ಕೊರೋನಾ ರೂಪಾಂತರ ತಳಿ ಆತಂಕ ಇಲ್ಲ : ಸಚಿವ ಡಾ.ಕೆ.ಸುಧಾಕರ್‌

By Kannadaprabha NewsFirst Published Nov 2, 2021, 3:03 PM IST
Highlights
  • ರಷ್ಯಾ ಸೇರಿದಂತೆ ಬ್ರಿಟನ್‌ ರಾಷ್ಟ್ರಗಳಲ್ಲಿ ಸಾಕಷ್ಟು ತಲ್ಲಣ ಮೂಡಿಸಿರುವ ಕೊರೋನಾ ರೂಪಾಂತರಿ ಎವೈ 4.2 ತಳಿ
  • ರೂಪಾಂತರಿ ಎವೈ 4.2 ತಳಿಯ ಆತಂಕ ಸದ್ಯಕ್ಕೆ ರಾಜ್ಯಕ್ಕಿಲ್ಲ 

 ಚಿಕ್ಕಬಳ್ಳಾಪುರ (ನ.02):  ರಷ್ಯಾ (Russia) ಸೇರಿದಂತೆ ಬ್ರಿಟನ್‌ (Britain) ರಾಷ್ಟ್ರಗಳಲ್ಲಿ ಸಾಕಷ್ಟು ತಲ್ಲಣ ಮೂಡಿಸಿರುವ ಕೊರೋನಾ (Corona) ರೂಪಾಂತರಿ ಎವೈ 4.2 ತಳಿಯ ಆತಂಕ ಸದ್ಯಕ್ಕೆ ರಾಜ್ಯಕ್ಕಿಲ್ಲ (Karnataka) ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ (Health Minister Dr K Sudhakar) ತಿಳಿಸಿದರು.

 ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್ ಕೊರೋನಾ ರೂಪಾಂತರಿ (Covid Varriant) ಎವೈ 4.2 ತಳಿಯ ಆತಂಕ ಸದ್ಯಕ್ಕೆ ರಾಜ್ಯಕ್ಕಿಲ್ಲ, ಜನರು ಈ ಬಗ್ಗೆ ಭಯಪಡುವುದು ಬೇಡ ಎಂದರು. 

ದೀಪಾವಳಿ ಬಳಿಕ ಸೋಂಕು ಸ್ಫೋಟ : ತಜ್ಞರ ಎಚ್ಚರಿಕೆ

ಅವರನ್ನ ಜನಪ್ರತಿನಿಧಿ ಅಂತ ಕರೆಯಕ್ಕೆ ಆಗುತ್ತಾ?

ಕೋಲಾರ (Kolar) ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಗೂ ಡಿಸಿಸಿ ಬ್ಯಾಂಕ್‌ (DCC Bank) ವಿಭಜನೆ ಸಂಬಂದ ಪ್ರತಿಕ್ರಿಯಿಸಿ ಕೋಚಿಮುಲ್‌ (KOCHIMUL) ವಿಭಜನೆ ಆದಷ್ಟು ಬೇಗ ನಡೆಯಲಿದೆ. ಡಿಸಿಸಿ ಬ್ಯಾಂಕ್‌  ಕೆಲವು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಅದನ್ನು ಕೂಡ ಈ ಸರ್ಕಾರದಲ್ಲಿ ಪ್ರತ್ಯೇಕಗೊಳಿಸುವುದು ಖಚಿತ ಎಂದು ಸಚಿವ ಸುಧಾಕರ್‌ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಡಿಸಿಸಿ ಹಾಗೂ ಕೋಚಿಮುಲ್‌ ವಿಭಜನೆಗೆ ಜಿಲ್ಲೆಯ ಕೆಲ ಜನ ಪ್ರತಿನಿನಿಧಿಗಳು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಜಿಲ್ಲಾ ಪ್ರತಿನಿದಿಗಳು ಅಂತ ಹೇಳಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕೊರೋನಾ: ಕಳೆದ 17 ತಿಂಗಳಲ್ಲಿ ದಾಖಲಾದ ಕನಿಷ್ಠ ಪ್ರಕರಣ

ಜಿಲ್ಲೆಗೆ ಬರಬೇಕಾದದ್ದು ನ್ಯಾಯ ಬದ್ದವಾಗಿ, ಕಾನೂನು ಬದ್ದವಾಗಿ ಜನರ ಪರವಾಗಿ ತೆಗೆದುಕೊಳ್ಳುವ ನಿರ್ಣಯಗಳನ್ನು ಜಿಲ್ಲೆಯವರಾಗಿ ಜಿಲ್ಲೆಗೆ ಆನ್ಯಾಯ ಮಾಡುವರನ್ನು ಜಿಲ್ಲೆಯ ಜನಪ್ರತಿನಿಧಿ ಅಂತ ಕರೆಯಕ್ಕೆ ಆಗುವುದಿಲ್ಲ. ಅವರನ್ನು ಆ ಕ್ಷೇತ್ರದ ಹಾಗೂ ಜಿಲ್ಲೆಯ ಜನರು ಕ್ಷಮಿಸಲಿಕ್ಕೆ ಆಗುವುದಿಲ್ಲ. ಹಾಗೆ ಮಾಡುವುದು ಸರಿ ಇದೆಯೆ ಎಂಬುದು ಅವರ ಆತ್ಮಸಾಕ್ಷಿಗೆ ಬಿಟ್ಟಿದ್ದು ಎಂದರು.

ಎಚ್‌ಎನ್‌ ವ್ಯಾಲಿ (HN vally) ನೀರು (Water) ಚಿತ್ರಾವತಿ ನದಿಗೆ (chitravathi River) ಸೇರುತ್ತಿದೆಯೆಂಬುದರ ಬಗ್ಗೆ ಪ್ರತಿಕ್ರಿಸಿ, ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೂ (lake) ಒಂದಕ್ಕೊಂದು ಸಂಪರ್ಕ ಇದೆ. ರಾಮಸಮುದ್ರ (Ramasamudra) ಕೆರೆ ತುಂಬಿ ಕೋಡಿ ಹರಿದಿದೆ. ಆ ನೀರು ಶಿಡ್ಲಘಟ್ಟಗೆ ಹೋಗುತ್ತದೆ. ಆದರೆ ಚಿತ್ರಾವತಿಗೆ ಹೋಗಿದೆ ಎನ್ನುವುದನ್ನು ನಾನು ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುತ್ತೇನೆ.

18ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ

18ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ರವರು ಚಿಕ್ಕಬಳ್ಳಾಫುರ ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ. ಪಿಎಲ್‌ಡಿ ಬ್ಯಾಂಕ್‌ (PLD Bank) ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲಿ ಅಂದು ಅನೇಕ ಅಭಿವೃದ್ದಿ ಕಾಮಗಾರಿಗಳ (Development Projects) ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಬಳಿಕ ಇದು ಮೊದಲ ಭೇಟಿ ಎಂದು ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್‌ ಜಿಲ್ಲೆಯಲ್ಲಿ ಸಿಎಂ ಪ್ರವಾಸ (Tour) ಕೈಗೊಂಡಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನಿರ್ಲಕ್ಷ್ಯ ಬೇಡ

 

ವಿಶ್ವದ ವಿವಿಧ ದೇಶಗಳಲ್ಲಿ ರೂಪಾಂತರಿ ವೈರಾಣುಗಳ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ(Karnataka) ಜಿನೋಮಿಕ್‌ ಸೀಕ್ವೆನ್ಸ್‌ ಪರೀಕ್ಷೆ(Genomic Sequence Test)ಪ್ರಮಾಣ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ (TAC) ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಎವೈ 4.2(AY 4.2) ವೈರಾಣು ಪತ್ತೆಯಾಗಿದೆ. ಆದರೆ, ಸದ್ಯಕ್ಕೆ ಈ ವೈರಾಣು(Virus) ನಮಲ್ಲಿ ವ್ಯಾಪಕವಾಗಿ ಹರಡಿಲ್ಲ. ಆ ರೀತಿಯ ಲಕ್ಷಣಗಳೂ ಸಹ ಗೋಚರಿಸಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಜಿನೋಮಿಕ್‌ ಸೀಕ್ವೆನ್ಸ್‌ ಪರೀಕ್ಷೆ ಹೆಚ್ಚಳಕ್ಕೆ ಟಿಎಸಿ ಸಲಹೆ ನೀಡಿದರೆ ಮಾಡಲಾಗುವುದು. ಪ್ರಸ್ತುತ ವರದಿಯಾಗುತ್ತಿರುವ ಒಟ್ಟು ಪಾಸಿಟಿವ್‌ ಪ್ರಕರಣಗಳ ಶೇ.10 ರಷ್ಟು ಮಾದರಿಗಳನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಈ ಪ್ರಮಾಣ ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ’ ಎಂದು ಹೇಳಿದರು.

‘ಈಗಾಗಲೇ ಅಂತರಾಷ್ಟ್ರೀಯ ಪ್ರಯಾಣಿಕರಿಗೆ(International Travelers) ಹೊಸ ಮಾರ್ಗಸೂಚಿ(Guidelines) ಪ್ರಕಟಿಸಲಾಗಿದೆ. ವಿದೇಶಿ ಪ್ರಯಾಣಿಕರ(Foreign Travelers) ಮೇಲೆ ನಿಗಾ ವಹಿಸಲಿದ್ದು, ಹೊಸ ರೂಪಾಂತರಿ ಪತ್ತೆಯಾದರೆ ತಕ್ಷಣ ನಿಯಂತ್ರಣ ಕ್ರಮ ಪಾಲಿಸಲಾಗುವುದು. ರೂಪಾಂತರಿ ವಿಚಾರದಲ್ಲಿ ಇಲಾಖೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

click me!