
ಬೆಂಗಳೂರು (ಮಾ.13): ದುಬೈನಿಂದ ಕೆ.ಜಿ.ಗಟ್ಟಲೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಆರೋಪಿ ರನ್ಯಾ ರಾವ್ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಟಿಯಾಗಿರುವ ರನ್ಯಾ ಹಲವು ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು, ಸ್ವಾಮೀಜಿ, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆಗೆ ನಂಟು ಹೊಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ನಟಿ ರನ್ಯಾಳಿಂದ ರೂಸಿ ಹೋಗಿದ್ದ ಪತಿ ಜತಿನ್ ಹುಕ್ಕೇರಿ ಯಾರು? ಕುಟುಂಬದ ಹಿನ್ನೆಲೆ ಏನು?
ಮುಖ್ಯವಾಗಿ ನಟಿಯ ಸ್ನೇಹಿತ ತರುಣ್ ರಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಆತ ತೆಲುಗು ನಟ ಎಂಬುದು ಬೆಳಕಿಗೆ ಬಂದಿದೆ. ರನ್ಯಾ ಆಪ್ತ ಸ್ನೇಹಿತನಾಗಿದ್ದ ತರುಣ್ ರಾಜ್ ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದು, ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾನೆ.
ಸಿನಿಮಾ ನಟನಾಗಲು ತರುಣ್ ಕೊಂಡೂರು ರಾಜ್ ಹೆಸ್ರನ್ನ ವಿರಾಟ್ ಕೊಂಡೂರು ರಾಜ್ ಅಂತ ಬದಲಾಯಿಸಿಕೊಂಡಿದ್ದ. ವಿರಾಟ್ ಕೊಂಡೂರು ರಾಜ್ ಅಂತ ಹೆಸರು ಬದಲಿಸಿಕೊಂಡು ಟಾಲಿವುಡ್ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದ. ತೆಲುಗು ಸಿನೆಮಾರಂಗದಲ್ಲಿ ಎಲ್ಲರ ಜೊತೆಗೂ ವಿರಾಟ್ ಅಂತಲೇ ಗುರುತಿಸಿಕೊಂಡಿದ್ದ ತರುಣ್ ರಾಜ್.
2018 ರಲ್ಲಿ ತೆರೆ ಕಂಡಿದ್ದ ತೆಲುಗಿನ ಪರಿಚಯಂ ಸಿನಿಮಾದ ನಾಯಕನಟನಾಗಿ ಅಭಿನಯ ಮಾಡಿದ್ದ. ಹೀಗಾಗಿ ಸಿನಿಮಾ ಮೂಲಕವೇ ನಟಿ ರನ್ಯಾ ಜೊತೆ ಸ್ನೇಹ ಬೆಳೆಸಿದ್ದ. ಆ ಬಳಿಕ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ನಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸದ್ಯ ಡಿಆರ್ ಐ ಕಸ್ಡಡಿಯಲ್ಲಿರೋ ತರುಣ್ ರಾಜ್ ಅಲಿಯಾಸ್ ವಿರಾಟ್ ಕೊಂಡೂರು ರಾಜ್ ನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸ್ಟಾರ್ ಹೋಟೆಲ್ ಮಾಲೀಕರೊಬ್ಬರ ಮೊಮ್ಮಗ ಮತ್ತು ಉದ್ಯಮಿ ಪುತ್ರ ತರುಣ್‌ರಾಜ್.
ಜೀವನ ಹಾಳಾದ ಬೇಸರ, ಪತಿ ಜತಿನ್ ಹುಕ್ಕೇರಿಯೇ ನಟಿ ರನ್ಯಾಳ ಕೃತ್ಯದ ಜಾಲವನ್ನು ಅಧಿಕಾರಿಗಳಿಗೆ ಕೊಟ್ರಾ?
ರನ್ಯಾ-ತರುಣ್ ಗೆ ಸೇರಿದ ಹಲವೆಡೆ ದಾಳಿ:
ಇನ್ನು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಹಿನ್ನೆಲೆ DRI ಅಧಿಕಾರಿಗಳು 9 ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿದ್ದು, ರನ್ಯಾ ಮತ್ತು ಆಕೆಯ ಆಪ್ತ ಸ್ನೇಹಿತ ತರುಣ್ ರಾಜ್ ಗೆ ಸೇರಿದ ಹಲವೆಡೆ ದಾಳಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ