Karnataka High Court : ಸಂತ್ರಸ್ತೆಯನ್ನು ರೇಪಿಸ್ಟ್ ಮದುವೆಯಾದರೂ ಕೇಸು ರದ್ದಿಲ್ಲ

Kannadaprabha News   | Asianet News
Published : Nov 25, 2021, 01:12 PM ISTUpdated : Nov 25, 2021, 01:33 PM IST
Karnataka High Court :  ಸಂತ್ರಸ್ತೆಯನ್ನು ರೇಪಿಸ್ಟ್ ಮದುವೆಯಾದರೂ ಕೇಸು ರದ್ದಿಲ್ಲ

ಸಾರಾಂಶ

ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಸಲ್ಲಿಸಿರುವ ಅರ್ಜಿ ವಜಾ  ಸಂತ್ರಸ್ತೆ ಸಮ್ಮತಿ ನೀಡಿದರೂ ಹಾಗೂ ಅತ್ಯಾಚಾರಿಯ ಮದುವೆ ಆಗಿದ್ದರೂ ಪ್ರಕರಣ ರದ್ದು ಪಡಿಸಲಾಗದು -  ಹೈ ಕೋರ್ಟ್

ಬೆಂಗಳೂರು (ನ.25):   ಅತ್ಯಾಚಾರ ಪ್ರಕರಣವನ್ನು (Rape Case) ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ (High Court), ಅತ್ಯಾಚಾರ ಹೀನ ಕೃತ್ಯವಾಗಿರುವ ಕಾರಣ ಸಂತ್ರಸ್ತೆ ಸಮ್ಮತಿ ನೀಡಿದರೂ ಹಾಗೂ ಅತ್ಯಾಚಾರಿಯ (Rapist) ಮದುವೆ ಆಗಿದ್ದರೂ ಪ್ರಕರಣ ರದ್ದು ಪಡಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.  ಈ ಕುರಿತು ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ವಿಜಯಪುರದ (Vijayapura) ಆರೋಪಿ ಮತ್ತು ಸಂತ್ರಸ್ತೆ ಸರಳಾ (ಹೆಸರು ಬದಲಿಸಲಾಗಿದೆ) ಜಂಟಿಯಾಗಿ ಸಲ್ಲಿಸಿದ್ದ ಕ್ರಿಮಿನಲ್  (Criminal ) ಅರ್ಜಿ ವಿಚಾರಣೆ ನಡೆಸಿದ ಎಚ್.ಪಿ. ಸಂದೇಶ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. 

ಪ್ರೀತಿಯ (Love) ಸೋಗಿನಲ್ಲಿ ಅಪ್ರಾಪ್ತೆಯಾಗಿದ್ದ ಸರಳಾ ಮೇಲೆ ಅನಿಲ್ ಅತ್ಯಾಚಾರ ಎಸಗಿದ್ದ. ಇದರಿಂದ ಆಕೆ ಗರ್ಭ ಧರಿಸಿದ್ದಳು (Pregnant). ಈ ಕುರಿತು ದೂರು ದಾಖಲಾಗಿದ್ದು ( complaint  Lodge), ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್‌  ಮತ್ತು ಪೋಕ್ಸೋ (PCSO) ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

ಇದೀಗ ಸರಳ ಮತ್ತು ಅನಿಲ್ ಹೈಕೋರ್ಟ್‌ಗೆ (High Court) ಜಂಟಿಯಾಗಿ ಅರ್ಜಿ ಸಲ್ಲಿಸಿ, ‘ನಾವು ಒಪ್ಪಿಗೆ ಮೇರೆ ಮದುವೆಯಾಗಿದ್ದೇವೆ. ನಮಗೆ ಮಗು ಜನಿಸಿದೆ. ಆದರೆ, ಅನಿಲ್ ಈಗಲೂ ಜೈಲಿನಲ್ಲಿದ್ದು (Jail), ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದ್ದರು. ಈ ಮನವಿ ತಿರಸ್ಕರಿಸಿರುವ ಹೈಕೋರ್ಟ್, ‘ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳು. ಸದ್ಯ ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಈ ಅರ್ಜಿ ಸಲ್ಲಿಸಿ, ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ. ಸಂತ್ರಸ್ತೆ ಅಪ್ರಾಪ್ತಳಾಗಿದ್ದು, ಅತ್ಯಾಚಾರ (Rape) ನಡೆದಾಗ ಸಂತ್ರಸ್ತೆ ಒಪ್ಪಿಗೆ ನೀಡಿದರೂ ಅದನ್ನು ಒಪ್ಪಿಗೆ ಎಂಬುದಾಗಿ ಪರಿಗಣಿಸಲಾಗದು. 

ಇನ್ನೂ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ (Marriage) ಎಂಬ ಕಾರಣ ಆರೋಪಿ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸಲಾಗದು’ ಎಂದಿತು. ‘ಇನ್ನೂ ಸಂತ್ರಸ್ತೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ, ಘಟನೆ ನಡೆದಾಗ ತನಗೆ 19 ವರ್ಷ ಆಗಿತ್ತು ಎಂದು ಹೇಳಿಕೆ ನೀಡಿದ್ದಾಳೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳೆ ಅಥವಾ ಪ್ರಾಪ್ತ ವಯಸ್ಕಳಾಗಿದ್ದಳೆ ಎಂಬುದನ್ನು ವಿಚಾರಣಾ ನ್ಯಾಯಾಲಯ ತೀರ್ಮಾನಿಸಬೇಕಿದೆ. 

ಈ ಅಂಶವನ್ನು ಹೈಕೋರ್ಟ್ ಒಪ್ಪುವುದಿಲ್ಲ. ಅತ್ಯಾಚಾರದಂತಹ ಹೀನ ಕೃತ್ಯದಲ್ಲಿ ಸಂತ್ರಸ್ತೆ ಮತ್ತು ಆರೋಪಿ ನೀಡಿದ ಸಮ್ಮತಿಯನ್ನು ಒಪ್ಪಿ ಪ್ರಕರಣ ರದ್ದುಪಡಿಸಲಾಗದು’ ಎಂದಿತು. ಅಲ್ಲದೆ, ಆರೋಪಿಯು ಕೃತ್ಯವು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರಲಿದೆ. ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪ್ರಕರಣ ರದ್ದುಪಡಿಸಿದರೆ ಪೋಕ್ಸೋ ಕಾಯ್ದೆ ಜಾರಿಯ ಸದುದ್ದೇಶಕ್ಕೆ ಸೋಲಾಗುತ್ತದೆ ಎಂದ ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿ ವಜಾಗೊಳಿಸಿತು. ಜತೆಗೆ, ಅರ್ಜಿ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.  

 ಶಿಕ್ಷೆ ಇಳಿಸಿದ  ಹೈ ಕೋರ್ಟ್ ಜಡ್ಜ್ :   10 ವರ್ಷದ ಬಾಲಕನೊಬ್ಬನ ಜತೆ ಮುಖಮೈಥುನ (Oral sex) ನಡೆಸಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ಅಲಹಾಬಾದ್‌ ಹೈಕೋರ್ಟ್‌ 7 ವರ್ಷಕ್ಕೆ ಇಳಿಸಿದೆ. ಅಷ್ಟು ಮಾತ್ರವಲ್ಲ, ‘ಮುಖ ಮೈಥುನ ಅಷ್ಟು ಗಂಭೀರ ಅಪರಾಧವಲ್ಲ’ ಎಂಬ ಕಾರಣವನ್ನು ತನ್ನ ಈ ಆದೇಶಕ್ಕೆ ಹೈ ಕೋರ್ಟ್‌ (High Court) ನೀಡಿತ್ತು.

ನ್ಯಾ.ಅನುಲ್‌ ಕುಮಾರ್‌ ಝಾ ಅವರು ಅಪರಾಧಿ ಸೋನು ಕುಶ್ವಾಹಾ ಎಂಬ ವ್ಯಕ್ತಿಗೆ ನೀಡಿದ್ದ ಶಿಕ್ಷೆಯನ್ನು (Punishment) 10ರಿಂದ 7 ವರ್ಷಕ್ಕೆ ಹಾಗೂ ದಂಡವನ್ನು 5 ಸಾವಿರಕ್ಕೆ ಇಳಿಸಿ ಪ್ರಕಟಿಸಿದ ಈ ಆದೇಶಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಕುಶ್ವಾಹಾಗೆ ವಿಶೇಷ ಸತ್ರ ನ್ಯಾಯಾಲಯ 10 ವರ್ಷ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆ ನಡೆಸಿದ ನ್ಯಾ. ಝಾ, ‘ಪೋಕ್ಸೋ ಕಾಯ್ದೆಯ 6ನೇ ಪರಿಚ್ಛೇದ (ಕೆರಳಿಸಿ ಬಲವಂತಪಡಿಸಿ ಎಸಗುವ ಲೈಂಗಿಕ ದೌರ್ಜನ್ಯ) ಹಾಗೂ ಐಪಿಸಿ ಸೆಕ್ಷನ್‌ 377 (ಅಸಹಜ ಅಪರಾಧ) ಹಾಗೂ 506ರ (ಕ್ರಿಮಿನಲ್‌ ಪ್ರಚೋದನೆ) ಅಡಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗದು. ಬಲವಂತಪಡಿಸಿ ಎಸಗುವ ಲೈಂಗಿಕ ದೌರ್ಜನ್ಯ ಕುರಿತಾಗಿನ ಪೋಕ್ಸೋ ಕಾಯ್ದೆಯ 4ನೇ ಸೆಕ್ಷನ್‌ ಅಡಿ ಈ ಅಪರಾಧ ಬರುತ್ತದೆ. ಹೀಗಾಗಿ ಮಗುವಿನ ಬಾಯಿಯಲ್ಲಿ ಗುಪ್ತಾಂಗ ಇರಿಸಿದ ಅಪರಾಧಕ್ಕೆ ಸೆಕ್ಷನ್‌ 4 ಅನ್ವಯವಾಗುತ್ತದೆ. ಇದು ಸೆಕ್ಷನ್‌ 6ಕ್ಕಿಂತ ‘ಕಮ್ಮಿ ಅಪರಾಧ’ ಎನ್ನಿಸಿಕೊಳ್ಳುತ್ತವೆ’ ಎಂದು ಸ್ಪಷ್ಟಪಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು