ವಿಕ್ರಂ ಗೌಡನ ಎನ್‌ಕೌಂಟರ್ ಫೇಕ್, ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ ಕಿಡಿ!

By Suvarna News  |  First Published Nov 22, 2024, 11:19 AM IST

ವಿಕ್ರಂ ಗೌಡನ ಎನ್ ಕೌಂಟರ್ ಫೇಕ್ ಆಗಿದೆ. ಎನ್‌ಕೌಂಟರ್ ಬಗ್ಗೆ ತಿಳಿದವರು ಯಾರೂ ಇದನ್ನ ಒಪ್ಪಲ್ಲ ಎಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ ಕಿಡಿಕಾರಿದ್ದಾರೆ. ಎನ್‌ಕೌಂಟರ್ ಸಮರ್ಥನೆ ಮಾಡಿಕೊಂಡ ಮುಖ್ಯಮಂತ್ರಿ, ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ವಿರುದ್ಧವು ವಾಗ್ದಾಳಿ ನಡೆಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು (ನ.22):
ಉಡುಪಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ ಕೌಂಟರ್ ನಡೆದು ನಾಲ್ಕು ದಿನವೇ ಕಳೆದಿದೆ. ಕುಟುಂಬಸ್ಥರು ಅಂತ್ಯ ಸಂಸ್ಕಾರವನ್ನೂ ಮಾಡಿದ್ದಾರೆ. ಆದ್ರೆ, ಈಗ ಆ ಎನ್ ಕೌಂಟರ್ ಗೆ ಅಪಸ್ವರ ಎದ್ದಿದ್ದು, ಎನ್ ಕೌಂಟರ್ ವಿರುದ್ಧ ಮಾಜಿ ನಕ್ಸಲರು ಕಿಡಿಕಾರಿದ್ದಾರೆ. ಅದೊಂದು ಫೇಕ್ ಎನ್ ಕೌಂಟರ್. ಒಂದು ಪೋಟೋನೂ ರಿಲೀಸ್ ಮಾಡದ ಪೊಲೀಸ್ ಇಲಾಖೆ ವಿರುದ್ಧ ಮಾಜಿ ನಕ್ಸಲರು ಕಿಡಿಕಾರಿದ್ದಾರೆ. 

ನ್ಯಾಯಾಂಗ ತನಿಖೆಗೆ ಆಗ್ರಹ : 

Tap to resize

Latest Videos

undefined

ಪಶ್ಚಿಮ ಘಟ್ಟಗಳ ಸಾಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಕೆಂಪು ಉಗ್ರರದ್ದೆ ಹೆಜ್ಜೆ ಸದ್ದು. ಜೊತೆ-ಜೊತೆಗೆ ಖಾಕಿ ಪಡೆಯ ಕೂಬಿಂಗ್ ಕೂಡ ಅಷ್ಟೇ ಸದ್ದು ಮಾಡ್ತಿದೆ. ಈ ಮಧ್ಯೆ ನಕ್ಸಲ್ ನಾಯಕ ವಿಕ್ರಂಗೌಡನ ಎನ್ ಕೌಂಟರ್ ಕೂಡ ನಡೆದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರೋ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದು ನಾಲ್ಕು ದಿನವೇ ಕಳೆದಿದೆ. ಆದ್ರೆ, ಎನ್ ಕೌಂಟರ್ ನಲ್ಲಿ ಸಾವಪ್ಪಿದ ಪೋಟೋ, ವಿಡಿಯೋ ಯಾವುದನ್ನೂ ಪೊಲೀಸರು ರಿಲೀಸ್ ಮಾಡಿಲ್ಲ. ಈಗ ಪೊಲೀಸರ ಆ ನಡೆಯೇ ಅಪಸ್ವರಕ್ಕೆ ಕಾರಣವಾಗಿದೆ. ಆ ಸಾಲಿನಲ್ಲಿ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಕೂಡ, ಇದೊಂದು ಫೇಕ್ ಎನ್ ಕೌಂಟರ್ ಅಂತ ಆರೋಪಿಸಿ, ನ್ಯಾಯಂಗ ತನಿಖೆಗೆ ಆಗ್ರಹಿಸಿದ್ದಾರೆ. ಎನ್ ಕೌಂಟರ್ ಬಗ್ಗೆ ತಿಳಿದವರು ಇದನ್ನ ಒಪ್ಪಲ್ಲ. ಅಷ್ಟೆ ಅಲ್ದೆ, ಅಧಿಕಾರಿಗಳ ಒಮ್ಮುಖ ವರದಿಯನ್ನೇ ನಂಬಿ ಮುಖ್ಯಮಂತ್ರಿ,  ಹೋಂ ಮಿನಿಸ್ಟರ್ ಕೂಡ ಸಮರ್ಥನೆ ಮಾಡಿಕೊಂಡಿರೋರು ನಿಜಕ್ಕೂ ದುರಂತ. ಹಾಗಾಗಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಫೇಕ್ ಎನ್ ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. 

ನಕ್ಸಲ್ ದಾಳಿ ಪ್ಲಾನ್ ಮಾಡಿರಲಿಲ್ಲ, ವಿಕ್ರಂ ಗೌಡ ಎನ್‌ಕೌಂಟರ್ ಫೇಕ್ ಅಲ್ಲ: ಡಿಜಿಪಿ

ಸಿಎಂ, ಗೃಹಸಚಿವರ ವಿರುದ್ಧವೂ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಕಿಡಿ

ಇನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೀಡಿರೋ ಎನ್ ಕೌಂಟರ್ ಬಗ್ಗೆ ಅಸಮಾಧಾನ ಹೊರ ಹಾಕಿರೋ ನಿಲಗುಳಿ ಪದ್ಮನಾಭ್, ವಿಕ್ರಂ ಗೌಡನದ್ದು ಕಪೋಲ ಕಲ್ಪಿತ ಎನ್ ಕೌಂಟರ್. ಎಲ್ಲೋ ಬಂಧಿಸಿ, ಹಿಂಸೆ ನೀಡಿ ಹೊಡೆದು ಹಾಕಿ, ಕಾಡಿಗೆ ತಂದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯವಾಹಿನಿಗೆ ಬರ್ರಿ ಅಂತಾರೆ. ಬಂದ್ರೆ ಸರ್ಕಾರದಿಂದ ನೋ ಯೂಸ್. ಕನ್ಯಾಕುಮಾರಿ ಮುಖ್ಯ ವಾಹಿನಿಗೆ ಬಂದು ಎಂಟು ವರ್ಷವಾಯ್ತು. ನಾನು ಅತೀ ಕಷ್ಟದಲ್ಲಿದ್ದೇನೆ. ಮನೆ ಕೊಡಲಿಲ್ಲ. ನನ್ನ ಗುಡಿಸಲಿಗೆ ಕರೆಂಟ್ ಕೊಡ್ಲಿಲ್ಲ. ಕೇಸ್ ಗಳು ಹಾಗೇ ಇವೆ. ವಾರಕ್ಕೆ ಮೂರು-ನಾಲ್ಕು ದಿನ ಕೋರ್ಟ್ ಅಲೆಯುತ್ತಿದ್ದೇನೆ. ಇನ್ನು ಕನ್ಯಾಕುಮಾರಿ ಏಳೂವರೆ ವರ್ಷದಿಂದ  ಜೈಲಿನಲ್ಲಿದ್ದಾರೆ. ಇದು ಮುಖ್ಯವಾಹಿನಿನಾ. ಜೈಲಿನಲ್ಲಿರೋದು ಮುಖ್ಯವಾಹಿನಿಯಾ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ, ನಕ್ಸಲ್ ನಾಯಕ ವಿಕ್ರಂ ಗೌಡನದ್ದು ಎನ್ ಕೌಂಟರ್ ಎಂದು ಈಗಾಗಲೇ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಆ ಜಾಗದಲ್ಲಿ ಎನ್ ಕೌಂಟರ್ ಆಗಿದ್ದ ವಿಕ್ರಂ ಗೌಡನ ಪೋಟೋ ವಿಡಿಯೋ ರಿಲೀಸ್ ಮಾಡದೇ ಇರೋದ್ರಿಂದ ಈಗ ಅಪಸ್ವರ ಎದ್ದಿದ್ದು ನ್ಯಾಯಂಗ ತನಿಖೆಗೆ ಆಗ್ರಹಿಸಿದ್ದಾರೆ.

click me!