ಕಲಬುರಗಿ: ಪ್ರಚೋದನಕಾರಿ ಭಾಷಣ ಕೇಸ್ , ಅಂದೋಲಾ ಶ್ರೀಗೆ ಜಾಮೀನು

By Ravi Janekal  |  First Published Sep 12, 2023, 8:04 AM IST

ಆಳಂದದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜೇವರ್ಗಿಯ ಅಂದೋಲಾ ಶ್ರೀಗಳು ಸೇರಿದಂತೆ ಇತರರ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಎಲ್ಲರಿಗೂ ಆಳಂದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಆಳಂದ: ಆಳಂದದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜೇವರ್ಗಿಯ ಅಂದೋಲಾ ಶ್ರೀಗಳು ಸೇರಿದಂತೆ ಇತರರ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಎಲ್ಲರಿಗೂ ಆಳಂದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆಳಂದ ಪಟ್ಟಣದ ದರ್ಗಾದಲ್ಲಿರುವ ಶಿವಲಿಂಗಕ್ಕೆ ಅಪಚಾರ ಆಗಿದೆ ಎಂದು ಅಂದಿನ ಶಾಸಕ ಸುಭಾಷ್ ಗುತ್ತೇದಾರ ಅವರು ಸದನದಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಸಹಿಸದ ಕಿಡಿಗೇಡಿಗಳು ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲ ಪೋಸ್ಟ್‌ಗಳನ್ನು ಹರಿಬಿಟ್ಟಿದ್ದರು. 

Tap to resize

Latest Videos

undefined

ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ: ಸಚಿವ ಎ ನಾರಾಯಣಸ್ವಾಮಿ

ಇದನ್ನು ಖಂಡಿಸಿ ಜ.10, 2021ರಂದು ಅಂದೋಲಾ ಶ್ರೀ ನೇತೃತ್ವದಲ್ಲಿ ತಾಲೂಕಿನ ಅನೇಕ ಮಠಾಧೀಶರು ಹಾಗೂ ಪ್ರಮುಖರು ಸಾರ್ವಜನಿಕ ಪ್ರತಿಭಟನೆ ನಡೆಸಿ ಬೃಹತ ರ್ರ್ಯಾಲಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಂದೋಲಾ ಸ್ವಾಮೀಜೀ, ಈಶ್ವರಸಿಂಗ್ ಠಾಕೂರ ಹಾಗೂ ಚಂದ್ರಕಾಂತ ಘೋಡಕೆ ಎನ್ನುವವರ ಮೇಲೆ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದರಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು. 

ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಸರ್ಕಾರದಲ್ಲಿ: ಆರ್‌ ಅಶೋಕ್ ತಿರುಗೇಟು

click me!