ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದ A1 ಪವಿತ್ರಾ ಗೌಡ ಮೊದಲಿನಂತೆ ರಂಪಾಟ ಮಾಡದೇ ಗಪ್‌ಚುಪ್ ಆಗಿದ್ದಾರೆ.
ಬೆಂಗಳೂರು (ಜೂ.24): ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದ A1 ಪವಿತ್ರಾ ಗೌಡ ಮೊದಲಿನಂತೆ ರಂಪಾಟ ಮಾಡದೇ ಗಪ್‌ಚುಪ್ ಆಗಿದ್ದಾರೆ.
ಪರಪ್ಪನ ಅಗ್ರಹಾರದ ಜೈಲು ಪ್ರವೇಶಿಸಿದ ವೇಳೆ ಗಳಗಳನೇ ಅತ್ತಿದ್ದ ಪವಿತ್ರಾ ಗೌಡ ಬಳಿಕ ಜೈಲಿನ ಸಿಬ್ಬಂದಿ ಕೊಟ್ಟ ಚಾಪೆ ಮೇಲೆ ನಿದ್ದೆ ಬಾರದೆ ರಾತ್ರಿಯಿಡೀ ಕೊರಗಿದ್ದಳು. ಬೆಳಗ್ಗೆಯೂ ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದ ಪವಿತ್ರಾ ಗೌಡ. ಜೈಲು ಸಿಬ್ಬಂದಿ ನೀಡಿದ್ದ ಹೊದಿಕೆ ಸರಿಯಾಗಿಲ್ಲ. ನನಗೆ ಮಲಗಲು ಮನೆಯ ಹೊದಿಕೆ ತರಿಸಿಕೊಡಿ, ನನಗೆ ಅದು ಬೇಕು ಇದು ಬೇಕು ಎಂದು ಸಣ್ಣಪುಟ್ಟ ವಿಚಾರಕ್ಕೆ ಹಠ ಮಾಡಿದ್ದ ಪವಿತ್ರಾ. ಜೈಲೂಟ ತಿನ್ನಲು ಕೂಡ ಪವಿತ್ರಾ ಗೌಡ ನಿರಾಕರಣೆ ಮಾಡಿದ್ದಳು. ಆಗ ಜೈಲು ಸಿಬ್ಬಂದಿ ಇದು ನಿಮ್ಮ ಮನೆಯಲ್ಲಮ್ಮ ಜೈಲು, ಪರಪ್ಪನ ಅಗ್ರಹಾರದ ಜೈಲು ಸುಮ್ಮನಿರಿ ಅಂತಾ ಗದರಿಸಿದ್ರು. ಮೊದಲು ಹೀಗೆ ಆಮೇಲೆ ಆಮೇಲೆ ಜೈಲಿಗೆ ಹೊಂದಿಕೊಳ್ಳುತ್ತಾಳೆ ಅಂತಾ ಸುಮ್ಮನಿದ್ರು. ಇದೀಗ ಪವಿತ್ರಾ ಗೌಡ ಹೊಂದಿಕೊಂದಿಕೊಂಡಂತೆ ಕಾಣುತ್ತಿದೆ.
ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯೊಂದಿಗೆ ನಟಿ ಪವಿತ್ರಾಗೌಡ ಕಿರಿಕ್; ಒಳ್ಳೆ ಊಟ, ಮೆತ್ತನೆ ಹಾಸಿಗೆಗೆ ಹಠ
ಶನಿವಾರ ತಾಯಿ ತಂದುಕೊಟ್ಟಿದ್ದ ಬೆಡ್‌ಶೀಟ್ ನಿನ್ನೆ ಪಡೆದಿರುವ ಪವಿತ್ರಾ ಗೌಡ. ತಾಯಿ ತಂದುಕೊಟ್ಟ ಬೆಡ್‌ಶೀಟ್ನಲ್ಲಿ ನಿನ್ನೆ ಫುಲ್ ನಿದ್ದೆ. ಬೆಳಗ್ಗೆ ಎದ್ದಾಗಲೂ ಯಾರ ಜೊತೆಗೂ ಮಾತಾಡಿಲ್ಲ. ಜೈಲಿನ ಊಟ ಸರಿ ಹೋಗ್ತಿಲ್ಲಾ ಎಂಬ ಬಗ್ಗೆ ತಾಯಿ ಬಳಿ ಅಳಿಲು ತೋಡಿಕೊಡಿದ್ದರಂತೆ. ಆದರೆ ಇಂದು ಜೈಲು ಮೇನುವಿನಂತೆ ಬೆಳಗ್ಗೆ ಸಿಬ್ಬಂದಿ ನೀಡಿದ ಪುಳಿಯೊಗರೆ ತಿಂದು ಸುಮ್ಮನಾಗಿರುವ ಪವಿತ್ರಾ. ಅದು ಅಲ್ಲದೇ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿರುವುದರಿಂದ ಪವಿತ್ರಾ ಗೌಡ ಒಂದಷ್ಟು ಮಾನಸಿಕವಾಗಿ ಗೆಲುವಿನಿಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಆದರೆ ಯಾರೊಂದಿಗೆ ಹೆಚ್ಚು ಮಾತಾಡ್ತಿಲ್ಲ. ಅದೇ ಜೈಲಿನಲ್ಲೂ ಇದ್ದು ದರ್ಶನ್ ಮುಖದರ್ಶನವಾಗದ ಸಂಕಟದಲ್ಲಿರುವ ಪವಿತ್ರಾ ಗೌಡ. ಮೊದಲಿನಂದ ರಂಪಾಟ ಮಾಡಿ ಪ್ರಯೋಜನವಿಲ್ಲ ಎಂದು ಮೌನಕ್ಕೆ ಶರಣಾದಳ ಪವಿತ್ರಾ ಗೌಡ?
13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ; ತಡರಾತ್ರಿವರೆಗೆ ಮಂಕಾಗಿ ಕುಳಿತ ದರ್ಶನ್!