Covid Racket: ನೆಗಡಿ ಬಂದವರಿಗೂ ಪಾಸಿಟಿವ್‌ ವರದಿ: ಕೋವಿಡ್‌ ಟೆಸ್ಟ್‌ ಹೆಸರಲ್ಲಿ ದೊಡ್ಡ ದಂಧೆ: ಡಿಕೆಶಿ

By Kannadaprabha NewsFirst Published Jan 2, 2022, 6:58 AM IST
Highlights

*  ವಿಮಾನದ ಮೂಲಕ ಹೊರ ದೇಶದಿಂದ ಬಂದವರ ಬಳಿ ವರದಿಗಾಗಿ ತಲಾ 3 ಸಾವಿರ ರು. ಸಂಗ್ರಹ
*  ಸಿಎಂ ಬೊಮ್ಮಾಯಿ ನಿಗಾ ವಹಿಸಬೇಕು
*  ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಅನಾರೋಗ್ಯದ ಭಯ ಇಲ್ಲ

ಬೆಂಗಳೂರು(ಜ.02):  ವಿದೇಶದಿಂದ ಬರುವವರ ಪರೀಕ್ಷೆ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ನೆಗಡಿ(Cold) ಬಂದವರಿಗೂ ಕೊರೋನಾ ಪಾಸಿಟಿವ್‌(Corona Positive) ಎಂದು ವರದಿ ನೀಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಿಗಾ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನದ(Flight) ಮೂಲಕ ಹೊರ ದೇಶದಿಂದ ಬಂದವರ ಬಳಿ ವರದಿಗಾಗಿ ತಲಾ 3 ಸಾವಿರ ರು. ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ನೆಗಡಿ ಬಂದವರಿಗೆಲ್ಲರಿಗೂ ಕೊರೋನಾ ಪಾಸಿಟಿವ್‌ ಎಂದು ಪ್ರಮಾಣಪತ್ರ ನೀಡುತ್ತಿದ್ದಾರೆ. ಕೊರೋನಾ ಪರೀಕ್ಷೆಯ(Covid Test) ಹೆಸರಿನಲ್ಲಿ ದೊಡ್ಡ ದಂಧೆ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇನ್ನು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಅನಾರೋಗ್ಯದ ಭಯ ಇಲ್ಲ. ಪಾದಯಾತ್ರೆಯಲ್ಲಿ(Padayatra) ನಾಲ್ಕೈದು ಆ್ಯಂಬುಲೆನ್ಸ್‌ಗಳು ಇರುತ್ತವೆ. ಎಳನೀರು ನೀಡಿ ಉಪಚರಿಸಲು ಮಂಡ್ಯ, ಮದ್ದೂರು ರೈತರು(Farmers) ಸಿದ್ಧರಿದ್ದಾರೆ ಎಂದು ಹೇಳಿದರು.

Free Hindu Temples: ಸರ್ಕಾರ ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ!

ಇದೇ ವೇಳೆ ಹೊಸ ವರ್ಷವಾದರೂ ಕೊರೋನಾ ಸೋಂಕು ದೂರವಾಗಬೇಕು. ಮಾನಸಿಕವಾಗಿ ರಾಜ್ಯದ ಜನತೆ ಕುಗ್ಗಿ ಹೋಗಿದ್ದಾರೆ. ಕೊರೋನಾದಿಂದ(Coronavirus) ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಹೀಗಾಗಿ ಹೊಸ ವರ್ಷದಲ್ಲಾದರೂ ಕೊರೋನಾ ದೂರವಾಗಬೇಕು ಎಂದರು.

ದೆಹಲಿಗೆ ಹೋಗಿ ಏನೇನು ಮಾಡ್ತಿದ್ದಾರೆ ಎಲ್ಲಾ ಗೊತ್ತಿದೆ, ಎಚ್‌ಡಿಕೆ ವಿರುದ್ಧ ಡಿಕೆಶಿ ಬಾಂಬ್

ಕೆಪಿಸಿಸಿ​ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(HD Kumaraswamy) ನಡುವಿನ ವಾಕ್ಸಮರ ಮುಂದುವರೆದಿದೆ. ಹೌದು...ಇಷ್ಟು ದಿನ ಸಿದ್ದರಾಮಯ್ಯನನವರ ವಿರುದ್ಧ ಗುಡುಗುತ್ತಿದ್ದ ಕುಮಾರಸ್ವಾಮಿ, ಇದೀಗ ಡಿಕೆ ಶಿವಕುಮಾರ್‌ ಅವರನ್ನ ಟಾರ್ಗೆಟ್ ಮಾಡಿದ್ದು, ತೀವ್ರ ವಾಗ್ದಾಳಿ ಮುಂದುವರೆಸಿದ್ದಾರೆ.

ಮೇಕೆದಾಟು ಯೋಜನೆ (mekedatu project)ಆಗ್ರಹಿಸಿ ಕಾಂಗ್ರೆಸ್(Congress) ಪಾದಯಾತ್ರೆಗೆ ಕುಮಾರಸ್ವಾಮಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಡಿಕೆ ಶಿವುಮಾರ್ ಸಹ ಸೂಕ್ಷ್ಮವಾಗಿ ತಿರುಗೇಟು ಕೊಟ್ಟಿದ್ದರು. 

ನನಗೂ ಈಗ ವಯಸ್ಸಾಗಿದೆ. ಗಡ್ಡ ಬೆಳ್ಳಗಾಗಿದೆ. ನಮ್ಮದೊಂದು ರಾಷ್ಟ್ರೀಯ ಪಕ್ಷ 100 ವರ್ಷ ದಾಟಿದೆ.  ಅವರ ಪಕ್ಷ ಹಾಗಲ್ಲ.. ಯಾವಾಗ ಬೇಕಾದ್ರು ಉದಯವಾಗುತ್ತೆ. ಪಾಪ ಅವರಿಗೆ ಇನ್ನೂ ಕೂಡ ವಯಸ್ಸಿದೆ. ನಾನು ಕಲ್ಲು ನುಂಗಿದಿನಿ..ಕಬ್ಬಿಣ ನುಂಗಿದಿನಿ.. ಎಲ್ಲಾ ಮಾಡಿದಿನಿ.. ಅವರ ಕೂಡ ತನಿಖೆ ಮಾಡಿದ್ದಾರೆ. ಪಾಪಾ. ಮೊನ್ನೆ  ದೆಹಲಿಗೆ ಹೋಗಿ ಏನೆಲ್ಲಾ ಮಾಡಿದ್ದಾರೆ ಪಾಪಾ. ನನ್ನ ವಿರುದ್ದ ದೊಡ್ಡ ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಡಿಕೆಶಿ ಎಚ್‌ಡಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 

Temple Politics: ಡಿಕೆಶಿ ಯಾವಾಗಲೂ ಹಿಂದುತ್ವದ ವಿರುದ್ಧವೇ ಚಿಂತಿಸುತ್ತಾರೆ, ಸಿಎಂ ತಿರುಗೇಟು

ಕುಮಾರಸ್ವಾಮಿ ಬಿಜೆಪಿ ಎರಡು ರಾಜಕೀಯ ಪಕ್ಷಗಳು ಸೇರಿ ಮಾಡ್ತಾ ಇವೆ. ದೆಹಲಿಗೆ ಹೋಗಿ ಏನೇನು ಮಾಡ್ತಿದ್ದಾರೆ ಎಲ್ಲಾ ಗೊತ್ತಿದೆ. ಇನ್ನೊಂದು ದಿನ ಎಲ್ಲವನ್ನ ಹೇಳ್ತೇನೆ. ನಮಗೆ ಯಾರ ಅನುಮತಿ ಬೇಕಿಲ್ಲ ನನ್ನ ಕಾಲು ಅವರ ಕಾಲು ನಡೆಯುತ್ತೇವೆ ಎಂದು ಅಚ್ಚರಿ ಹೇಳಿಕೆ ನೀಡಿದ್ದರು. 

ಕುಮಾರಣ್ಣ ಏನು ಬೇಕಾದರು ಹೇಳಲಿ. ನಮ್ಮನ್ನ ತಿದ್ದಲಿ. ಅವರು ಪ್ರಮಾಣವಚನಕ್ಕೆ ಹಾಕಿದ ಪಂಚೆಯ ಮಾದರಿ ಪಂಚೆಯನ್ನೇ ನಾನು ಹಾಕಿದ್ದೆ. ಹಿಂದೆ ಕುಮಾರಸ್ವಾಮಿ ಜೊತೆ ಪೂಜೆಯೂ ಮಾಡಿದ್ದೆ. ನಾನು ನಟನೆ ಮಾಡಲು‌ ಬರಲ್ಲ. ನಾನು ಕೂಡ ಥಿಯೇಟರ್ ಮಾಲೀಕ ಎಂದರು.

ಮತ ಯಾತ್ರೆನಾ.. ಒಳ್ಳೆ ಹೇಳಿಕೆ ಕೊಟ್ಟಿದ್ದಾರೆ. ಚನ್ನಾಗಿದೆ ಅದು. ನಾನು ಕುಮಾರಸ್ವಾಮಿ ಜೊತೆ ಕಾಂಪೀಟ್ ಮಾಡುವ ಶಕ್ತಿ ನನಗಿಲ್ಲ. ರಾಜಕಾರಣದಲ್ಲಿ ಯಾರು ಬೇಕಾದರು ಮಾಡಬಹುದು. ಕುಮಾರಸ್ವಾಮಿ ಏನೇ ಹೇಳಿದರು ನನ್ನ ತಿದ್ದಲು ಹೇಳ್ತಾ ಇದಾರೆ. ನನ್ನ ಒಳ್ಳೆದಕ್ಕೆ ಹೇಳ್ತಾ ಇದ್ದಾರೆ ಎಂದು ಹೇಳಿದ್ದರು. 
 

click me!