ಗಣೇಶ ಹಬ್ಬಕ್ಕೆ ಕನ್ನಡಿಗರಿಗೆ ಗುಡ್ ನ್ಯೂಸ್, ವಿಶೇಷ ಟ್ರೈನ್ ಘೋಷಿಸಿದ ನೈರುತ್ಯ ರೈಲ್ವೇ!

By Suvarna NewsFirst Published Sep 11, 2023, 9:54 PM IST
Highlights

ತಮ್ಮ ತಮ್ಮ ಊರುಗಳಿಗೆ ತೆರಳಿ ಗಣೇಶ ಹಬ್ಬ ಆಚರಿಸುತ್ತಾರೆ. ಈ ವೇಳೆ ಪ್ರಯಾಣದ ದರ ದುಪ್ಪಟ್ಟಾಗಲಿದೆ. ಹೆಚ್ಚುವರಿ ಬಸ್ ಸೇರಿದಂತೆ ಎಲ್ಲಾ ಸಾರಿಗೆಗಳು ತುಂಬಿ ತುಳುಕಲಿದೆ. ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಇದೀಗ ನೈರುತ್ಯ ರೈಲ್ವೇ ವಿಶೇಷ ರೈಲು ಘೋಷಿಸಿದೆ 

ಬೆಂಗಳೂರು(ಸೆ.11) ದೇಶಾದ್ಯಂತ ಗಣೇಶ ಹಬ್ಬಕ್ಕೆ ತಯಾರಿ ಆರಂಭಗೊಂಡಿದೆ. ದೂರದ ಊರುಗಳಿಂದ ಈಗಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಗಣೇಶ ಹಬ್ಬದ ವಾರದಲ್ಲಿ ಊರಿಗೆ ತೆರಳಲು ಜನರು ಟಿಕೆಟ್ ಬುಕಿಂಗ್ ಮಾಡಲು ಪರದಾಡುತ್ತಿದ್ದಾರೆ. ಬಹತೇಕ ಸಾರಿಗೆ ವ್ಯವಸ್ಥೆಗಳ ಟೀಕೆಟ್ ಸೋಲ್ಡ್ ಔಟ್ಆಗಿದೆ.  ಇನ್ನು ಕೆಲ ಟಿಕೆಟ್ ಬೆಲೆ ದುಪ್ಪಟ್ಟಾಗಿದೆ. ಇದರ ನಡುವೆ ಕನ್ನಡಿಗರಿಗೆ ನೈರುತ್ಯ ರೈಲ್ವೇ ಸಿಹಿ ಸುದ್ದಿ ನೀಡಿದೆ. ಗಣೇಶ ಚತುರ್ಥಿ ಪ್ರಯುಕ್ತ ನೈರುತ್ಯ ರೈಲ್ವೇ ವಿಶೇಷ ರೈಲು ಆರಂಭಿಸುವುದಾಗಿ ಘೋಷಿಸಿದೆ.

ಬೆಂಗಳೂರಿನಿಂದ ಹಲವು ವಿಶೇಷ ರೈಲು ಆರಂಭಿಸಲು ನೈರುತ್ಯ ರೈಲ್ವೇ ಘೋಷಿಸಿದೆ.  ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಾಟ ನಡೆಯಲಿದೆ.  ಈ ಸ್ಪೆಷಲ್ ಟ್ರೈನ್ ಸಪ್ಟೆಂಬರ್ 15ರಂದು ಯಶವಂತಪುರದಿಂದ ಸಂಜೆ 6:15 ಕ್ಕೆ ಹೊರಡಲಿದೆ .  ತುಮಕೂರು-ಅರಸೀಕರೆ-ಬೀರೂರು-ದಾವಣೆಗೆರೆ -ಹರಿಹರ - ಹುಬ್ಬಳ್ಳಿ-ಧಾರವಾಡ ಮೂಲಕ ಬೆಳಗಾವಿ ತಲುಪಲಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ 1,200 ಹೆಚ್ಚುವರಿ ಬಸ್‌ಗಳನ್ನು ಬಿಟ್ಟ ಕೆಎಸ್‌ಆರ್‌ಟಿಸಿ

ರೈಲು ಸಂಖ್ಯೆ 07390 ರೈಲು ಸಪ್ಟೆಂಬರ್ 16 ರಂದು ಹಿಂದಿರುಗಲಿದ್ದು ಸಂಜೆ 5:30 ಕ್ಕೆ ಬೆಳಗಾವಿಯಿಂದ ಹೊರಟು 17 ರ ಮುಂಜಾನೆ 4:30 ಕ್ಕೆ ಯಶವಂತಪುರ ತಲುಪಲಿದೆ . ಅದೇ ರೀತಿ 17 ರಂದು ಸಂಜೆ 6:15ಕ್ಕೆ ಮತ್ತೊಂದು ಟ್ರಿಪ್ ಯಶವಂತಪುರದಿಂದ ಹೊರಟು ಬೆಳಗಾವಿ ತಲುಪಲಿದೆ.  ಇನ್ನು  ಸಪ್ಟೆಂಬರ್ 18 ರಂದು ಸಂಜೆ 6:30ಕ್ಕೆ ಬೆಳಗಾವಿಯಿಂದ ಹೊರಟು ಯಶವಂತಪುರ ತಲುಪಲಿದೆ. 

ಈ ವಿಶೇಷ ರೈಲು ಎಸಿ ಟು ಟೈರ್ ಬೋಗಿ,  7 ಎಸಿ ತ್ರಿ ಟೈರ್ ಬೋಗಿಗಳು, 8 ಸ್ಲೀಪರ್ ಕ್ಲಾಸ್ ರೋಗಿಗಳು, ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್  ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್ ಮೆಂಟ್ 2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳನ್ನು ಹೊಂದಿದೆ. 

ಇತ್ತ ಹೊಸಪೇಟೆ ಭಾಗದ ಜನರಿಗೆ ವಂದೇ ಭಾರತ್ ರೈಲು ಸೇವೆ ಕಲ್ಪಿಸಲು ಕಾರ್ಯಗಳು ಆರಂಭಗೊಂಡಿದೆ. ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಹೊಸಪೇಟೆ-ಬೆಂಗಳೂರು ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಆರಂಭಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೇ ವಲಯವು ಪರಿಶೀಲನೆ ನಡೆಸಿದ್ದು, ರೈಲು ಆರಂಭಕ್ಕೆ ಆಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

 

ಬುಧವಾರ ಗಣೇಶನಿಗೆ ಪ್ರಿಯ, ಶುಭ ಲಾಭಕ್ಕಾಗಿ ಗಣೇಶನಿಗೆ ಇವುಗಳನ್ನು ಅರ್ಪಿಸಿ..!

ಕರ್ನಾಟಕದಲ್ಲಿ ಧಾರವಾಡ-ಬೆಂಗಳೂರು ಮತ್ತು ಮೈಸೂರು-ಬೆಂಗಳೂರು-ಚೆನ್ನೈ ನಡುವೆ ರೈಲು ಸಂಚರಿಸುತ್ತದೆ. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಮತ್ತು ಪ್ರವಾಸಿ ತಾಣಗಳ ನಡುವೆ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ಉತ್ಸುಕವಾಗಿದೆ
 

click me!