ಪಾಕಿಸ್ತಾನಿಯರ ಹೊರಹಾಕಲು ಕೇಂದ್ರದ ಸೂಚನೆಯಂತೆ ಕ್ರಮ: ಜಿ ಪರಮೇಶ್ವರ್

Published : Apr 27, 2025, 03:03 PM ISTUpdated : Apr 27, 2025, 04:09 PM IST
ಪಾಕಿಸ್ತಾನಿಯರ ಹೊರಹಾಕಲು ಕೇಂದ್ರದ ಸೂಚನೆಯಂತೆ ಕ್ರಮ: ಜಿ ಪರಮೇಶ್ವರ್

ಸಾರಾಂಶ

ಪಾಕಿಸ್ತಾನಿಗಳನ್ನು ಗಡಿಪಾರು ಮಾಡಲು ಕೇಂದ್ರದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ದೀರ್ಘಾವಧಿ ವೀಸಾ ಹೊಂದಿರುವವರಿಗೆ ವಿನಾಯಿತಿ ನೀಡಲಾಗಿದೆ. ಯುದ್ಧ ಬೇಡ ಎಂಬ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ್, ಭಾರತ ಶಾಂತಿಪ್ರಿಯ ರಾಷ್ಟ್ರ ಎಂದರು. ಪೊಲೀಸರ ವಾರದ ರಜೆ ವೇತನ ವಿಚಾರ ಪರಿಶೀಲಿಸುವುದಾಗಿ ತಿಳಿಸಿದರು. ಪಹಲ್ಗಾಂ ದಾಳಿ ಕುರಿತು ದಿನೇಶ್ ಗುಂಡೂರಾವ್ ಕೇಂದ್ರದ ಭದ್ರತಾ ವೈಫಲ್ಯವನ್ನು ಖಂಡಿಸಿದರು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು: ಪಾಕಿಸ್ತಾನಿಯನ್ನು ದೇಶದಿಂದ ವಾಪಸ್ ಕಳುಹಿಸುವ ವಿಷಯದಲ್ಲಿ ಕೇಂದ್ರದ ಆದೇಶದಂತೆ ಎಸ್ ಪಿ ಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಅಂಕಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಜನ ಇದ್ದಾರೆ ಎಂಬ ಆ ಅಂಕಿ ಅಂಶಗಳ ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಅಂತಹವರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರವೇ ಕೆಲವರಿಗೆ ವಿನಾಯಿತಿ ನೀಡಿದೆ. ಧೀರ್ಘಾವಧಿ ವೀಸಾ ಇರುವವರಿಗೆ, ಮದುವೆ ಆಗಿರುವವರು ಸೇರಿದಂತೆ ಒಂದಿಷ್ಟು ಜನರಿಗೆ ಹೀಗಾಗಲೇ ವಿನಾಯಿತಿ ನೀಡಲಾಗಿದೆ. ಅದನ್ನು ಹೊರತುಪಡಿಸಿ ಉಳಿದ ಎಲ್ಲವರನ್ನು ಹೊರ ಕಳುಹಿಸಲಾಗುವುದು. ಅಲ್ಪಾವಧಿ ವೀಸಾ ಸ್ಟುಡೆಂಡ್, ಟೂರಿಸ್ಟ್ ವೀಸಾ ಇಂತಹವರನ್ನು ತಕ್ಷಣವೇ ಹೊರಗೆ ಕಳುಹಿಸಲು ಸೂಚನೆ ಇದೆ. ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಪಾಕಿಸ್ತಾನ ಪ್ರಜೆಗಳ ವಾಪಸ್‌ ಕಳುಹಿಸಿ: ಗೃಹ ಸಚಿವ ಪರಮೇಶ್ವರ್

ಯುದ್ಧದ ಪರವಾಗಿ ನಾವಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್ ಅವರು ಭಾರತ ಎಂದು ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ, ಆದರೆ ನಮ್ಮ ಕೆಣಕಿದಾಗ ನಾವು ರಿಯಾಕ್ಷನ್ ಮಾಡಿದ್ದೇವೆ. ಆದ್ದರಿಂದ ಆ ಅರ್ಥದಲ್ಲಿ ಸಿಎಂ ಸಿದ್ದರಾಮಯ್ಯನವರು ನಾವು ಯುದ್ಧದ ಪರವಾಗಿಲ್ಲ ಎಂದು ಹೇಳಿದ್ದಾರೆ ಎಂದು ಸಿಎಂ ಹೇಳಿಕೆಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಶಾಂತಿ ದೃಷ್ಟಿಯಿಂದ ಹಾಗೆ ಹೇಳಿದ್ದಾರೆ. ಭಾರತ ಎಂದು ಶಾಂತಿಯನ್ನು ನಂಬಿಕೊಂಡಿದೆ, ಅದನ್ನು ನಮ್ಮ ವೀಕ್ನೆಸ್ ಅಂತ ಯಾರು ತಿಳಿದುಕೊಳ್ಳಬೇಕಾಗಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಆ ಮೂಲಕ ಯುದ್ಧ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.

ಇನ್ನು ರಾಜ್ಯ ಪೊಲೀಸರಿಗೆ ವಾರದ ರಜೆಯ ಸಂದರ್ಭದಲ್ಲಿ ಕೆಲಸ ಮಾಡಿಕೊಂಡು ಅದಕ್ಕೆ ಸರಿಯಾದ ವೇತನ ನೀಡದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ. ಇದು ಪಾಲಿಸಿ ವಿಷಯವಾಗಿದೆ. ಹೀಗಾಗಿ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಚರ್ಚೆಯಾಗಬೇಕು, ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಜೊತೆಗೆ ಬೇರೆ ರಾಜ್ಯಗಳಲ್ಲಿ ಏನು ಮಾಡುತ್ತಿದ್ದಾರೆ ಅದನ್ನು ನೋಡಬೇಕು. ತಕ್ಷಣವೇ ಇದರ ಬಗ್ಗೆ ಗಮನ ಹರಿಸಲಾಗುವುದು ಎಂದು ಮಡಿಕೇರಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಇನ್ನು ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದಿದ್ದರೆ, ಪ್ರಧಾನಿ ಮೋದಿಯವರು ಆ ಸಭೆಗೆ ಭಾಗವಹಿಸದೆ ಬಿಹಾರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಅವರಿಗೆ ಇಂತಹ ಘಟನೆಯ ಕುರಿತು ನಡೆಯುತ್ತಿದ್ದ ಸರ್ವ ಪಕ್ಷಗಳ ಸಭೆಗಿಂತ ಚುನಾವಣಾ ಪ್ರಚಾರವೇ ಮುಖ್ಯವಾಯಿತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ಬಿಡಲು ಇಂದೇ ಕೊನೆ ದಿನ : 3 ದಿನಗಳಲ್ಲಿ ತೆರಳಿದ ಪಾಕಿಗಳ ಸಂಖ್ಯೆ ಕೇವಲ 450

ಕೇಂದ್ರ ಸರ್ಕಾರವು ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗಿತ್ತು. ಅವರ ಈ ನಡೆ ಖಂಡಿತಾ ಒಳ್ಳೆಯದಲ್ಲ, ಒಬ್ಬ ಪ್ರಧಾನಿಗೆ ಇಂತಹ ಗಂಭೀರ ವಿಚಾರ ಬಂದಾಗ ಚುನಾವಣೆ ಮುಖ್ಯವಾಗಿರಲಿಲ್ಲ ಎಂದಿದ್ದಾರೆ. ಅಲ್ಲಿ ಭದ್ರತಾ ವೈಫಲ್ಯವಾಗಿದೆ ಎನ್ನುವುದನ್ನು ಕೇಂದ್ರವೇ ಒಪ್ಪಿಕೊಂಡಿದೆ. ಅದು ಪ್ರವಾಸೋದ್ಯಮ ತಾಣ ಹೆಚ್ಚಿನ ಜನ ಹೋಗುತ್ತಾರೆ. ಆದರೆ ಅಲ್ಲಿ ಜನರ ರಕ್ಷಣೆಗೆ ಯಾರು ಇರಲಿಲ್ಲ ಎನ್ನುವುದು ಗೊತ್ತಾಗಿದೆ. ಘಟನೆ ಆಗುವ ಬಗ್ಗೆ ಇಂಟೆಲಿಜೆನ್ಸಿ ಕೂಡ ಪತ್ತೆ ಹಚ್ಚಲಾಗಿಲ್ಲ. ಖಂಡಿತವಾಗಿಯೂ ಇದು ದೊಡ್ಡ ವೈಫಲ್ಯ. ಪುಲ್ವಾಮದಲ್ಲಿ ಹೇಗೆ ದೊಡ್ಡ ವೆಫಲ್ಯವಾಯಿತೋ, ಹಾಗೇ ಇಲ್ಲಿಯೂ ದೊಡ್ಡ ವೈಫಲ್ಯವಾಗಿದೆ. ಆದರೆ ಈಗ ಮೊಸರಲ್ಲಿ ಕಲ್ಲು ಹುಡುಕುತ್ತಾ ಒಬ್ಬರ ಮೇಲೆ ಒಬ್ಬರು ದೂರುವ ಬದಲಾಗಿ ಒಗ್ಗಟ್ಟಿನಿಂದ ಇದನ್ನು ಎದುರಿಸಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌