ಅಭಿವೃದ್ಧಿಗೋಸ್ಕರ ರಾಮನಗರ ಬೆಂಗಳೂರಿಗೆ ಸೇರ್ಪಡೆ; ಡಿಕೆಶಿ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಮಂಕಾಳ ವೈದ್ಯ

By Ravi JanekalFirst Published Oct 26, 2023, 6:18 PM IST
Highlights

ರಾಮನಗರವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬೆಂಗಳೂರಿಗೆ ಸೇರ್ಪಡೆ ಮಾಡುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸಮರ್ಥಿಸಿಕೊಂಡರು.

ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಅ.26) : ರಾಮನಗರವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಬೆಂಗಳೂರಿಗೆ ಸೇರ್ಪಡೆ ಮಾಡುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸಮರ್ಥಿಸಿಕೊಂಡರು.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ ಇರುವ ಮೀನು ಸಾಕಾಣಿಕ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದರು ಅವರು, ಬಹಳ ಯೋಚನೆ ಮಾಡಿ, ಜನರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಮಾಡಿದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಡಿ.ಕೆ ಶಿವಕುಮಾರ ಅವರು ರಾಮನಗರಕ್ಕೆ ಅನ್ಯಾಯ ಆಗಲು ಬಿಡೋದಿಲ್ಲ. ರಾಮನಗರ ಅವರ ಆಸ್ತಿ ಎಂದು ಮಂಕಾಳ ಎಸ್ ವೈದ್ಯ ಅವರು ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದರು. 

ರಾಜಕೀಯಕ್ಕಾಗಿ ತಮ್ಮ ರಾಜಕೀಯ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳುವುದಕ್ಕಾಗಿ ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಭಯ ಶುರುವಾಗಿದೆ. ಅವರಿಬ್ಬರೂ ಮೈತ್ರಿ ಮಾಡಿಕೊಂಡರೂ ಎಂಪಿ ಚುನಾವಣೆಯಲ್ಲಿ ಅವರಿಗೆ ಒಂದು ಸೀಟು ಬರಲ್ಲ. ಹೀಗಾಗಿ ಏನೇನೋ ಮಾತನಾಡುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ವ್ಯಂಗ್ಯವಾಡಿದರು.

 

ಡಿಕೆಶಿ ವೈಯಕ್ತಿಕ ವಿಚಾರಕ್ಕೆ ಯಾಕೆ ಹೋಗ್ತೀರಿ? : ಎಚ್‌ಡಿಕೆಗೆ ಮಾಗಡಿ ಶಾಸಕ ತಿರುಗೇಟು

 ಹೊನ್ನಾವರ ಮತ್ತು ಕಾರಾವಾರದಲ್ಲಿ ಬಂದರು ನಿರ್ಮಾಣ ಮಾಡಿದರೆ ಅದರಿಂದ ಮೀನುಗಾರರಿಗೆ ತೊಂದರೆ ಆಗುವುದಾದರೆ ಬಂದರು ನಿರ್ಮಾಣ ಮಾಡುವುದಿಲ್ಲ. ನಮ್ಮ ಉದ್ದೇಶ ಮೀನುಗಾರರಿಗೆ ಯಾವುದೇ ತೊಂದರೆ ಆಗಬಾರದು. ಅವರಿಗೆ ಮೀನುಗಾರಿಕೆ ಉದ್ಯೋಗ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರು ಮೀನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಆದರೆ ನಾವು ಹೇಳುವುದು ಅವರ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಅದಕ್ಕಾಗಿ ನಾವು ಸಹಾಯ ಮಾಡಲು ಸಿದ್ಧವಿದ್ದೇವೆ. ಮೀನುಗಾರರ ಮಕ್ಕಳು ಮೀನುಗಾರಿಕೆ ಬಿಟ್ಟು ಬೇರೆಡೆ ಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಎಷ್ಟೋ ಮೀನುಗಾರರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೀನುಗಾರರಿಗೆ ತೊಂದರೆ ಆಗುವುದಾದರೆ ಅದನ್ನು ಮಾಡುವುದಿಲ್ಲ, ನಮಗೆ ಬಂದರು ಮುಖ್ಯ ಅಲ್ಲ ಎಂದು ಹೇಳಿದರು. 

ಇನ್ನು ಮೀನುಗಾರರನ್ನು ಪ್ರೋತ್ಸಾಹಿಸಲು ರಾಜ್ಯವ್ಯಾಪಿ ಸಂಚಾರಿ ಮತ್ಸ್ಯವಾಹಿನಿಗೆ ಸಿದ್ಧತೆ ನಡೆಯುತ್ತಿದೆ. ರಾಜ್ಯವ್ಯಾಪಿ 300 ಸಂಚಾರಿ ಮತ್ಸ್ಯ ವಾಹಿನಿಗೆ ಇನ್ನು ಎರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಬೆಂಗಳೂರು ಒಂದರಲ್ಲೇ 150 ಮತ್ಸ್ಯವಾಹಿನಿ ವಾಹನಗಳು ಇರಲಿವೆ. ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಾಹನಗಳು ಇರಲಿವೆ. ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿದ್ದು ಒಂದು ಮತ್ಸ್ಯಾಲಯಕ್ಕೆ ಬೇಡಿಕೆ ಇದೆ. ಅದಕ್ಕೆ ಪೂರಕವಾಗಿ ಅದಷ್ಟು ಶೀಘ್ರವೇ ಮತ್ಸ್ಯಾಲಯ ಮಾಡಲಾಗುವುದು ಎಂದರು. 

ಈ ಹಿಂದೆ ಮೀನುಗಾರರಿಗೆ ಒಂದುವರೆ ಲಕ್ಷ ಲೀಟರ್ ಸೀಮೆ ಎಣ್ಣೆ ಸಬ್ಸಿಡಿ ಕೊಡಲಾಗುತಿತ್ತು. ನಮ್ಮ ಸರ್ಕಾರ ಬಂದ ಕೂಡಲೇ ಬಜೆಟಿನಲ್ಲಿಯೇ 2 ಲಕ್ಷ ಲೀಟರ್ ಗೆ ಸಬ್ಸಿಡಿ ಇಟ್ಟಿದ್ದಾರೆ. ಹೀಗಾಗಿ ಈ ಬಾರಿ ಮೀನುಗಾರರಿಗೆ ತೊಂದರೆ ಆಗುವುದಿಲ್ಲ. ಆದರೆ ಇದಕ್ಕೆ ಕೇಂದ್ರ ಸರ್ಕಾರ ತನ್ನ ಕೋಟಾವನ್ನು ಕೊಡಬೇಕು ನಾವು ಅವರ ಹತ್ತಿರ ಮನವಿ ಮಾಡುತ್ತಿದ್ದೇವೆ. ಆದರೆ ಅವರು ಇಲ್ಲಿಯವರೆಗೆ ಕೊಡಲಿಲ್ಲ ಎಂದು ಸಚಿವ ಮಂಕಾಳ ಎಸ್ ವೈದ್ಯ ಆರೋಪಿಸಿದ್ದಾರೆ. 

KIADB ಎಲ್ಲಾ ವ್ಯವಹಾರ ವಾದ್ರಾ ಒಡೆತನ ಡಿಎಲ್‌ಎಫ್‌ನಲ್ಲಿ ಆಫೀಸ್‌ನಲ್ಲಿ ನಡೆಯುತ್ತೆ: ಎಚ್‌ಡಿಕೆ ಹೊಸ ಬಾಂಬ್!

ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಕೊಡುತ್ತಿಲ್ಲವಲ್ಲ ಎನ್ನುವ ವಿಚಾರಕ್ಕೆ ನಾವು ಕೈಗಾರಿಕಾ ಸೀಮೆ ಎಣ್ಣೆ ಖರೀದಿಸಿ ಮೀನುಗಾರರಿಗೆ ವಿತರಣೆ ಮಾಡುತ್ತಿದ್ದೇವೆ. ಲೀಟರ್ಗೆ 35 ರೂಪಾಯಿ ಸರ್ಕಾರದಿಂದ ಸಬ್ಸಿಡಿ ನೀಡಿ 55 ರೂಪಾಯಿಗೆ ಖರೀದಿಸಿ ಕೊಡುತ್ತಿದ್ದೇವೆ.  ಹಿಂದೆ 125 ರೂಪಾಯಿ ಕೊಟ್ಟರೂ ಕೆರೋಸಿನ್ ಸಿಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಾವು 10 ತಿಂಗಳು ವಿತರಣೆ ಮಾಡುತ್ತಿದ್ದೇವೆ. ಇದು ದೇಶದಲ್ಲೇ ಮೊದಲು ನಮ್ಮ ಸರ್ಕಾರ ಕೊಡುತ್ತಿದೆ ಎಂದು ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.

click me!