ಪದೇಪದೆ ತೊಂದರೆ ಕೊಟ್ಟರೆ ವಿಷ ಕುಡಿಯುತ್ತೇನೆ: ನೇಹಾ ತಂದೆ ನಿರಂಜನ ಹಿರೇಮಠ್

By Kannadaprabha News  |  First Published Jun 24, 2024, 9:47 AM IST

ನಮ್ಮ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಅವನನ್ನು ನೋಡಲು ಹೋಗುತ್ತಿದ್ದರೆ ಪೊಲೀಸರು ತಡೆಯುತ್ತಿದ್ದಾರೆ. ಪದೇ ಪದೇ ಈ ರೀತಿಯ ತೊಂದರೆ ಕೊಡುತ್ತಿದ್ದರೆ ನಾನು ವಿಷ ಸೇವಿಸುತ್ತೇನೆ’ ಎಂದು ಮೃತ ನೇಹಾ ಹಿರೇಮಠ ತಂದೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆಯಿತು.


ಹುಬ್ಬಳ್ಳಿ (ಜೂ.24): ‘ನಮ್ಮ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಅವನನ್ನು ನೋಡಲು ಹೋಗುತ್ತಿದ್ದರೆ ಪೊಲೀಸರು ತಡೆಯುತ್ತಿದ್ದಾರೆ. ಪದೇ ಪದೇ ಈ ರೀತಿಯ ತೊಂದರೆ ಕೊಡುತ್ತಿದ್ದರೆ ನಾನು ವಿಷ ಸೇವಿಸುತ್ತೇನೆ’ ಎಂದು ಮೃತ ನೇಹಾ ಹಿರೇಮಠ ತಂದೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆಯಿತು.

ಇಲ್ಲಿನ ಲೋಹಿಯಾ ನಗರದಲ್ಲಿ ಶನಿವಾರ ರಾತ್ರಿ ಕೊಲೆಗೀಡಾಗಿದ್ದ ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ ಮಠಪತಿ(hubballi akash mathpati murder) ಅವರ ಮರಣೋತ್ತರ ಪರೀಕ್ಷೆ ಭಾನುವಾರ ನಡೆಯಿತು. ಈ ವೇಳೆ ಕಿಮ್ಸ್‌ (KIMS hospital hubballi)ಶವಾಗಾರಕ್ಕೆ ನಿರಂಜನ ಹಿರೇಮಠ(Niranja hiremath) ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ತಡೆದು, ನೀವು ಶವಾಗಾರಕ್ಕೆ ಹೋಗಬೇಡಿ ಎಂದರು. ಈ ವೇಳೆ, ‘ನಾನು ಹೋಗುತ್ತೇನೆ’ ಎಂದು ನಿರಂಜನ, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನನ್ನ ಮೇಲೆ ಒತ್ತಡ ಹಾಕಿ ಪೊಲೀಸರು ಬಂಧನ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ವೇಶ್ಯಾವಾಟಿಕೆ ಸಂತ್ರಸ್ತೆಯನ್ನ ಶಿಕ್ಷಿಸುವ ಕಾನೂನಿಲ್ಲ: ಹೈಕೋರ್ಟ್‌

ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ನಿರಂಜನ್‌, ನಮ್ಮದೇ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಈ ಕುರಿತು ನ್ಯಾಯ ಕೇಳುವುದು ತಪ್ಪಾ? ಈಗಾಗಲೇ ನನ್ನ ಮಗಳ ಕೊಲೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ನನ್ನ ಕೊಲೆಯಾದರೂ ಅಚ್ಚರಿಯಿಲ್ಲ. ಪೊಲೀಸರು ಕಾನೂನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಈ ಕಾರ್ಯವೈಖರಿ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

click me!