆಸ್ಪತ್ರೆಗೆ ದಾಖಲಿಸಿ ಒಂದು ದಿನದ ಚಿಕಿತ್ಸೆ ಕೊಡಿಸಿದ್ದ ಪೊಲೀಸರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ವಿನಯ್. ವಿಚಾರಣೆ ಮುಂದುವರಿಸಿದ್ದಾರೆ.