ಕಾಲು ಮುರಿದುಕೊಂಡ ಕಾನ್‌ಸ್ಟೇಬಲ್ ಜತೆ ಗೃಹ ಸಚಿವರ ನೇರ ಮಾತು... ಎಲ್ಲರಿಗೂ ಭತ್ಯೆ!

Published : Nov 02, 2021, 05:29 PM IST
ಕಾಲು ಮುರಿದುಕೊಂಡ ಕಾನ್‌ಸ್ಟೇಬಲ್ ಜತೆ ಗೃಹ ಸಚಿವರ ನೇರ ಮಾತು... ಎಲ್ಲರಿಗೂ ಭತ್ಯೆ!

ಸಾರಾಂಶ

* ಅಗಲಿದ ಪುನೀತ್ ರಾಜ್ ಕುಮಾರ್ ಗೆ ಅಂತಿಮ ನಮನ * ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಸಚಿವರ ಶ್ಲಾಘನೆ * ದೊಡ್ಡ ಸವಾಲನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ * ಮಾಧ್ಯಮಗಳಿಗೂ ನಮಸ್ಕಾರ ಹೇಳಿದ ಗೃಹ ಸಚಿವ

ಬೆಂಗಳೂರು (ನ. 02)  ಪುನೀತ್ ರಾಜಕುಮಾರ್ ಅವರ ನಿಧನದ ವೇಳೆ ಪೋಲಿಸರು ಎರಡು ರಾತ್ರಿ, ಹಗಲು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಡಿಜಿ ಆಫೀಸ್ ನಲ್ಲಿ ಎಲ್ಲರನ್ನೂ ಕರೆದು ಅಭಿನಂದನೆ ತಿಳಿಸಿದ್ದೇನೆ. ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡಿರುವ ಕಾನ್ಸ್ಟೇಬಲ್ ಸೇರಿ ಎಲ್ಲರಿಗೂ ಭತ್ಯೆ ಕೊಡ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹತ್ತು ದಿನಗಳ ಒಳಗಾಗಿ ಅವರಿಗೆ ಸಿಗುವ ಹಾಗೆ ಮಾಡ್ತೀನಿ. ಕಾನ್ಸ್ಟೇಬಲ್ ಒಬ್ಬರಿಗೆ ಕಾಲು ಮುರಿದಿತ್ತು, ಅವರ ಜೊತೆ ನಾನೇ ಮಾತನಾಡಿದ್ದೇನೆ. ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಪೋಲಿಸರ ಶ್ರಮ ಬಹಳ ದೊಡ್ಡದಿದೆ, ಎಲ್ಲರಿಗೂ ಅಭಿನಂದನೆ ಸಲ್ಲಿಸ್ತೇನೆ. ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಸೇರಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದರು. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್ (Karnataka Police) ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ, (Basavaraj Bommai) ಗೃಹ ಸಚಿವ ಆರಗ ಜ್ಞಾನೇಂದ್ರ, (Araga Jnanendra) ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು  ಈ ಹಿಂದೆಯೂ ಅಭಿನಂದಿಸಿದ್ದರು.

ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ  ಜನರಿಂದಲೂ ಮೆಚ್ಚುಗೆ ವ್ಯಕ್ಯವಾಗಿತ್ತು.. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಬೆಂಗಳೂರು ನಗರದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೆಎಸ್ಆರ್ ಪಿ(KSRP), ಸಿಎಆರ್ ಸಿಬ್ಬಂದಿ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿತ್ತು. 

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದರು. ನಿಧನದ ಸುದ್ದಿ ತಿಳಿದ ನಂತರ ಅಭಿಮಾನಿಗಳು ಸಮರೋಪಾದಿಯಲ್ಲಿ ದರ್ಶನಕ್ಕೆ ಆಗಮಿಸಿದ್ದರು.  ದಕ್ಷಿಣ ಭಾರತದ ಚಿತ್ರೋದ್ಯಮದ ಎಲ್ಲ ಮಂದಿ ಕಂಬನಿ  ಮಿಡಿದಿದ್ದರು.

ಸಾವಿನಲ್ಲೂ ಸಾರ್ಥಕತೆ; ನಟ ಪುನೀತ್ ರಾಜ್‌ಕುಮಾರ್ ಎರಡೂ ಕಣ್ಣುಗಳನ್ನೂ ನಾಲ್ವರಿಗೆ ಅಳವಡಿಸಲಾಗಿದೆ ಎಂದು ನಾರಾಯಣ ನೇತ್ರಾಲಯ ವೈದ್ಯ ಡಾ.ಭುಜಂಗ ಶೆಟ್ಟಿಯವರು ವಿವರಿಸಿದ್ದಾರೆ. ಇದೇ ಮೊದಲ ಬಾರಿ ಹೊಸ ಟೆಕ್ನಾಲಜಿ ಬಳಸಿ ಒಂದು ಕಣ್ಣನ್ನು ಎರಡು ಭಾಗ ಮಾಡಿ ಹಾಕಲಾಗಿದೆ. ಇಡೀ ರಾಜ್ ಕುಮಾರ್ ಕುಟುಂಬಕ್ಕೆ ವೈದ್ಯರು ಧನ್ಯವಾದಗಳನ್ನು ತಿಳಿಸಿದ್ದರು.

ಪುನೀತ್ ಇಲ್ಲದಿದ್ದರೆ ನಾವೇ ಇರುತ್ತಿರಲಿಲ್ಲ ಎಂದ ಕೆಲಸಗಾರರು

ಕಿಡಿಗೇಡಿ ಬಂಧನ;  ಪುನೀತ್ ರಾಜ್ ಕುಮಾರ್ ಸಾವಿನ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗಬಾರದು  ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳು ನೋವಿನ ಸಂದರ್ಭದಲ್ಲಿಯೂ ನೀಚ ಮನಸ್ಥಿತಿ  ಪ್ರದರ್ಶನ ಮಾಡಿದ್ದರು.

ಸೋಶಿಯಲ್ ಮೀಡಿಯಾ ಕೈಗೆ ಸಿಕ್ಕಿದೆ ಎಂದು ಮನಸಿಗೆ ಬಂದಂತೆ ಬರೆದು ಪೋಸ್ಟ್ ಮಾಡಿದರೆ ಶಿಕ್ಷೆ  ಅನುಭವಿಸಲೇಬೇಕಾಗುತ್ತದೆ.  ವ್ಯಕ್ತಿ ಗೌರವಕ್ಕೆ ಧಕ್ಕೆ ತರುವಂತಹ ನೀಚರ ವಿರುದ್ಧ ಕ್ರಮ ಅನಿವಾರ್ಯ. 

ಮದ್ಯದ ಬಾಟಲಿಯನ್ನು ಖರೀದಿ ಮಾಡಿದ್ದ ಕಿರಾತಕ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ.. ಹಾಗೆ ಹೀಗೆ ಎಂದು ಬರೆದಿದ್ದ.

ಇದನ್ನು ಕಂಡ ಅಭಿಮಾನಿಗಳು ಕೆಂಡವಾಗಿದ್ದರು. ಸುದೀಪ್ ಪುತ್ರಿ ಸಹ ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ಕೂಡಲೇ ಬಂಧಿಸಿ ಎಂದು ಪೊಲೀಸರಿಗೆ ಒತ್ತಾಯ ಬಂದಿತ್ತು. ಜನರ ಒತ್ತಾಯಕ್ಕೆ ಮಣಿದ ಬೆಂಗಳೂರು ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ. ಸ್ವತಃ ಕಮಿಷನರ್ ಕಮಲ್ ಪಂತ್ ಬಂಧನದ ವಿಚಾರ ತಿಳಸಿದ್ದರು.  ಬೆಂಗಳೂರು ಪೊಲೀಸರಿಗೂ ಧನ್ಯವಾದ ಹೇಳಲಾಗಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್