ಈ ಬಾರಿಯ ಮುಂಗಾರು ಅವಧಿಯಲ್ಲಿ ಈವರೆಗೆ ಬೆಂಗಳೂರು ನಗರವು ಅರ್ಧ ಶತಮಾನದಲ್ಲೇ ಎರಡನೇ ಅತಿ ಹೆಚ್ಚು ದಾಖಲೆಯ ಮಳೆಯನ್ನು ಕಂಡಿದೆ. ಇನ್ನೊಂದು ಕಡೆ ಭಾನುವಾರ ತಡರಾತ್ರಿಯ ಮಳೆ ಸಹ ಏಕ ದಿನದ (24 ಗಂಟೆಗಳ) ಅವಧಿಯಲ್ಲಿ ಸುರಿದ ‘8 ವರ್ಷಗಳ ಅತಿ ದೊಡ್ಡ ಮಳೆ’ ಎಂಬ ದಾಖಲೆಯನ್ನು ಬರೆದಿದೆ.
ಬೆಂಗಳೂರು (ಸೆ.6) : ಈ ಬಾರಿಯ ಮುಂಗಾರು ಅವಧಿಯಲ್ಲಿ ಈವರೆಗೆ ಬೆಂಗಳೂರು ನಗರವು ಅರ್ಧ ಶತಮಾನದಲ್ಲೇ ಎರಡನೇ ಅತಿ ಹೆಚ್ಚು ದಾಖಲೆಯ ಮಳೆಯನ್ನು ಕಂಡಿದೆ. ಇನ್ನೊಂದು ಕಡೆ ಭಾನುವಾರ ತಡರಾತ್ರಿಯ ಮಳೆ ಸಹ ಏಕ ದಿನದ (24 ಗಂಟೆಗಳ) ಅವಧಿಯಲ್ಲಿ ಸುರಿದ ‘8 ವರ್ಷಗಳ ಅತಿ ದೊಡ್ಡ ಮಳೆ’ ಎಂಬ ದಾಖಲೆಯನ್ನು ಬರೆದಿದೆ. ಈ ಮಹಾಮಳೆಯ ಆರ್ಭಟಕ್ಕೆ ಇಡೀ ನಗರ ನಲುಗಿಹೋಗಿ ಜನಜೀವನ ಅಸ್ತವ್ಯಸ್ತಗೊಂಡರೆ, ಐಟಿ ಹಬ್ ಎನಿಸಿಕೊಂಡಿರುವ ಪ್ರದೇಶಗಳು ಜಲಾವೃತಗೊಂಡು ಕೋಟ್ಯಂತರ ರು. ನಷ್ಟಉಂಟಾಗಿದೆ. ಇದೇ ವೇಳೆ ಮಳೆ ನೀರಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
Bengaluru: 51 ವರ್ಷಗಳಲ್ಲಿ ದಾಖಲೆಯ 709 ಎಂ.ಎಂ ಮಳೆ ಸುರಿದಿದೆ: ಬಿಬಿಎಂಪಿ ಮುಖ್ಯ ಆಯುಕ್ತ
ಮುಂಗಾರು ಅವಧಿಯ ದಾಖಲೆಯ ಮಳೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ‘ನಗರದಲ್ಲಿ ಮಳೆಗಾಲದಲ್ಲಿ (ಜೂನ್‌ನಿಂದ ಸೆಪ್ಟೆಂಬರ್‌ವರೆಗೆ) 330 ಮಿ.ಮೀ. ವಾಡಿಕೆ ಮಳೆಯಾಗುತ್ತದೆ. 1971ರಿಂದ ಇಲ್ಲಿವರೆಗೂ (51 ವರ್ಷಗಳಲ್ಲಿ) ಮುಂಗಾರು ಅವಧಿಯಲ್ಲಿ ಎರಡು ಬಾರಿ 700 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಈ ಹಿಂದೆ 1998ರಲ್ಲಿ 725 ಮಿ.ಮೀ ಮಳೆ ಸುರಿದಿತ್ತು. ಆ ಬಳಿಕ ಎರಡನೇ ಅತಿ ಹೆಚ್ಚು ಪ್ರಸಕ್ತ ವರ್ಷ ಜೂನ್ 1ರಿಂದ ಸೆ.5ವರೆಗೂ 709 ಮಿ.ಮೀ. ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.
8 ವರ್ಷದಲ್ಲಿಯೇ ಹೆಚ್ಚು ಮಳೆ:
ಭಾನುವಾರ 24 ಗಂಟೆಯ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 131 ಮಿ.ಮೀ (13 ಸೆ.ಮೀ) ಮಳೆ ಸುರಿದಿದೆ. ಈ ಹಿಂದೆ 2014ರ ಜುಲೈನಲ್ಲಿ ಒಂದು ದಿನ 132 ಮಿ.ಮೀ ಮಳೆಯಾಗಿತ್ತು. ಆ ಬಳಿಕ ಎಂಟು ವರ್ಷಗಳಲ್ಲಿಯೇ ಒಂದು ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ. ಬೆಂಗಳೂರು ನಗರ ಭಾಗ ಹೊರತು ಪಡಿಸಿ ಎಎಚ್‌ಎ ಮಳೆ ಮಾಪನ ಕೇಂದ್ರದಲ್ಲಿ 123.8 ಮಿ.ಮೀ, ಕೆಂಪೇಗೌಡ ವಿಮಾನ ನಿಲ್ದಾಣ ಮಾಪನ ಕೇಂದ್ರದಲ್ಲಿ 109.6 ಮಿ.ಮೀ.ನಷ್ಟು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 130 ಮಿ.ಮೀ. ಮಳೆಯಾಗಿದೆ.
ಎಲ್ಲಿ ಹೆಚ್ಚು ಮಳೆ ದಾಖಲು?:
ಬೆಂಗಳೂರು ನಗರದಲ್ಲಿ ತಾವರೆಕೆರೆ, ಚೋಳನಾಯಕನಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಲಯವಾರು ತಾವರೆಕೆರೆಯಲ್ಲಿ 135.5 ಮಿ.ಮೀ, ಚೋಳನಾಯಕನಹಳ್ಳಿ 135 ಮಿ.ಮೀ, ಸೊಂಡೆಕೊಪ್ಪ 79.5 ಮಿ.ಮೀ, ಯಲಹಂಕ, ಜಿಕೆವಿಕೆ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ತಲಾ 70 ಮಿ.ಮೀ, ದಾಸನಾಪುರ 67.5 ಮಿ.ಮೀ, ಹಂಪಿನಗರ 66, ಗಂಟಿಗಾನಹಳ್ಳಿ 65.5 ಮಿ.ಮೀ, ಸಿಂಗನಾಯಕನಹಳ್ಳಿ 68 ಮಿ.ಮೀ, ಕಾಚೋಹಳ್ಳಿ, ಶಿವಕೋಟೆಯಲ್ಲಿ 70 ಮಿ.ಮೀ ಮಳೆ ದಾಖಲಾಗಿದೆ.
Bengaluru Rain; 1998ರ ಬಳಿಕ ಮೊದಲ ಬಾರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ!
ವರ್ಷ ಒಂದು ದಿನದಲ್ಲಿ ದಾಖಲಾದ ಅಧಿಕ ಮಳೆ (ಮಿ.ಮೀ)