ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಎಫೆಕ್ಟ್: ಯಾದಗಿರಿಯಲ್ಲಿ ನಡೆಯಬೇಕಿದ್ದ ರಿಯಾಲಿಟಿ ಶೋ ರದ್ದು!

By Ravi JanekalFirst Published Mar 7, 2024, 10:04 PM IST
Highlights

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಯಾದಗಿರಿಯಲ್ಲಿ ಆಯೋಜಿಸಿದ್ದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ರದ್ದು ಪಡಿಸಿದ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದರು ಏಕಾಏಕಿ ರದ್ದು ಮಾಡಿದ್ದರಿಂದ ನಿರಾಸೆಯಿಂದ ಮರಳಿದ ಜನರು

ಯಾದಗಿರಿ (ಮಾ.7): ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಯಾದಗಿರಿಯಲ್ಲಿ ಆಯೋಜಿಸಿದ್ದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ರದ್ದು ಪಡಿಸಿದ ಘಟನೆ ನಡೆದಿದೆ.

ಯಾದಗಿರಿಯ ಜಿಲ್ಲೆ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ. ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ 30-35 ಸಾವಿರ ಜನರು ಸೇರುವ ನಿರೀಕ್ಷೆಯಿತ್ತು. ಇಂದು ಮಧ್ಯಾಹ್ನದಿಂದ ಸಾವಿರಾರು ಜನರು ಸೇರಿದ್ದರು. ಕಾರ್ಯಕ್ರಮ ಆಗಲೇ ಜನರಿಂದ ತುಂಬಿಹೋಗಿತ್ತು. ಇನ್ನೇನು ಕಾರ್ಯಕ್ರಮಕ್ಕೆ ಎಲ್ಲ ತಯಾರಿ ಮಾಡಿಕೊಳ್ಳುವ ಹೊತ್ತಿಗೆ ಕಾರ್ಯಕ್ರಮ ರದ್ದು ಮಾಡಲಾಗಿದೆ.

ಕಾರ್ಯಕ್ರಮ ರದ್ದು ಆಗಿರೋದಾಗಿ ಸ್ವತಃ ಯಾದಗಿರಿ ಡಿಸಿ, ಎಸ್‌ಪಿ ಮಾಹಿತಿ ನೀಡಿದ್ದಾರೆ. ವೇದಿಕೆಯ ಮೇಲಿಂದಲೇ ಕಾರ್ಯಕ್ರಮದ ಆಯೋಜಕರಿಂದ ತಾಂತ್ರಿಕ ಕಾರಣ ಎಂದು ಹೇಳಿಸಿ ರದ್ದು ಮಾಡಿಸಿದ ಜಿಲ್ಲಾಧಿಕಾರಿ ಸುಶೀಲಾ ಬಿ, ಎಸ್‌ಪಿ ಸಂಗೀತಾ ಜಿ. ರಿಯಾಲಿಟಿ ಶೋ ನೋಡಲು ದೂರದ ಊರಿಂದ ಕಾರು ಬೈಕ್‌ಗಳಲ್ಲಿ ಬಂದಿದ್ದ ಜನರು. ಇನ್ನೇನು ಕಾರ್ಯಕ್ರಮ ಶುರುವಾಗುತ್ತೆ ಅನ್ನುವಾಗಲೆ ಏಕಾಏಕಿ ರದ್ದು ಮಾಡಿರುವುದು ಸಾವಿರಾರು ಪ್ರೇಕ್ಷಕರಿಗೆ ಗೊಂದಲ ಜೊತೆಗೆ ಭಾರೀ ನಿರಾಶೆಯಾಗಿದೆ.

ಇದ್ದಕ್ಕಿದ್ದಂತೆ ರದ್ದು ಮಾಡಿದ್ದು ಯಾಕೆ? ಕಾರ್ಯಕ್ರಮಕ್ಕೆ ಲಕ್ಷಾಂತರು ರೂಪಾಯಿ ಖರ್ಚು ಮಾಡಿ ದೊಡ್ಡ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಭದ್ರತೆಯ ಕಾರಣಗಳಿದ್ದಲ್ಲಿ ಮೊದಲೇ ಯಾಕೆ ಅನುಮತಿ ಕೊಟ್ಟಿದ್ದು? ಎಲ್ಲ ಸಿದ್ಧತೆ ನಡೆಸಿದ ಮೇಲೆ ಭದ್ರತಾ ನೆಪವೊಡ್ಡಿ ಕಾರ್ಯಕ್ರಮ ರದ್ದು ಮಾಡಿದರೆ ಸಿಬ್ಬಂದಿ, ವೇದಿಕೆ ನಿರ್ಮಾಣದ ಖರ್ಚು ಯಾರು ಭರಿಸುವುದು? ಹೀಗಂತಾ ಸಾರ್ವಜನಿಕರೇ ಆಕ್ರೋಶ ವ್ಯಕ್ತಪಡಿಸಿದರು.

ದೂರದ ಊರಿಂದ ರಿಯಾಲಿಟಿ ಶೋ ನೋಡಲು ಕುಟುಂಬ ಸಮೇತ ಬಂದಿದ್ದವರಿಗೆ ನಿರಾಶೆಯಾಯಿತು. ಯಾಕೆ ರದ್ದುಗೊಳಿಸಿದ್ದಾರೆಂದು ತಿಳಿಯದೇ ವೇದಿಕೆ ಮೇಲೆ ಪೊಲೀಸರು ಇರುವುದು ಕಂಡು ಹಿಡಿಶಾಪ ಹಾಕುತ್ತಾ ವಾಪಸ್ ಹೋಗುತ್ತಿರುವುದು ಕಂಡುಬಂತು.

ಯಾದಗಿರಿಯಲ್ಲಿ ನಡೆಯಬೇಕಿದ್ದ ರಿಯಾಲಿಟಿ ಕೊನೆ ಕ್ಷಣದಲ್ಲಿ ರದ್ದು; ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಿಡಿ

ಯಾದಗಿರಿಗೂ ರಾಮೇಶ್ವರ ಕೆಫೆ ಬಾಂಬರ್ ಗೂ ಲಿಂಕ್?

ಯಾದಗಿರಿ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಸಂಚಾರ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಗುಪ್ತಚರ ಇಲಾಖೆ ಮೂಲಕ ಆಡಳಿತಕ್ಕೆ ಮಾಹಿತಿ ರವಾನೆಯಾಗಿದೆ ಇದರಿಂದ ಜಿಲ್ಲೆಯಾದ್ಯಂತ ಹೈ ಅಲರ್ಟ್ ಸೂಚನೆಗಳು ಬಂದಿವೆ ಎಂಬ ಮಾತು ಕೇಳಿ ಬಂದಿವೆ. ಹೀಗಾಗಿ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಗ್ರ್ಯಾಂಡ್ ಫೀನಾಲೆ ರದ್ದು ಮಾಡಿರಬಹುದು. ರಿಯಾಲಿಟಿ ಶೋ ಆರಂಭಕ್ಕೆ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ರದ್ದಾಗಿದೆ. ಹೀಗಾಗಿ ಇದಕ್ಕೆ ಸಾರ್ವಜನಿಕರಲ್ಲಿ ಬಾಂಬರ್ ದಾಳಿ ತುಳುಕು ಹಾಕಿಕೊಂಡಿದೆ. ಆದರೆ ಕಾರ್ಯಕ್ರಮ ರದ್ದು ಮಾಡಿದ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳು. ಡಿಸಿ, ಎಸ್ಪಿ ಈ‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

click me!