ತುಮಕೂರು (ಅ.07): ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024ರ ಚುನಾವಣೆಯವರೆಗೂ ಬಿಜೆಪಿಯವರು ರಾಮಮಂದಿರ ನಿರ್ಮಾಣ ಕೆಲಸ ಮಾಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು. ನಾಳೆ ನಮ್ಮ ಸರ್ಕಾರ ಬಂದರೆ ನಾವು ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು..!
ತಾವು ಕೂಡ ರಾಮಮಂದಿರ ನಿರ್ಮಾಣಕ್ಕೆ .10 ಸಾವಿರ ಕೊಟ್ಟಿದ್ದೇವೆ. ಮಾಜಿ ಶಾಸಕ ಷಫಿ ಅಹಮದ್ ಕೂಡ ದುಡ್ಡು ಕೊಟ್ಟಿದ್ದಾರೆ ಎಂದು ತಿಳಿಸಿದ ಪರಮೇಶ್ವರ್, ರಾಮ ಬಿಜೆಪಿಗೆ ಮಾತ್ರ ಸೇರಿದ ವ್ಯಕ್ತಿಯಲ್ಲ ಎಂದರು. ಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ರು. ಸಂಗ್ರಹ ಮಾಡಿದ್ದಾರೆ. ಇನ್ನು ಮಾಡುತ್ತಲೇ ಇದ್ದಾರೆ ಎಂದ ಅವರು ಆ ಹಣ ಎಲ್ಲಿ ಹೋಯಿತು, ಯಾರು ಲೆಕ್ಕ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಬಿಜೆಪಿಯವರು ರಾಮ, ಭೀಮ, ಲಕ್ಷ್ಮಣ ಹೀಗೆ ವಿಷಯಗಳನ್ನು ತೆಗೆದುಕೊಂಡು ಜನಸಾಮಾನ್ಯರ ಭಾವನೆ ಜೊತೆ ಆಟವಾಡುತ್ತಾರೆ ಎಂದರು.
ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿಗೆ
ಕಾಂಗ್ರೆಸ್ (Congress) ಪಕ್ಷ ಹಿಂದಿನಿಂದಲೂ ದೀನ ದಲಿತರ, ಬಡವರ, ರೈತರ, ಹಿಂದುಳಿದವರ, ಕೂಲಿಕಾರ್ಮಿಕರ ಹಾಗೂ ಶೋಷಿತರ ಪರವಾಗಿ ನಿಂತಿದೆಯೇ ಹೊರತು ಬೇರೆ ಯಾವುದೇ ಪಕ್ಷ ನಿಂತಿಲ್ಲ. ಹಾಗಾಗಿ ಇಡೀ ದೇಶದ ಮತ್ತು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr.G.Parameshwar) ಕರೆ ನೀಡಿದರು.
ತುಮಕೂರಿನ (Tumkur) ಗಿರಿಗೌಡನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಈ ದೇಶವನ್ನು 58 ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ಆದರೆ ಎಂದಿಗೂ ಬಡವರ, ರೈತರ, ದೀನ ದಲಿತರ ವಿರುದ್ಧ ಕೆಲಸ ಮಾಡಲಿಲ್ಲ, ಇಡೀ ದೇಶದ ಜನತೆ ಬಿಜೆಪಿಗೆ (BJP) ಓಟು ಹಾಕಿ ಗೆಲ್ಲಿಸಿದರು. ಆದರೆ ನೀವು ಈ ದೇಶಕ್ಕೆ ಸ್ವಾತಂತ್ರ್ಯ (Freedom) ತಂದು ಕೊಟ್ಟ ಮಹಾತ್ಮ ಗಾಂಧಿ (Mahathma Gandhi) ಅವರನ್ನೇ ಅವಹೇಳನ ಮಾಡುತ್ತಿರಲ್ಲ ಕಾಂಗ್ರೆಸ್ ಸರ್ಕಾರವಿದ್ದಾಗ ಪೆಟ್ರೊಲ್, ಡೀಸೆಲ್, ಗ್ಯಾಸ್ ಮತ್ತು ದಿನಸಿ ಅಗತ್ಯ ಪದಾರ್ಥಗಳ ಬೆಲೆ ಏಷ್ಟಿತ್ತು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಎಷ್ಟಾಗಿದೆ.
ಮೈಸೂರಿನಲ್ಲಿ ಸಿದ್ದುಗೆ ಬಿಗ್ ಶಾಕ್: ಜೆಡಿಎಸ್ ಸೇರಿದ ಕಾಂಗ್ರೆಸ್ ಘಟಾನುಘಟಿ ಮುಖಂಡರು
ದೆಹಲಿಯಲ್ಲಿ (Delhi) ರೈತರು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ. ಅದರಿಂದ 260 ಜನ ಅಸುನೀಗಿದ್ದಾರೆ. ಆದರೂ ನೀವು ಅವರ ಪರ ನಿಂತಿಲ್ಲ, ಕೇಂದ್ರ ಸಚಿರೊಬ್ಬರ ಪುತ್ರ ರೈತರ ಮೇಲೆ ಕಾರು ಹರಿಸಿ 8 ಜನರನ್ನು ಸಾಯಿಸಿದ್ದಾರೆ. ಇದರ ಬಗ್ಗೆ ಪ್ರಿಯಾಂಕಾ ಗಾಂಧಿ ಪ್ರತಿಭಟಿಸಿರೆ ನೀವು ಬಂಧಿಸುತ್ತೀರಾ, ಇದೇ ರೀತಿ ನೀವು ಅದೇಷ್ಟು ಜನ ಹೆಣ್ಣು ಮಕ್ಕಳನ್ನು ಬಂಧಿಸುವಿರಿ ನಮ್ಮ ಕಾಂಗ್ರೆಸ್ ಪಕ್ಷದ ಹಳ್ಳಿಗಾಡಿನ ಹೆಣ್ಣು ಮಕ್ಕಳನ್ನು ಬಂಧಿಸಲು ನಿಮಗೆ ಸಾಧ್ಯವೆ ಎಂದರು.