* ಕರ್ನಾಟಕದಲ್ಲಿ ಕೊರೋನಾ ವೈರಸ್ ಏರಿಳಿತ ಮುಂದುವರಿಕೆ
* ಇಂದು (ನ. 24) ರಾಜ್ಯಾದ್ಯಂತ 254 ಹೊಸ ಕೇಸ್
* ಕೊರೋನಾ ಪಾಸಿಟಿವಿಟಿ ದರ ಶೇ, 0.38 ರಷ್ಟು ಇದ್ರೆ, ಸಾವಿನ ಪ್ರಮಾಣ 1.18ರಷ್ಟಿದೆ
ಬೆಂಗಳೂರು, (ನ,24): ರಾಜ್ಯದಲ್ಲಿ ಕೊರೋನಾ ವೈರಸ್ (Coronavirus) ಏರಿಳಿತವಾಗುತ್ತಿದ್ದು, ಇಂದು (ನ. 24) ರಾಜ್ಯಾದ್ಯಂತ 254 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಕೋರೋನಾದಿಂದಾಗಿ ಮೂವರು ಬಲಿಯಾಗಿದ್ದಾರೆ Deaths). ಇದರೊಂದಿಗೆ ಸೋಂಕಿತರ ಸಂಖ್ಯೆ 29,94,255ಕ್ಕೆ ಏರಿಕೆಯಾಗಿದ್ರೆ, 38,185 ಜನ ಕೊರೋನಾಗೆ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ (Karnataka Health department) ಮಾಹಿತಿ ನೀಡಿದೆ.
undefined
Corona update: ಭಾರತದಲ್ಲಿ ಕೊರೋನಾ ಏರಿಳಿತ, ಪಾಸಿಟಿವ್ ಕೇಸ್ ಏರಿಕೆ, ಸಕ್ರಿಯ ಸಂಖ್ಯೆಯಲ್ಲಿ ಇಳಿಕೆ
ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 546 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಗುಣಮುಖರ ಸಂಖ್ಯೆ 29,49,629ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ (Active Cases) ಸಂಖ್ಯೆ 6,412ಕ್ಕೆ ಕುಸಿದಿದೆ. ಕೊರೋನಾ ಪಾಸಿಟಿವಿಟಿ ದರ (positivity Rate) ಶೇ, 0.38 ರಷ್ಟು ಇದ್ರೆ, ಸಾವಿನ ಪ್ರಮಾಣ 1.18ರಷ್ಟಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು(ಬುಧವಾರ) 152 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ಸಂಭವಿಸಿರುವುದು ವರದಿಯಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 12,55,440ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 16,326ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 464 ಮಂದಿ ಸೋಂಕಿತರು ಗುಣಮುಖರಾಗಿದ್ದು, ನಗರದಲ್ಲಿ ಒಟ್ಟಾರೆ ಗುಣಮುಖರ ಪ್ರಮಾಣ 12,33,996ಕ್ಕೆ ಏರಿಕೆಯಾಗಿದೆ.
ದೇಶದ ಕೊರೋನಾ ಮಾಹಿತಿ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,283 ಹೊಸ ಕೊರೋನಾ ವೈರಸ್ (Coronavirus) ಪ್ರಕರಣಗಳು ದೃಢಪಟ್ಟಿದ್ದು ನಿನ್ನೆಗಿಂತ(ನ.23) ಶೇ 22ರಷ್ಟು ಕೊರೋನಾ ಪಾಸಿಟಿವ್ ಸಂಖ್ಯೆ (Corona positive Case) ಏರಿಕೆಯಾಗಿದೆ.
ಒಟ್ಟಾರೆ ಸೋಂಕಿತರ ಸಂಖ್ಯೆ 3 ಕೋಟಿ 45 ಲಕ್ಷದ 35 ಸಾವಿರದ 763ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ (Active Cases) ಸಂಖ್ಯೆ ದೇಶದಲ್ಲಿ 1 ಲಕ್ಷದ 11 ಸಾವಿರದ 481ಕ್ಕೆ ಇಳಿಕೆಯಾಗಿದೆ. ಇದು ಕಳೆದ 537 ದಿನಗಳಲ್ಲಿ ಅತಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.
ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ (Deaths) ಸಂಖ್ಯೆ 4 ಲಕ್ಷದ 66 ಸಾವಿರದ 584ಕ್ಕೆ ತಲುಪಿದ್ದು 437 ಮಂದಿ ಹೊಸದಾಗಿ ಮೃತಪಟ್ಟಿದ್ದಾರೆ. ಪ್ರತಿದಿನ ಸೋಂಕಿತರ ಸಂಖ್ಯೆ ಸತತ 47 ದಿನಗಳಿಂದ 20 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದೆ ಹಾಗೂ ಸತತ 150 ದಿನಗಳಿಂದ ಪ್ರತಿದಿನ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.
ಒಟ್ಟಾರೆ ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ 0.32ರಷ್ಟಿದ್ದು, ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.33ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಗರಿಷ್ಠವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
3ನೇ ಅಲೆ ಬಗ್ಗೆ ಎಚ್ಚರಿಕೆ
ಲೋಕಲ್ ಸರ್ಕಲ್ ಎನ್ನುವ ಸಂಸ್ಥೆ ಕೊರೊನಾ ಮೂರನೇ ಅಲೆಯ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ. ಜನರು ಇದೇ ರೀತಿ ಅಸಡ್ಡೆ, ಅಜಾಗರೂಕತೆಯಿಂದ ಇದ್ದರೆ, ಈ ಸಾಂಕ್ರಾಮಿಕ ರೋಗ ಮತ್ತೆ ಹರಡುವ ಸಾಧ್ಯತೆಯಿದೆ ಎಂದು ಸರ್ವೇಯಲ್ಲಿ ಎಚ್ಚರಿಸಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ ಜನರು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು, ಮದುವೆಯ ಸೀಸನ್ ಆಗಿರುವುದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಆಹ್ವಾನಿಸದೇ, ಕಾರ್ಯಕ್ರಮ ನಡೆಸಿದರೆ ಉತ್ತಮ ಎನ್ನುವ ಅಂಶ ಸಮೀಕ್ಷೆಯಲ್ಲಿ ಬಂದಿದೆ/
ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೊರೊನಾ ನಿರ್ಬಂಧವನ್ನು ಹಿಂದಕ್ಕೆ ಪಡೆದಿದೆ. ಮಾಸ್ಕ್ ಹಾಕಿಕೊಳ್ಳದೇ ಇರುವುದು, ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.