'ನಿಮ್ಮಿಂದಾಗಿ ನಾನು ಸುರಕ್ಷಿತವಾಗಿ ಊರಿಗೆ ಬಂದೆ'; ಸುವರ್ಣನ್ಯೂಸ್‌ಗೆ ಧನ್ಯವಾದ ತಿಳಿಸಿದ ಚಂದ್ರಶೇಖರ್

By Ravi JanekalFirst Published Nov 21, 2023, 9:14 AM IST
Highlights

ಸುವರ್ಣ ನ್ಯೂಸ್ ವರದಿಯಿಂದಾಗಿ ನಾನು ಮನೆಗೆ ಸುರಕ್ಷಿತವಾಗಿ ಬರುವಂತಾಯಿತು. ನಿಮ್ಮಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬಂದರು. ಸುವರ್ಣ ನ್ಯೂಸ್ ನಲ್ಲಿ ವರದಿ ಬಂದಿದೆ ಅಂತಾ  ಅಲ್ಲಿನ ಕೆಲವರು ಬಂದು ಹೇಳಿದ್ರು. ನನಗೆ ಗೊತ್ತೇ ಇರಲಿಲ್ಲ, ಫಸ್ಟ್ ಟೈಂ ಸುವರ್ಣ ನ್ಯೂಸ್ ನಲ್ಲಿ ಬಂದಿದೆ ಅಂತ ಹೇಳಿದ್ರು ಎಂದು ಭಾವುಕರಾಗಿ ಧನ್ಯವಾದ ತಿಳಿಸಿದ ಚಂದ್ರಶೇಖರ್.

ಉಡುಪಿ (ನ.21) ತಾನು ಮಾಡದ ತಪ್ಪಿಗೆ ಸೌದಿಯಲ್ಲಿ ಹನ್ನೊಂದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಕಡಬದ ಯುವಕ ಚಂದ್ರಶೇಖರ್ ಕೊನೆಗೂ ಸುವರ್ಣ ನ್ಯೂಸ್ ಪ್ರಯತ್ನದಿಂದ ಸುರಕ್ಷಿತವಾಗಿ ಕುಟುಂಬ ಸೇರಿದ್ದಾರೆ.  ಸೋಮವಾರ ರಾತ್ರಿ ರಿಯಾದ್ ನಿಂದ ಮುಂಬೈ, ಬಳಿಕ ಅಲ್ಲಿಂದ ಮಂಗಳೂರು ಏರ್ಪೋರ್ಟ್‌ಗೆ ಆಗಮಿಸಿದ ಚಂದ್ರಶೇಖರ್.

ನಿಮ್ಮಿಂದಾಗಿ ನಾನು ಊರಿಗೆ ಬಂದೆ:

ಅಂತೂ ಹನ್ನೊಂದು ತಿಂಗಳ ಸೆರೆವಾಸ ಅನುಭವಿಸಿ ಸುರಕ್ಷಿತವಾಗಿ ಮನೆಗೆ ಬಂದಿದ್ದೇನೆ. ಏಷಿಯಾನೆಟ್ ಸುವರ್ಣನ್ಯೂಸ್ ಪ್ರಯತ್ನದಿಂದ ನಾನು ಊರಿಗೆ ಬರುವಂತಾಯಿತು ಭಾವುಕವಾಗಿ ನುಡಿದು ಧನ್ಯವಾದ ತಿಳಿಸಿದ ಚಂದ್ರಶೇಖರ್.

ಸುವರ್ಣ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್‌: ಸೌದಿ ಜೈಲಿಂದ ಬಿಡುಗಡೆ, ಕುಟುಂಬ ಕಂಡು ಕಣ್ಣೀರಿಟ್ಟ ಯುವಕ..!

 ನಿಮ್ಮಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬಂದರು. ಸುವರ್ಣ ನ್ಯೂಸ್ ನಲ್ಲಿ ವರದಿ ಬಂದಿದೆ ಅಂತ ಅಲ್ಲಿನ ಕೆಲವರು ಬಂದು ಹೇಳಿದ್ರು. ನನಗೆ ಗೊತ್ತೇ ಇರಲಿಲ್ಲ, ಫಸ್ಟ್ ಟೈಂ ಸುವರ್ಣ ನ್ಯೂಸ್ ನಲ್ಲಿ ಬಂದಿದೆ ಅಂತ ಹೇಳಿದ್ರು. ರಾತ್ರಿ ಊಟ ಮಾಡ್ತಿದ್ದಾಗ ಜೈಲಿನಲ್ಲಿ ಒಬ್ಬರು ಮಂಗಳೂರಿನವರು ನೋಡಲು ಬಂದಿದ್ರು. ಅವರು ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ವರದಿ ಬಂದಿದ್ದಾಗಿ ಅದನ್ನು ನೋಡಿ ಭೇಟಿಗೆ ಬಂದಿರುವ ಬಗ್ಗೆ ತಿಳಿಸಿದರು. ಆಗ ನನಗೆ ಶಾಕ್ ಆಯ್ತು, ಸುವರ್ಣ ನ್ಯೂಸ್ ನಲ್ಲಿ ನನ್ನ ಬಗ್ಗೆ ಹೇಗೆ ಬಂತು ಅಂತ. ಅದಾದ ಒಂದು ವಾರ ಬಿಟ್ಟು ಮತ್ತೊಬ್ಬರು ಬಂದರು ಅವರೂ ಸಹ ಸುವರ್ಣ ನ್ಯೂಸ್ ನಲ್ಲಿ ವರದಿ ಬಂದ ಬಗ್ಗೆ ಹೇಳಿದರು. ಆಗ ಅಮ್ಮನಿಗೆ ಗೊತ್ತಾದ್ರೆ ಆತಂಕ ಪಡ್ತಾರೆ ಅಂತ ಹೇಳಿದೆ.  ಆಗ ಅವರು ಎಲ್ಲರಿಗೂ ಗೊತ್ತಾಗಿದೆ, ಸಮಸ್ಯೆ ಸರಿಯಾಗುತ್ತೆ ಅಂದ್ರು. ಸುವರ್ಣ ನ್ಯೂಸ್ ವರದಿಯಿಂದಾಗಿ ಅಲ್ಲಿದ್ದವರು ನನ್ನ ನೆರವಿಗೆ ಬರುವಂತಾಯಿತು. ನಿಮ್ಮ ವರದಿಯ ಪರಿಣಾಮ ನಾನು ಇಷ್ಟು ಬೇಗ, ಅಷ್ಟೇ ಸುರಕ್ಷಿತವಾಗಿ ಊರು ತಲುಪುವಂತಾಯಿತು ಇಲ್ಲದೇ ಹೋಗಿದ್ದರೆ ಇನ್ನೂ ಒಂದು ವರ್ಷ ನಾನು ಜೈಲಿನಲ್ಲೇ ಇರ್ತಿದ್ದೆ ಎಂದು ಕಣ್ಣೀರಾದ ಚಂದ್ರಶೇಖರ್.

ನಾನು ತಾಯ್ನಾಡಿಗೆ ಬಂದಿದ್ದು ಮತ್ತು ಅಮ್ಮನ ಮುಖ ನೋಡಿ ತುಂಬಾ ಖುಷಿಯಾಗಿದೆ. ಮಂಗಳೂರಿನವರು ತುಂಬಾ ಜನ ನನ್ನ ನೆರವಿಗೆ ಬಂದರು. ಅಲ್ಲಿ ತುಂಬಾನೇ ಕಷ್ಟ ಆಗ್ತಿತ್ತು, ಯಾರತ್ರನೂ ಮಾತನಾಡಲು ಆಗ್ತಿರಲಿಲ್ಲ. ತಪ್ಪು ಮಾಡದೇ ನಾನು ಅಲ್ಲಿ ಸುಮ್ಮನೆ ಒಳಗಿದ್ದೆ, ತಪ್ಪು ಮಾಡದೇ ಶಿಕ್ಷೆ ಅನುಭವಿಸಿದೆ. ಅಲ್ಲಿನ ಸ್ಟೇಷನ್ ನಿಂದ ಕರೆ ಬಂದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ಅದಕ್ಕೂ ಮೊದಲು ನನ್ನತ್ರ ಕಂಪೆನಿ ಕೊಟ್ಟ ಒಂದೇ ಅಕೌಂಟ್ ನಂಬರ್ ಇತ್ತು. ಆದರೆ ಆವತ್ತು ಬ್ಯಾಂಕ್ ಅಕೌಂಟ್ ಚೆಕ್ ಮಾಡಿದಾಗಲೇ‌ ಮತ್ತೊಂದು ಅಕೌಂಟ್ ಇರೋದು ಗೊತ್ತಾಯ್ತು. ಸ್ಟೇಷನ್‌ ನಲ್ಲಿ ಕ್ಯಾಪ್ಟನ್ ಕೇಳಿದಾಗಲೂ ನನಗೆ ಅವರ ಅರಬಿ ಭಾಷೆ ಅರ್ಥವಾಗಿಲ್ಲ. ಕಂಪೆನಿ‌ ಕೊಟ್ಟ ಅಕೌಂಟ್ ಒಂದೇ ಅಂತ ಹೇಳಿದಾಗ ಅವತ್ತು ತನಿಖೆ ಮಾಡಿ ಬಿಟ್ಟರು. ಮತ್ತೆ ಬ್ಯಾಂಕ್ ಗೆ ಹೋಗಿ ಪರಿಶೀಲಿಸಿದಾಗಲೂ ಮತ್ತೊಂದು ಅಕೌಂಟ್ ಇರೋದು ಗೊತ್ತಾಯ್ತು. ಒಂದು ವಾರ ಬಿಟ್ಟು ಮತ್ತೆ ಸ್ಟೇಷನ್ ಗೆ ಹೋಗಿ ವಿಚಾರಣೆಗೆ ಹಾಜರಾದೆ. ಅಲ್ಲದೇ ಊರಿಗೆ ಹೋಗಲು ಇದೆ ಅಂತ ವಿನಂತಿ ಮಾಡಿದೆ. ಆದರೆ ಕಂಪೆನಿ‌ ಶ್ಯೂರಿಟಿ ಕೊಡಬೇಕು ಅಂತ ಅವರು ಹೇಳಿದ್ರು.

 

ಈ ದೇಶದಲ್ಲಿ ಮಕ್ಕಳು ಶಾಲೆಗೆ ಹೋಗಿಲ್ಲ ಅಂದ್ರೆ, ಪೋಷಕರನ್ನು ಜೈಲಿಗೆ ಹಾಕ್ತಾರಂತೆ!

ಬಳಿಕ ಸಂಜೆ ಹೋದಾಗ ನನ್ನನ್ನ ಅರೆಸ್ಟ್ ಮಾಡಿದ್ರು. ಆ ಬಳಿಕ ನಾನು ಹೊರಗೆ ಬಂದೇ ಇಲ್ಲ, ಜೈಲಿಗೆ ಹಾಕಿದ್ರು. ಆರು ತಿಂಗಳು ಜೈಲು ಮುಗಿಸಿ ಮತ್ತೆ ಸ್ಟೇಷನ್ ಗೆ ಬಂದರೂ ಹೊರಗೆ ಬಿಡಲಿಲ್ಲ. ಹೊರಗೆ ಬಿಡಲು ಸಾಕಷ್ಟು ಪೇಪರ್ ವರ್ಕ್ ಆಗಿದೆ, ಅದರಲ್ಲಿ ಹಲವರ ಶ್ರಮ ಇದೆ. ಮೊಬೈಲ್ ಗೆ ಬಂದ ಯಾವುದೋ ಲಿಂಕ್ ಓಪನ್ ಮಾಡಿದ ಕಾರಣ ಹೀಗಾಗಿದೆ ಅನಿಸುತ್ತೆ. ತಾಯಿಯ ಜೊತೆ ಒಂದೆರಡು ಸಾರಿ ಒಂದೆರಡು ನಿಮಿಷ ಮಾತನಾಡಿದ್ದೇನೆ. ಕಂಪೆನಿ ಮತ್ತು ಕಂಪೆನಿಯಲ್ಲಿ ಇರೋ ಇಲ್ಲಿನವರು ಸಹಾಯ ಮಾಡಿದ್ದಾರೆ. ಇಲ್ಲಿನ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ ಅಂತ ಎರಡು ತಿಂಗಳ ಹಿಂದೆ ಗೊತ್ತಾಯ್ತು. ಆದರೆ ನಾನು ಮನೆಯವರಿಗೂ ಅರೆಸ್ಟ್ ಆದ ವಿಚಾರ ಹೇಳಿರಲಿಲ್ಲ, ಜೈಲಲ್ಲಿದ್ದ ವಿಷಯ ಯಾರಿಗೂ ಗೊತ್ತಿರಲಿಲ್ಲ. ಟಿವಿಯಲ್ಲಿ ಬಂದಿದೆ ಎಂದಾಗ ನನಗೇ ಒಮ್ಮೆ ಶಾಕ್ ಆಯ್ತು. ಆದರೆ ಟಿವಿಯಲ್ಲಿ ಬಂದದ್ದು ನನಗೆ ತುಂಬಾ ಸಹಾಯಕ್ಕೆ ಬಂತು. ಟಿವಿಯಲ್ಲಿ ಬಂದ ಕಾರಣ ಅಲ್ಲಿದ್ದ ಅನೇಕರಿಗೆ ವಿಷಯ ಗೊತ್ತಾಗಿ ಅವರು ನೆರವಿಗೆ ಬಂದರು. ಮುಂದೆ ಬೇರೆ ಕಡೆ ಕೆಲಸ ಸಿಗೋ ಭರವಸೆ ಇದೆ ಎನ್ನುವ ಮೂಲಕ ಮತ್ತೊಮ್ಮೆ ಸುವರ್ಣನ್ಯೂಸ್ ಕಾರ್ಯಕ್ಕೆ ಧನ್ಯವಾದ ತಿಳಿಸಲು ಚಂದ್ರಶೇಖರ್ ಮರೆಯಲಿಲ್ಲ.

click me!