ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ‌ ಸಹಿತ ಭಾರೀ ಮಳೆ..!

By Girish Goudar  |  First Published Jun 25, 2024, 9:02 AM IST

ನಿನ್ನೆ ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಂದೂ ಕೂಡ ರಾಜ್ಯದಲ್ಲಿ ಭಾರೀ‌ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದೆ. ಜೂನ್ 29ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 


ಬೆಂಗಳೂರು(ಜೂ.25):  ಮುಂದಿನ 3 ಗಂಟೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ‌ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ನಿನ್ನೆಯೂ ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಂದೂ ಕೂಡ ರಾಜ್ಯದಲ್ಲಿ ಭಾರೀ‌ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದೆ. ಜೂನ್ 29ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 

Latest Videos

undefined

ಮುಂದಿನ 7 ದಿನ ರಾಜ್ಯದಲ್ಲಿ ಭಾರಿ ಮಳೆ, 3 ಜಿಲ್ಲೆಗೆ ಯೆಲ್ಲೋ ಅಲರ್ಟ್!

ಉತ್ತರ ಒಳನಾಡು ಪ್ರದೇಶಗಳಿಗೆ ಇಂದು ಕೂಡ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ದಕ್ಷಿಣ ಹಾಗೂ ಕರಾವಳಿ ಪ್ರದೇಶಗಳಿಗೆ ಕೂಡ ಆರೆಂಜ್ ಅಲರ್ಟ್ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಶಿವಮೊಗ್ಗದದ ಆಗುಂಬೆಯಲ್ಲಿ ಅತಿ ಹೆಚ್ಚಾಗಿ ಮಳೆಯಾಗಿದೆ. 

ನಿನ್ನೆ ರಾಜ್ಯದಲ್ಲಿ ಎಷ್ಟೆಷ್ಟು ಮಳೆ..!?

ಬಜ್ಪೆ - 30.6 ಮಿ.ಮೀ
ಪಣಂಬೂರು- 2.6 ಮಿ.ಮೀ
ಶಿರಾಲಿ- 4.6 ಮಿ.ಮೀ
ಗದಗ- 1.4 ಮಿ.ಮೀ
ಬಾಗಲಕೋಟೆ-1.5 ಮಿ.ಮೀ
ಹನುಮನಮಟ್ಟಿ- 1.0 ಮಿ.ಮೀ
ಕಲಬುರ್ಗಿ- 1.0 ಮಿ.ಮೀ
ಆಗುಂಬೆ- 67.5 ಮಿ.ಮೀ
ಮೂಡಿಗೆರೆ- 17.5 ಮಿ.ಮೀ
ಚಂದೂರಾಯನಹಳ್ಳಿ- 0.5 ಮಿ.ಮೀ
ಗೋಣಿಕೊಪ್ಪಲು- 9.0 ಮಿ.ಮೀ
ದಾವಣಗೆರೆ-1.5 ಮಿ.ಮೀ

click me!