ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ರನ್ನ ಕಾಣಲು ದಾಸಪ್ಪನೊಬ್ಬ ಬಂದು ಶಂಖ ಊದಿ ದೇವರ ಮೊರೆ ಹೋಗಿದ್ದಾನೆ.
ಬೆಂಗಳೂರು (ಜೂ.30) ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್. ಇಂದಿಗೆ ವಾರ ಕಳೆದರೂ ಸೆಲೆಬ್ರಿಟಿಗಳು, ಆಪ್ತರು, ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನತ್ತ ಬರುತ್ತಲೇ ಇದ್ದಾರೆ. ನೆಚ್ಚಿನ ನಟನಿಗೆ ಸಂಕಷ್ಟ ಎದುರಾಗಿದೆ ಮಾತಾಡಿಸಬೇಕು, ನಿಮ್ಮ ಜೊತೆಗೆ ನಾವಿದ್ದೇವೆಂದು ಧೈರ್ಯ ಹೇಳಬೇಕು ಎಂದು ಸೆಲೆಬ್ರಿಟಿಗಳಿಂದಿಡಿದು ಅಂಗವಿಕಲ ವ್ಯಕ್ತಿಗಳು ಸಹ ತೆವಳುತ್ತ ಜೈಲಿನತ್ತ ಬಂದು ಭೇಟಿಯಾಗದೆ ಕಣ್ಣೀರು ಸುರಿಸಿ ವಾಪಸ್ ಆಗುತ್ತಿದ್ದಾರೆ.
ಇಂದು ನಟ ದರ್ಶನ್ ಅಭಿಮಾನಿ ದಾಸಪ್ಪನೊಬ್ಬ ನೆಚ್ಚಿನ ನಟನನ್ನು ಭೇಟಿಯಾಗಲು ಪರಪ್ಪನ ಅಗ್ರಹಾರದ ಬಳಿ ಬಂದು ಗಮನ ಸೆಳೆದರು. ಕೈಯಲ್ಲಿ ಶಂಖ ಜಾಗಟೆ ಹಿಡಿದು ಬಂದಿದ್ದ ದಾಸಪ್ಪ, ಪ್ರಕರಣದಲ್ಲಿ ದರ್ಶನ್ನರನ್ನ ಪಾರು ಮಾಡುವಂತೆ ಪರಪ್ಪನ ಅಗ್ರಹಾರದ ಹೊರಗೆ ಶಂಖ ಊದಿ, ಜಾಗಟೆ ಬಾರಿಸಿ ದೇವರ ಮೊರೆ ಹೋದ ದಾಸಪ್ಪ.
ಎದ್ನೋ ಬಿದ್ನೋ ಅಂತ ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ ಮಾತನ್ನಾಡದ ನಟ ದರ್ಶನ್ ಆಪ್ತರು, ಯಾಕೆ?
ಮೂಲತಃ ತುರುವೇಕೆರೆಯವರಾದ ದಾಸಪ್ಪ. ದರ್ಶನ್ ಬಂಧನ ಬಳಿಕ ಅವರನ್ನು ನೋಡಲೆಂದು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಆದರೆ ಇಂದು ಭಾನುವಾರ ಯಾರಿಗೂ ಭೇಟಿ ಮಾಡಲು ಅವಕಾಶವಿಲ್ಲ. ಜೊತೆಗೆ ದರ್ಶನ್ ಸಹ ಅಮ್ಮ, ಸಹೋದರನ ಹೊರತುಪಡಿಸಿ ಯಾರೊಂದಿಗೂ ಮಾತನಾಡಲು ನಿರಾಕರಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಪರಪ್ಪನ ಅಗ್ರಹಾರದ ಮುಂದೆ ಬರುತ್ತಲೇ ಇದ್ದಾರೆ.
ನಮ್ಮಂತಹ ಬಡಪಾಯಿಗಳಿಗೆ, ವಿಕಲಚೇತನರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಇಂತಹ ಮಾನವೀತೆ ತೋರಿದ ದರ್ಶನ್ ಇಂದು ಜೈಲಿನಲ್ಲಿ ಬಂಧಿಯಾಗಿರುವುದು ನೋವು ತಂದಿದೆ ಆದಷ್ಟು ಜೈಲಿನಿಂದ ಬಿಡುಗಡೆಯಾಗಲಿ ಎಂದು ದಾಸಪ್ಪ(ಗೋವಿಂದರಾಜ) ಪ್ರಾರ್ಥಿಸಿದ್ದಾರೆ. ಜೈಲಿನ ಮುಂಭಾಗದಲ್ಲೇ ಶಂಖ ಊದಿ ಜಾಗಟೆ ಬಾರಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ದರ್ಶನ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.