ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನಿರ್ಮಾಪಕ ಉಮಾಪತಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದ ಮತ್ತೊಬ್ಬ ದರ್ಶನ್ ಅಭಿಮಾನಿಯನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜೂ.25) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನಿರ್ಮಾಪಕ ಉಮಾಪತಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದ ಮತ್ತೊಬ್ಬ ದರ್ಶನ್ ಅಭಿಮಾನಿಯನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಚೇತನ್ ಬಂಧಿತ ಆರೋಪಿ. ಆಟೋ ಚಾಲಕನಾಗಿರುವ ಚೇತನ್ ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನಿರ್ಮಾಪಕ ಉಮಾಪತಿಗೆ ಅವಹೇಳನಕಾರಿಯಾಗಿ ನಿಂದಿಸಿ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ದರ್ಶನ್ ಅಭಿಮಾನಿಗಳನ್ನ ಪ್ರಚೋದಿಸಿದ್ದ. ಚೇತನ್ ಬೆದರಿಕೆಯೊಡ್ಡಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಗೆ ದೂರು ನೀಡಿದ್ದ ಉಮಾಪತಿ ಗೌಡ. ಬಳಿಕ ಬಸವೇಶ್ವರನಗರ ಪೊಲೀಸ್ ಠಾಣೆ ಎನ್‌ಸಿಆರ್ ದೂರು ದಾಖಲಾಗಿತ್ತು. ಅನಂತರ ಕೋರ್ಟ್ ಅನುಮತಿ ಪಡೆದು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 504, 506 ಅಡಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರುವ ಪೊಲೀಸರು.
ಪತ್ನಿ ವಿಜಯಲಕ್ಷ್ಮಿ, ಮಗನ ಕಂಡು ಜೈಲಿನಲ್ಲಿ ದರ್ಶನ್ ಕಣ್ಣೀರು!
ಆರೋಪಿಯನ್ನ ಠಾಣೆಗೆ ಕರೆಸಿ ಇನ್ನೊಮ್ಮೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಿರೋ ಪೊಲೀಸರು. ನಟ ದರ್ಶನ್ ಫ್ಯಾನ್ ಚೇತನ್ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮೊದಲಿಗೆ ವಿಡಿಯೋದಲ್ಲಿ ಉಮಾಪತಿಗೌಡಗೆ ವಾರ್ನಿಂಗ್ ಮಾಡಿ ಗರ್ಜಿಸಿದ್ದ ಚೇತನ್ ಪೊಲೀಸ್ ಠಾಣೆಗೆ ಕರೆಸಿ ಬಿಸಿ ಮುಟ್ಟಿಸಿದ ಬಳಿಕ ರೋಷ ತಣ್ಣಗಾಗಿದೆ. ಇನ್ನೊಮ್ಮೆ ಇಂತಹ ಕೆಲಸ ಮಾಡೊಲ್ಲ ಬೆದರಿಕೆಯೊಡ್ಡ ಬಿಟ್ಟುಬಿಡಿ ಸಾ.. ಅಂತಿರೋ ಆರೋಪಿ.