ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಪೋಸ್ಟ್‌ ಹಾಕಿದ ಕರ್ನಾಟಕದ ವಿದ್ಯಾರ್ಥಿಗೆ 5 ವರ್ಷ ಜೈಲು!

By Santosh NaikFirst Published Nov 1, 2022, 10:51 AM IST
Highlights

ಬೆಂಗಳೂರಿನ ಕಾಚರಕನಹಳ್ಳಿ ಇಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್ ಫೆಬ್ರವರಿ 2019 ರಿಂದ ಜೈಲಿನಲ್ಲಿದ್ದಾನೆ ಎಂದು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ ಸೋಮವಾರ ಹೇಳಿದೆ. ಆತ ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 

ಬೆಂಗಳೂರು (ನ.1): ಬೆಂಗಳೂರಿನ ವಿಶೇಷ ಕೋರ್ಟ್‌ ಸೋಮವಾರ ಇಂಜಿನಿಯರಿಗ್‌ ವಿದ್ಯಾರ್ಥಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. 2019ರಲ್ಲಿ ಸಂಭವಿಸಿದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಸಂಭ್ರಮಿಸಿ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ದಾಖಲಿಸಿದ್ದ ಈತನನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಕಾಚರಕನಹಳ್ಳಿಯ ನಿವಾಸಿಯಾಗಿದ್ದ ಫೈಜ್‌ ರಶೀದ್‌, ಇಂಜಿನಿಯರಿಂಗ್‌ ವಿದ್ಯಾರ್ಥಿ. ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಪೋಸ್ಟ್‌ ಹಾಕಿದ್ದ ಕಾರಣಕ್ಕೆ 2019ರ ಫೆಬ್ರವರಿಯಿಂದಲೂ ಆತ ಜೈಲಿನಲ್ಲಿದ್ದಾರೆ. ಆತ ಇಂಜಿನಿಯರಿಂಗ್‌ನ ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಯಾಗಿದ್ದ ಎಂದು ಬೆಂಗಳೂರು ಕೇಂದ್ರ ಅಪರಾಧಿ ವಿಭಾಗ (ಸಿಸಿಬಿ) ಸೋಮವಾರ ಹೇಳಿದೆ. ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಬರೆದಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಫೈಜ್ ರಶೀದ್ ಈ ದಾಳಿಯನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಪೊಲೀಸರುವ ಕಾರ್ಯಪ್ರವೃತ್ತರಾಗಿ ಈತನನ್ನು ಬಂಧಿಸಿದ್ದರು.

ರಶೀದ್ ಅವರ ಫೋನ್ ಅನ್ನು ವಶಪಡಿಸಿಕೊಂಡ ನಂತರ, ಪೊಲೀಸರು ಅವರ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದರು. ತರುವಾಯ, ಅವರ ವಿರುದ್ಧ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು), 124 ಎ (ದೇಶದ್ರೋಹ), 201 (ಸಾಕ್ಷ್ಯ ನಾಶ) ಮತ್ತು ಐಪಿಸಿಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. 2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ಕಾರಿನೊಂದಿಗೆ ಬಸ್‌ಗೆ ಡಿಕ್ಕಿ ಹಡೆದಿದ್ದ. ಬೆಂಗಾವಲು ಪಡೆಯಲ್ಲಿ ಒಟ್ಟು 78 ಬಸ್‌ಗಳಿದ್ದವು. ಈ ಮೂಲಕ 2,500 ಸಿಆರ್‌ಪಿಎಫ್ ಸಿಬ್ಬಂದಿ ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದರು.

ಪುಲ್ವಾಮಾ ಎನ್‌ಕೌಂಟರ್‌: ಇಬ್ಬರು ಜೆಇಎಂ ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಔರಂಗಜೇಬ್‌ ಅಲಂಗೀರ್‌ ಮಾಸ್ಟರ್‌ ಮೈಂಡ್‌: ಭಯೋತ್ಪಾದಕ ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಗೃಹ ಸಚಿವಾಲಯವು 2019ರ ಏಪ್ರಿಲ್ ನಲ್ಲಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ 'ಭಯೋತ್ಪಾದಕ' ಎಂದು ಘೋಷಿಸಿತ್ತು. 2022ರ ಏಪ್ರಿಲ್ 11 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್ ಪುಲ್ವಾಮಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಬೆಂಗಾವಲು ಪಡೆಯ ಮೇಲಿನ ದಾಳಿಯ ಪ್ರಮುಖ ಸಂಚುಕೋರ ಎಂದು ಘೋಷಣೆ ಮಾಡಲಾಗಿತ್ತು.

ಬಾಲಾಕೋಟ್‌ ಏರ್‌ಸ್ಟ್ರೈಕ್ ನಿಜ, ಒಪ್ಪಿಕೊಂಡ ಪಾಕಿಸ್ತಾನ: ರಾಹುಲ್‌, ಕೇಜ್ರಿಗೆ ಮುಖಭಂಗ!

ಬಾಲಾಕೋಟ್‌ ದಾಳಿಯ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು: ಪುಲ್ವಾಮಾ ದಾಳಿಯ ಕೆಲವು ದಿನಗಳ ನಂತರ, ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ವೈಮಾನಿಕ ದಾಳಿ ನಡೆಸಿತು. ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು ಅವರ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿತ್ತು.

ಕಾಶ್ಮೀರದಲ್ಲಿ ಉಗ್ರ ದಾಳಿಗೆ ಯುರೋಪ್‌ನಲ್ಲಿ ಸಂಚು: ಬಂಧಿತ ಉಗ್ರರ ಮಾಹಿತಿ
ಜಮ್ಮು:
ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಸಲು ಯುರೋಪ್‌ನಲ್ಲಿರುವ ಕೆಲ ವ್ಯಕ್ತಿಗಳು ಕುಮ್ಮಕ್ಕು ನೀಡಿದ್ದರು ಎಂದು ಭಾನುವಾರ ಬಂಧಿತರಾದ ಇಬ್ಬರು ಉಗ್ರರು ಬಾಯಿಬಿಟ್ಟಿದ್ದಾರೆ. ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಕಳುಹಿಸಿದ್ದ ಸ್ಫೋಟಕ ಪದಾರ್ಥಗಳನ್ನು ಸ್ವೀಕರಿಸಿ ಕೊಂಡೊಯ್ಯುವ ವೇಳೆ ಚಂದರ್‌ಬೋಸ್‌ ಮತ್ತು ಶಂಶೇರ್‌ ಸಿಂಗ್‌ ಎಂಬಿಬ್ಬರು ಭಾನುವಾರ ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಹಾಲಿ ಯುರೋಪ್‌ನಲ್ಲಿ ನೆಲೆಸಿರುವ ಬಲ್ವಿಂದರ್‌ ಎಂಬಾತನ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ. ಬಲ್ವಿಂದರ್‌ ಸೂಚನೆ ಮೇರೆಗೆ ತಮಗೆ ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಸ್ಫೋಟಕ ಪದಾರ್ಥ, ಪಿಸ್ತೂಲ್‌ ಮೊದಲಾದವುಗಳನ್ನು ರವಾನಿಸಲಾಗಿತ್ತು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ.

click me!