ರಾಜಕಾರಣ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ಬರಬಾರದು. ಇದರಿಂದ ಯಾರೂ ಕೂಡ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನಪೀಠದ ಮಹಾರಾಜ ನಿರಂಜನ ಕಿರಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.
ಮುದ್ದೇಬಿಹಾಳ (ಸೆ.12) : ರಾಜಕಾರಣ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ಬರಬಾರದು. ಇದರಿಂದ ಯಾರೂ ಕೂಡ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನಪೀಠದ ಮಹಾರಾಜ ನಿರಂಜನ ಕಿರಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ತಂಗಡಗಿ ರಸ್ತೆ ಮಾರ್ಗದ ಹೊರವಲಯದಲ್ಲಿರುವ ಶಿರೋಳ ಗ್ರಾಮದ ವ್ಯಾಪ್ತಿಯ ಫಕೀರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ, ಪರಂಪರೆ ಅವೇಲ್ಲವೂದರ ಜೊತೆಗೆ ಮಾನವಿ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಇಂದು ಸತ್ಯದ ಸನ್ಮಾರ್ಗದ ಆಢಳಿತದ ಅವಶ್ಯಕವಿದೆ ಎಂದರು.
ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪರನ್ನು ಕಡೆಗಣಿಸಿರೋದು ಬಿಜೆಪಿಯ ಇಂದಿನ ಸ್ಥಿತಿಗೆ ಕಾರಣ: ದಿಂಗಾಲೇಶ್ವರ ಸ್ವಾಮೀಜಿ
ನಿಜವಾದ ಯೋಗಿಗಳನ್ನು ನಿರ್ಜನ ಪ್ರದೇಶವನ್ನು ಗುರ್ತಿಸಿ ಅಲ್ಲಿ ಏಕಾಂತದಲ್ಲಿ ತಪಸ್ಸು ಮಾಡುತ್ತಿದ್ದರೂ ಅದರ ಫಲ ಮಾತ್ರ ಲೋಕಾಂತಕ್ಕೆ ಸಲ್ಲುತ್ತಿತ್ತು. ಹಾಗಾಗಿಯೇ ಫಕೀರೇಶ್ವರರು ಲೋಕದ ಕಲ್ಯಾಣಕ್ಕಾಗಿ ಸಮಾನತೆಗಾಗಿ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಬಂದು ತಪೋಗೈದು ಪವಾಡಗಳ ಮೂಲಕ ಸಮಾಜಕ್ಕೆ ಸತ್ಯದ ಸಂದೇಶ ಸಾರಿದವರು ಎಂದರು.
ವಿಜಯಪುರ ಆದೀಲ್ ಶಾಹಿ, ಹೈದಾರಬಾದರ ನಿಜಾಮರು, ದಿಲ್ಲಿಯ ಅಕ್ಬರ ಬಾದಶಾ, ಸವಣೂರಿನ ನವಾಬರು ಮತ್ತು ಮೈಸೂರಿನ ಅರಸರು ಸೇರಿದಂತೆ ಹಲವಾರು ರಾಜ ಮಹಾರಾಜರು ಫಕೀರೇಶ್ವರರ ಅದ್ಭೂತ ದಿವ್ಯ ಶಕ್ತಿಗೆ ಮಾರುಹೋಗಿದ್ದರು. ಇಡೀ ದೇಶದಾದ್ಯಂತ ಸುತ್ತಾಡಿ ಧರ್ಮದ ಪ್ರಚಾರಗೈದು ನೀತಿ ಬೋಧನೆ, ಸಾತ್ವೀಕ ಜೀವನ ಮಾನವಿಯತೆಯನ್ನು ಜನರ ಹೃದಯದಲ್ಲಿ ಅರಳಿಸಿ ನಿಜವಾದ ಮಾನವ ಧರ್ಮ ಏನು ಎನ್ನುವುದನ್ನು ತಿಳಿಸಿಕೊಟ್ಟವರು. ಅನೇಕ ಪವಾಡಗಳ ಮೂಲಕ ದೇಶದಲ್ಲಿ ವ್ಯಾಪಕ ತಲೆದೋರಿದ್ದ ಮೇಲು, ಕೀಳು, ಎನ್ನುವ ಜಾತಿ ಜಗಳಗನ್ನು ದೂರ ಮಾಡಿ ಮಾನವರೆಲ್ಲ ಒಂದೇ ಎನ್ನುವ ಮೂಲಕ ಪ್ರತಿಯೊಬ್ಬರಲ್ಲಿ ಸ್ನೇಹತ್ವದ ಪ್ರೀತಿ, ಭಕ್ತಿ ತುಂಬಿ ಮಾನವನ ಬದುಕು ಹೀಗೆ ಇರಬೇಕು ಎಂದು ತೊರಿಸಿಕೋಡುವ ಮೂಲಕ ಸರ್ವಧರ್ಮ ಸಮನ್ವಯದ ಭಾವೈಕ್ಯತೆ ಪೀಠ ಸ್ಥಾಪಿಸಿದವರು. ಅಂದಿನ ಕಾಲದಲ್ಲಿಯೇ ಮಾತ್ರ ಫಕೀರೇಶ್ವರರ ಪವಾಡ ಪುರುಷರಾಗಿದ್ದರು. ಇಂದು ಇಲ್ಲವೆಂದರೂ ಅವರ ಪವಾಡಗಳು ಇಂದಿಗೂ ಸತ್ಯವಾಗಿ ಉಳಿದವೆ ಮಾತ್ರವಲ್ಲ ಭಕ್ತಿಯಿಂದ ನಡೆದುಕೊಂಡವರಿಗೇ ಪುಣ್ಯ ಮಾರ್ಗದ ದಿಕ್ಸೂಚಿ ನೀಡಿ ಆಗಾಗ ಪವಾಡಗಳ ಲೀಲೆಗಳು ಈಗಲೂ ಕೂಡ ನಡೆಯುತ್ತಲೇ ಇರುತ್ತವೆ ಎಂದರೆ ಅವರು ನಮ್ಮೆಲ್ಲರ ಮಧ್ಯೆ ಇದ್ದಾರೆ ಎಂದರ್ಥವಲ್ಲವೇ ಎಂದರು.
ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ)ಯವರು ನುಡಿದಂತೆ ನಡೆದುಕೊಳ್ಳುವ ಬಹುಶಃ ಒಬ್ಬ ಸರಳ ಹಾಗೂ ಸಜ್ಜನ, ಸಾತ್ವಿಕ ರಾಜಕಾರಿಣಿಯಾಗಿ ಬೆಳೆದು ಬಂದವರು ಅವರ ಮಾರ್ಗದರ್ಶನ ಸಲಹೆ ಸಹಕಾರದಿಂದ ಈ ಸಮಾಜಕ್ಕೆ ಮತ್ತು ಫಕೀರೇಶ್ವರ ಮಠದ ಅಭಿವೃದ್ಧಿ ಶ್ರಮವಹಿಸಲಿ ಶಾಸಕ ಚಿತ್ತ ಈ ಭಾವೈಕ್ಯತೆಯ ಪೀಠದತ್ತ ಇರಲಿ. ಜೊತೆಗೆ ಮತಕ್ಷೇತ್ರದ ಎಲ್ಲ ಸರ್ವ ಜನಾಂಗವದವರ ನೇತೃತ್ವದಲ್ಲಿ ನಾಡಿನ ಹೆಸರಾಂತ ಮಠಾಧೀಶರನ್ನು ಆಹ್ವಾನಿಸಿ ಈ ಭಾಗದ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರ ಅವರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಗೊಳಿಸುವಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ಸಾಕಷ್ಟು ಜನ ದೇವರ ನೆನೆದು ಪೂಜಿಸುತ್ತಾರೆ. ವೃತ ಮಾಡಿ ಧ್ಯಾನ ಮಾಡುತ್ತಾರೆ. ಆದರೆ, ಕೆಲವರು ಮುಂದೊಂದು ದಿನ ಅದನ್ನು ಮರೆತು ದುಶ್ಚಟಗಳ ದಾಸರಾಗಿ ಮುಂದುವರೆದು ಬಿಡುತ್ತಾರೆ. ಇದರಿಂದ ಏನು ಸಾಧನೆ ಮಾಡಲು ಸಾಧ್ಯ. ಯಾವೂದೇ ಶರಣರ, ಸಂತರ, ಯೋಗಿಗಳ, ಆಚರಣೆ ಮಾಡಿದರೇ ಸಾಲದು ಅವರ ತತ್ವ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ನಿಜವಾದ ಮಾನವರಾಗಿ ನಮ್ಮ ನಡೆ ನುಡಿಯಲ್ಲಿ ಎಲ್ಲರೂ ಒಂದೇ ಎನ್ನುವ ಮೂಲಕ ಬೆಳೆದು ಸಹೋದರತೆಯಿಂದ ಬಾಳಿ ಬದುಕಬೇಕು. ಅಂದಾಗ ಮಾತ್ರ ನಮ್ಮ ಆಚರಣೆಗಳಿಗೆ ಸಾರ್ಥಕತೆ ಸಲ್ಲುತ್ತದೆ ಎಂದರು.
ನರಗುಂದದಲ್ಲಿ ಹೈಡ್ರಾಮಾ : ಸಚಿವರ ಮನೆ ಮುಂದೆ ಧರಣಿ ನಡೆಸಲು ಬಂದ ದಿಂಗಾಲೇಶ್ವರ ಶ್ರೀಗೆ ತಡೆ
ಈ ಸಂದರ್ಭದಲ್ಲಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು, ಇಟಗಿ ಭೂಕೈಲಾಸ ಹಿರೇಮಠದ ಶಾಂತವೀರ ಶಿವಾಚಾರ್ಯರು, ವೇದಮೂರ್ತಿ ಬಸವಪ್ರಭು ಹಿರೇಮಠ, ಗಣ್ಯರಾದ ಎಂ.ಬಿ.ನಾವದಗಿ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಶಿವಲಿಂಗಯ್ಯ ಶಿವಯೋಗಿಮಠ, ಕವಡಿಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಕುಂತಲಾ ಚಂದಾಲಿಂಗ ಹಂರಗಲ್ಲ, ಸಿದ್ದಲಿಂಗಯ್ಯ ಕಲ್ಯಾಣಮಠ, ಗಣ್ಯ ಉದ್ಯಮಿ ಶರಣು ಸಜ್ಜನ, ಶ್ರೀಕಾಂತ ಚಲವಾದಿ, ಸದು ಮಠ ಸೇರಿದಂತೆ ಅನೇಕರು ಇದ್ದರು.
ಅಜ್ಞಾನ ಮತ್ತು ಸ್ವಾರ್ಥಗಳಿಂದ ತುಂಬಿಕೊಂಡು ಹಿಂದು, ಮುಸ್ಲಿಂ ಎನ್ನುವ ಜಾತಿ ವ್ಯವಸ್ಥೆಯನ್ನು ಭೇದ ಭಾವವನ್ನು ಬುಡ ಸಮೇತ ಕಿತ್ತು ಹಾಕಿ ಎಲ್ಲರೂ ಮಾನವರೇ ಎಂದು ಸಾರುವ ಮೂಲಕ ಸ್ನೇಹ ಭಾವ ಮೂಡಿಸಲು ಬಂದ ಅವತಾರ ಪುರುಷ ಫಕೀರೇಶ್ವರರು ಎಂದರೆ ತಪ್ಪಾಗಲಾರದು.
-ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಮಹಾರಾಜ ನಿರಂಜನ ಕಿರಿಯ ಜಗದ್ಗುರು.
ಹಿಂದಿನ ಮೋಘಲರ ಕಾಲದಲ್ಲಿ ಶರಣರು, ಸಂತರು, ಮಹಾತ್ಮರು ಇರದೆ ಇದ್ದರೇ ಇಂದು ಮತಾಂಧರಾಗಿ ಪರಿವರ್ತನೆಯಾಗಿ ನಮ್ಮ ಧರ್ಮಗಳನ್ನು ನಾವು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ.
ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕರು.