
ಬೆಂಗಳೂರು (ಮೇ. 5): ನಗರದಲ್ಲಿ ಸತತ ನಾಲ್ಕನೇ ದಿನ ಸಂಜೆಯ ಹೊತ್ತು ಧಾರಾಕಾರವಾಗಿ ಸುರಿದ ಮಳೆಯಿಂದ (Rains) ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಕೆಲವು ವಸತಿ ಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದರು.
ಕಳೆದ ಭಾನುವಾರದಿಂದ ನಿರಂತರವಾಗಿ ಸಂಜೆ ನಗರದಲ್ಲಿ ಮಳೆಯಾಗುತ್ತಿರುವುದರಿಂದ ವಿಪರೀತ ಧಗೆಯಿಂದ ಬಸವಳಿದಿದ್ದ ಜನರು ಈಗ ಕೊಂಚ ತಂಪು ವಾತಾವರಣದಲ್ಲಿದ್ದಾರೆ. ಆದರೆ ವಿವಿಧ ಭಾಗದಲ್ಲಿ ರಸ್ತೆ,(Road) ಅಂಡರ್ ಪಾಸ್‌ಗಳಲ್ಲಿ (Under Pass) ನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರು ಪರದಾಡುವಂತೆ ಆಗಿದೆ.
ಬುಧವಾರ ಬೊಮ್ಮನಹಳ್ಳಿ (Bommanahalli) ಮತ್ತು ಬೆಂಗಳೂರು ದಕ್ಷಿಣದ (Bengalutu South) ಕೆಲವೆಡೆ ಭರ್ಜರಿ ಮಳೆಯಾಗಿದೆ. ಉಳಿದ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಗುರುವಾರವೂ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಬೆಳಗ್ಗೆಯ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಬಸವೇಶ್ವರ ನಗರದ ಕಿರ್ಲೋಸ್ಕರ್ ನಗರ, ಹನುಮಂತ ನಗರದ ಭವಾನಿ ನಗರ, ಜಯನಗರ 8ನೇ ಬ್ಲಾಕ್‌ನಲ್ಲಿ ಕೊಂಬೆ ಮುರಿದಿರುವ ದೂರು ಬಂದಿದೆ. ಹಾಗೆಯೇ ರೂಪೇನ ಅಗ್ರಹಾರದಲ್ಲಿ ನೀರು ನಿಂತು ಜನರು ಪರದಾಡಿರುವುದು ವರದಿಯಾಗಿದೆ.
ಸಂಜೆಯ ಹೊತ್ತು ಮಳೆ ಸುರಿಯುತ್ತಿರುವುದರಿಂದ ಕಚೇರಿ ಬಿಟ್ಟು ತೆರಳುತ್ತಿರುವ ಜನರು ಪರದಾಡುವಂತೆ ಆಗಿದೆ. ಮಳೆಗೆ ಕಟ್ಟಡಗಳು, ಬಸ್‌ಸ್ಟ್ಯಾಂಡ್, ಮೇಲ್ಸೆತುವೆಗಳ ಕೆಳಗೆ ನಿಂತು ಆಶ್ರಯ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೀದಿ ಬದಿ ವ್ಯಾಪಾರಿಗಳು ಮಳೆಯಿಂದಾಗಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಅರಕೆರೆ, ದೊರೆಸಾನಿಪಾಳ್ಯದಲ್ಲಿ ತಲಾ 5 ಸೆಂ.ಮೀ, ಬೇಗೂರು 4.4 ಸೆಂ.ಮೀ, ಗೊಟ್ಟಿಗೆರೆ 4.3 ಸೆಂ.ಮೀ, ಸಿಂಗಸಂದ್ರ 4.1 ಸೆಂ.ಮೀ, ಬಿಳೇಕಹಳ್ಳಿ 4.1 ಸೆಂ.ಮೀ, ಸಾರಕ್ಕಿ 3.8 ಸೆಂ.ಮೀ, ಅಂಜಾನಪುರ 3.2 ಸೆಂ.ಮೀ, ವಿದ್ಯಾಪೀಠ 3.1 ಸೆಂ.ಮೀ ಮಳೆ ಸುರಿದಿದೆ.
ಉಳಿದಂತೆ ಶೇಷಾದ್ರಿಪುರ, ಯಲಹಂಕ, ಶಿವಾನಂದ ವೃತ್ತ, ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಶಿವಾಜಿನಗರ, ವಸಂತನಗರ, ಮಾಧವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸದಾಶಿವನಗರ, ಕೋರಮಂಗಲ, ಲಕ್ಕಸಂದ್ರ, ಡಾಲರ್ಸ್ ಕಾಲೋನಿ, ಭದ್ರಪ್ಪ ಲೇ ಔಟ್, ಕೆ. ಆರ್. ಮಾರುಕಟ್ಟೆ, ಮಡಿವಾಳ, ಬೊಮ್ಮನಹಳ್ಳಿ, ಜೆ.ಪಿ. ನಗರ, ಗಾಂಧಿನಗರ, ಯಶವಂತಪುರ, ಮೈಸೂರು ರಸ್ತೆ, ವಿಜಯನಗರ, ಉತ್ತರಹಳ್ಳಿ, ನಾಗರಬಾವಿ, ಹಂಪಿ ನಗರ, ಬೆಳ್ಳಂದೂರು, ಸಹಕಾರ ನಗರ, ಪದ್ಮನಾಭ ನಗರ, ಸಿ.ವಿ ರಾಮನ್ ನಗರದಲ್ಲಿ ಉತ್ತಮ ಮಳೆಯಾಗಿದೆ.
ಉಷ್ಣಾಂಶ ಇಳಿಕೆ: ಸತತ ಮಳೆ ಆಗುತ್ತಿರುವುದರಿಂದ ನಗರದ ತಾಪಮಾನದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ವಾರ 35 ಡಿಗ್ರಿ ಸೆಲ್ಸಿಯಸ್ ಮೀರಿದ್ದ ಗರಿಷ್ಠ ತಾಪಮಾನ ಮತ್ತು 23 ಡಿಗ್ರಿ ದಾಟಿದ್ದ ಕನಿಷ್ಠ ತಾಪಮಾನ ಈ ವಾರ ಒಂದೆರಡು ಡಿಗ್ರಿಯಷ್ಟುಇಳಿಕೆ ಕಂಡಿದೆ. ನಗರದಲ್ಲಿ ಬುಧವಾರ ಗರಿಷ್ಠ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Monsoon Rains ಭಾರತದಲ್ಲಿ ಈ ವರ್ಷ ಸರಾಸರಿ ಮಾನ್ಸೂನ್!
ಭಾರತದಲ್ಲಿ ಈ ವರ್ಷ ಸರಾಸರಿ ಮಾನ್ಸೂನ್ (Mansoon) ಮಳೆಯಾಗುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ( private weather forecasting agency) ಮಂಗಳವಾರ ಹೇಳಿದೆ, ಇದು ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹೆಚ್ಚಿನ ಕೃಷಿ ಮತ್ತು ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸಿದೆ.
Bengaluru Rains: ಬೆಂಗ್ಳೂರಲ್ಲಿ ಗುಡುಗು ಸಹಿತ ಭಾರೀ ಮಳೆ: ವಾಹನ ಸವಾರರ ಪರದಾಟ
ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಯ 98% ಆಗಿರುತ್ತದೆ ಮತ್ತು ಭಾರತದಲ್ಲಿ ಸರಾಸರಿ ಮಳೆಯಾಗುವ 65% ಅವಕಾಶವಿದೆ ಎಂದು ಸ್ಕೈಮೆಟ್ (SKYMET ) ಸಂಸ್ಥೆ ಹೇಳಿದೆ. ಜೂನ್‌ನಿಂದ ಪ್ರಾರಂಭವಾಗುವ ನಾಲ್ಕು ತಿಂಗಳ ಋತುವಿನಲ್ಲಿ 50-ವರ್ಷದ ಸರಾಸರಿ 88 ಸೆಂಟಿಮೀಟರ್‌ಗಳ (35 ಇಂಚುಗಳು) 96% ಮತ್ತು 104% ನಡುವಿನ ಸರಾಸರಿ ಅಥವಾ ಸಾಮಾನ್ಯ ಮಳೆಯನ್ನು ದಹೆಲಿಯು ದಾಖಲಿಸಲಿದೆ ಎನ್ನಲಾಗಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಶೇ.96 ರಿಂದ ಶೇ 105ರ ಪ್ರಮಾಣದಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ