ಪಿಎ​ಸ್‌ಐ ಅಕ್ರ​ಮ, ಡಿವೈ​ಎಸ್ಪಿ ಸೇರಿ ಐವರ ಅಮಾ​ನ​ತು

Published : May 05, 2022, 05:15 AM IST
ಪಿಎ​ಸ್‌ಐ ಅಕ್ರ​ಮ, ಡಿವೈ​ಎಸ್ಪಿ ಸೇರಿ ಐವರ ಅಮಾ​ನ​ತು

ಸಾರಾಂಶ

ಸಿಪಿಐ, ಮೂವರು ಪೇದೆಗಳು ಸಸ್ಪೆಂಡ್‌ ಅಕ್ರಮಕ್ಕೆ ನೆರವಾದ, ಅಕ್ರಮವಾಗಿ ಪಾಸಾದ ಆರೋಪ ಕಲಬುರಗಿಯಲ್ಲಿ ಎಸ್‌ಐ ಬಂಧನ  

ಕಲಬುರಗಿ (ಮೇ.5) ಕಲಬು​ರಗಿಯಲ್ಲಿ ನಡೆದ ಪಿಎ​ಸ್‌ಐ ಪರೀಕ್ಷೆ ಅಕ್ರ​ಮಕ್ಕೆ (PSI REcruitment Scam) ಸಂಬಂಧಿಸಿ ಕಲಬುರಗಿಯ ಇಬ್ಬರು ಪೊಲೀಸ್‌ ಅಧಿಕಾರಿಗಳ (Police officers) ತಲೆದಂಡವಾಗಿದೆ. ಇಲಾಖೆಯ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್‌. ಆರ್‌. ಹೊಸ್ಮನಿ ( DySP Hosamani ) ಸೇರಿ ಐವ​ರನ್ನು ಅಮಾ​ನತು (Suspend) ಮಾಡಿ ಬುಧ​ವಾರ ಆದೇಶ ಹೊರ​ಡಿ​ಸ​ಲಾ​ಗಿ​ದೆ.

ಕಲಬುರಗಿ ನಗರ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯ ಮಹಿಳಾ ಪೊಲೀಸ್‌ ಠಾಣೆ ಸಿಪಿಐ ಆನಂದ ಸಾಗರ್‌ (Anand Sagar), ಗನ್‌​ಮ್ಯಾನ್‌ ಅಯ್ಯಣ್ಣ ದೇಸಾಯಿ (Ayyanna Desai), ಕಾನ್ಸ್‌​ಟೇ​ಬಲ್‌ ರುದ್ರ​ಗೌಡ (Rudra Gowda) ಮತ್ತು ಜೈಲರ್‌ ಚೇತನ್‌ ನಂದ​ಗಾವ್‌ (Chetan Nandagoan) ಅಮಾ​ನತು ಗೊಂಡ ಇತರೆ ಪೊಲೀಸ್‌ ಸಿಬ್ಬಂದಿ.

ಅಕ್ರ​ಮಕ್ಕೆ ಸಾಥ್‌: ಕಳೆದ ಅ.3ರಂದು ನಡೆದಿದ್ದ ಪಿಎ​ಸ್‌ಐ ನೇಮಕಾತಿ ಪರೀಕ್ಷೆವೇಳೆ ಜ್ಞಾನಜ್ಯೋತಿ ಶಾಲೆ ಕೇಂದ್ರದಲ್ಲಿ ನಿಯೋ​ಜ​ನೆ​ಗೊಂಡಿದ್ದ ಡಿವೈ​ಎಸ್ಪಿ ಆರ್‌.​ಆರ್‌.ಹೊಸ್ಮನಿ, ಆನಂದ ಸಾಗರ್‌ ಅವ​ರನ್ನು ಕರ್ತವ್ಯ ಲೋಪದ ಆರೋ​ಪದ ಮೇಲೆ ಅಮಾನತು ಮಾಡಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಹೊಸ್ಮನಿ ಹಾಗೂ ಇವ​ರಿ​ಗೆ ಸಹಾಯಕರಾಗಿದ್ದ ಸಿಪಿಐ ಆನಂದ ಸಾಗರ್‌ ಪರೀಕ್ಷೆ ಮುಗಿದ ಬಳಿಕ ಅರ್ಧ ಗಂಟೆಯಲ್ಲೇ ಕೊಠ​ಡಿಯ ಸಿಸಿಟೀವಿಗಳನ್ನು ಮರೆಮಾಡಿದ್ದರು ಎನ್ನ​ಲಾ​ಗಿ​ದೆ. ಈ ಮೂಲಕ ಕೋಣೆ ಮೇಲ್ವಿಚಾರಕರಿಗೆ ಅಭ್ಯರ್ಥಿಗಳ ಓಎಂಆರ್‌ಶೀಟ್‌ ತಿದ್ದಲು ಸಹಕರಿಸಿದ್ದರು ಎಂಬ ಶಂಕೆ ಇವರ ಮೇಲಿ​ದೆ. ಇನ್ನು ಉಳಿದ ಮೂವರು ಕಾನ್ಸ್‌​ಟೇ​ಬ​ಲ್‌​ಗಳನ್ನು ಅಕ್ರಮ ಮಾರ್ಗ​ದಲ್ಲಿ ಪರೀಕ್ಷೆ ಬರೆದು ಪಾಸಾದ ಆರೋ​ಪದ ಮೇರೆಗೆ ಅಮಾ​ನ​ತು​ಮಾ​ಡ​ಲಾ​ಗಿ​ದೆ.


ಪಿಎಸ್‌ಐ ಅಕ್ರಮ: ಕಲಬುರಗಿಯಲ್ಲಿ ಎಸ್‌ಐ ಬಂಧನ

ಕಲಬುರಗಿ (ಮೇ.5): ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಬೆಂಗಳೂರು ಮೂಲದ ಕರ್ನಾಟ​ಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್‌ ಇನ್ಸ್‌​ಪೆ​ಕ್ಟ​ರ್‌​ವೊ​ಬ್ಬ​ರನ್ನು ಮಂಗಳವಾರ ರಾತ್ರಿ ಸಿಐಡಿ ಬಂಧಿಸಿದೆ.

ಯಶ್ವಂತರಾಯಗೌಡ ಬಂಧಿತ ಆರೋ​ಪಿ. ಈತನಿಗೂ ಕಲಬುರಗಿಯಲ್ಲಿ ನಡೆದ ಅಕ್ರ​ಮಕ್ಕೂ ಸಂಬಂಧವಿಲ್ಲವಾದರೂ ಬೆಂಗಳೂರಲ್ಲಿ ನಡೆದ ಪರೀಕ್ಷಾ ಅಕ್ರ​ಮಕ್ಕೆ ಸಂಬಂಧಿಸಿ ಸಿಐಡಿಗೆ ಬೇಕಾಗಿದ್ದ. ಹೀಗಾಗಿ ಈತ​ನನ್ನು ಬೆಂಗಳೂರಿಗೆ ಕರೆ​ದೊ​ಯ್ಯ​ಲಾ​ಗು​ತ್ತದೆ ಎಂದು ಸಿಐಡಿ ಮೂಲಗಳು ಹೇಳಿವೆ.

PSI SCAM: ಪ್ಲಾಟೂ ಹೋಯ್ತು, ಪೋಸ್ಟೂ ಹೋಯ್ತು, ಅಪ್ಪ ಮಗ ಜೈಲು ಪಾಲಾಗಬೇಕಾಯ್ತು

2021ರಲ್ಲಿ ಕೈಗಾರಿಕಾ ಭದ್ರತಾ ಪಡೆಯ ಎಸ್‌ಐ ಆಗಿ ಆಯ್ಕೆಯಾಗಿದ್ದ ಯಶ್ವಂತರಾಯ, 545 ಪಿಎಸ್‌ಐ ಪರೀಕ್ಷೆಯನ್ನೂ ಬರೆದು ಪಾಸ್‌ ಆಗಿದ್ದ. ಏ.22 ರಂದು ಈತ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿ ತನ್ನೆಲ್ಲ ದಾಖಲೆಗ​ಳನ್ನು ಪರಿಶೀಲನೆಗೊಳಪಡಿಸಿದ್ದ. ವಾರದ ಹಿಂದಷ್ಟೇ ಕಲಬುರಗಿ ನಾಗನಹಳ್ಳಿ ಪೊಲೀಸ್‌ ತರಬೇತಿ ಶಾಲೆಗೆ ತರಬೇತಿಗೆಂದು ಹಾಜರಾಗಿದ್ದ. ಪ್ರಕ​ರ​ಣಕ್ಕೆ ಸಂಬಂಧಿಸಿ ವಿಚಾ​ರಣೆ ನಡೆ​ಸುವ ಅಗ​ತ್ಯ​ವಿ​ರು​ವು​ದ​ರಿಂದ ಸದ್ಯ ಕಲ​ಬು​ರ​ಗಿಯಲ್ಲಿ ವಶಕ್ಕೆ ಪಡೆದು, ಬೆಂಗಳೂರು ಸಿಐಡಿ ಅಧಿ​ಕಾ​ರಿ​ಗ​ಳಿಗೆ ಒಪ್ಪಿ​ಸ​ಲಾ​ಗು​ತ್ತಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ನಿನ್ನಿಂದಾಗಿ ಅಪ್ಪ ಜೈಲಿನಲ್ಲಿದ್ದಾನೆ, ಇದಕ್ಕೆಲ್ಲಾ ನೀನೆ ಕಾರಣ: ದಿವ್ಯಾಳ ನಿಂದಿಸಿದ ಮಕ್ಕಳು!

ದುಡ್ಡು​ಪ​ಡೆ​ದ​ವರ ಹೆಸರು ಹೇಳೋ ಧೈರ್ಯ ಇದೆ​ಯಾ?
ಯಾದಗಿರಿ:
ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ವಿಧಾ​ನ​ಸೌ​ಧ​ದ​ಲ್ಲಿ​ರು​ವ​ವ​ರಿಗೂ ದುಡ್ಡು ಹೋಗಿದೆ ಎಂಬ ಶಾಸಕ ಪ್ರಿಯಾಂಕ್‌ ಖರ್ಗೆ ( Priyankh Kharge ) ಆರೋ​ಪಕ್ಕೆ ಮಾಜಿ ಮುಖ್ಯ​ಮಂತ್ರಿ ಜಗ​ದೀಶ್‌ ಶೆಟ್ಟರ್‌ (Jagadeesh Shettar) ತೀವ್ರ ಕಿಡಿ​ಕಾ​ರಿ​ದ್ದಾರೆ. ಪ್ರಿಯಾಂಕ್‌ ಖರ್ಗೆಗೆ ದುಡ್ಡು ಪಡೆ​ದ​ವರ ಹೆಸರು ಹೇಳುವ ಧೈರ್ಯ ಇದೆಯಾ? ಎಂದು ಸವಾಲು ಹಾಕಿ​ದ್ದಾ​ರೆ. ಪ್ರಿಯಾಂಕ್‌ ಖರ್ಗೆ ಅವರದ್ದು ಬೆಳಗಿನಿಂದ ಸಾಯಂಕಾಲದ ತನಕ ಇದೇ ಆಯ್ತು. ಸಿಐಡಿಗೆ ಒಂದು ಸಣ್ಣ ಸಾಕ್ಷ್ಯ​ವ​ನ್ನಾ​ದರೂ ಕೊಟ್ಟಿ​ದ್ದಾ​ರಾ? ಮೊದಲು ಸರಿಯಾದ ಮಾಹಿತಿ ಕೊಡುವ ಕೆಲಸ ಮಾಡಲಿ, ಸುಖಾ ಸುಮ್ಮನೆ ಆರೋಪ ಮಾಡುವುದಲ್ಲ ಎಂದು ಹೇಳಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಬಿಜೆಪಿ ಸಮಾವೇಶಕ್ಕೆ ₹50 ಲಕ್ಷ ಬಾಂಡ್ ಕೇಳಿದ ಬಳ್ಳಾರಿ ಜಿಲ್ಲಾಡಳಿತ!
Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!