
ಚಿತ್ರದುರ್ಗ (ಜೂ.11): 'ನನ್ನ ಮಗನ್ನ ಸಾಯಿಸಿದಂಗ ನಟ ದರ್ಶನನ್ನ ಸಾಯಿಸಿಬಿಡಿ. ಆ ಪಾಪಿ ದರ್ಶನ್ ಸಾಯಬೇಕು..' ಮಗನ ಅಂತ್ಯಸಂಸ್ಕಾರದ ಬಳಿಕ ತಾಯಿ ರತ್ನಪ್ರಭಾ, ತಂದೆ ಶಿವನಗೌಡ ಆಕ್ರೋಶ ಪಡಿಸಿದ್ದು ಹೀಗೆ.
ದರ್ಶನ್ ಅಂಡ್ ಗ್ಯಾಂಗ್‌ನಿಂದ ಬರ್ಬರವಾಗಿ ಹತ್ಯೆಗೀಡಾ ರೇಣುಕಾಸ್ವಾಮಿ ಮೃತ ಶರೀರವನ್ನು ಆಂಬುಲೆನ್ಸ್ ಮೂಲಕ ಚಿತ್ರದುರ್ಗದ ಮನೆಗೆ ಶಿಫ್ಟ್ ಮಾಡಲಾಗಿತ್ತು. ವೀರಶೈವ ರುದ್ರಭೂಮಿಯಲ್ಲಿ ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಅಂತ್ಯಸಂಸ್ಕಾರದ ಬಳಿಕ ರೇಣುಕಾಸ್ವಾಮಿಯ ತಂದೆ ತಾಯಿ ಕಣ್ಣೀರಿಡುತ್ತಲೇ ಆಕ್ರೋಶ ವ್ಯಕ್ತಪಡಿಸಿದರು.
ತಡರಾತ್ರಿ ಆದರೂ ಮನೆಗೆ ಹೋಗದೆ ಠಾಣೆ ಮುಂದೆ ನಿಂತ ದರ್ಶನ್ ಅಭಿಮಾನಿಗಳು!
ನನ್ನ ಮಗನ ಸಾಯಿಸಿದಂತೆ ನಟ ದರ್ಶನ್ ಮತ್ತು ಪವಿತ್ರಾಗೆ ಅದೇ ಸ್ಥಿತಿ ಬರಬೇಕು. ನನ್ನ ಮಗನಿಗೆ ತಲೆ ಹೊಡೆದಿದ್ದಾರೆ, ಮರ್ಮಾಂಗಕ್ಕೆ ಹೊಡೆದಿದ್ದಾರೆ. ಪತಿ ಬರುತ್ತಾನೆ ಅಂತಾ ನನ್ನ ಸೊಸೆ ಕಾದಿದ್ದಳು. ಪಾಪ ನನ್ನ ಸೊಸೆಯ ಜೀವನವನ್ನೂ ಹಾಳುಮಾಡಿದರು ಪಾಪಿಗಳು. ಸೂಕ್ತ ತನಿಖೆ ನಡೆಸಿ ಆ ಪಾಪಿಗಳಿಗೆ ತಕ್ಕ ಶಿಕ್ಷೆ ಇಂತಹ ಕೊಲೆಗಡುಕರಿಗೆ ದೇಶದಲ್ಲಿ ಎಂತಹ ಮರ್ಯಾದೆ ಇದೆ? ಮನುಷ್ಯತ್ವ ಇಲ್ಲದವರು ದೊಡ್ಡಮನುಷ್ಯರು,, ಸ್ಟಾರ್‌ಗಳು ಥೂ., ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ