
ಬೆಂಗಳೂರು (ಅ.17) ಪ್ಯಾಲೆಸ್ತಿನ್ ಮೇಲೆ ನಡೆಸುತ್ತಿರುವ ಇಸ್ರೇಲ್ ದಾಳಿಯನ್ನು ಭಾರತ ಖಂಡಿಸಬೇಕೆಂದು ಒತ್ತಾಯಿಸಿ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿ ಘೊಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 25 ಜನರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತರು, ಎಂಜಿ ರಸ್ತೆಯಲ್ಲಿ ನಿನ್ನೆ ನಡೆದ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ವಾಟ್ಸಪ್ ಮೂಲಕ ಮೆಸೇಜ್ ರವಾನಿಸಿ ಜನ ಸೇರಿದ್ದಾರೆ. ಹೀಗೆ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಜನ ಸೇರಿದ್ದು ಮತ್ತು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಆರೋಪದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ, ಘೋಷಣೆ; ಕೇಸ್ ಜಡಿದು ತನಿಖೆಗೆ ಮುಂದಾದ ಪೊಲೀಸರು
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಪ್ಯಾಲೆಸ್ತಿನ್ ಪರ ಘೋಷಣೆ ಕೂಗಿದ್ದ ನೂರಕ್ಕೂ ಹೆಚ್ಚು ಜನರು. ಪ್ರತಿಭಟನೆಯಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸು
ತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು. ಪ್ಯಾಲೆಸ್ತೀನ್ ಸ್ವಾತಂತ್ರ್ಯ ರಾಷ್ಟ್ರವಾಗಿಸಬೇಕು ಎಂದು ಬಹುತ್ವ ಕರ್ನಾಟಕ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಂ.ಜಿ. ರಸ್ತೆಯ ಮೆಟೊ್ರೀ ನಿಲ್ದಾಣದ ಪಾದಚಾರಿ ಮಾರ್ಗ ದವರೆಗೆ ಮಾನವ ಸರಪಳಿ ರಚಿಸಿಕೊಂಡ
ಪ್ರತಿಭಟನಾಕಾರರು ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದರು. ಈ ವೇಳೆ ಕೆಲಹೊತ್ತು ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬಳಿಕ ಟಿ.ನರಸಿಂಹ ಮೂರ್ತಿ, ವಿನಯ್ ಶ್ರೀನಿವಾಸ್ ಸೇರಿ 25ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆಪಡೆದಿದ್ದರು.
ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ; ಪ್ಯಾಲೆಸ್ತೀನ್ ಪರ ನಿಲ್ಲುತ್ತೇವೆ: ಎಸ್‌ಡಿಪಿಐ
ಶಾಲಾ ಕಾಲೇಜುಗಳ ಬಳಿ ಸಿಗರೇಟು, ಗುಟ್ಕಾ ಜಾಹೀರಾತು ಹಾಕಿದ್ರೆ ದಂಡ:
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವವರ ವಿರುದ್ಧ ಕೇಸ್ ದಾಖಲಿಸುವುದುಆಗಿ ಎಚ್ಚರಿಕೆ ನೀಡಿದ ಆಯುಕ್ತರು. ಈಗಾಗಲೇ ನಿಯಮ ಉಲ್ಲಂಘನೆ ಮಾಡಿರುವರ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ. ಪಬ್ಬು ಬಾರು, ರೆಸ್ಟೋರೆಂಟ್, ಅಂಗಡಿ ,ಮುಗ್ಗಟ್ಟು ಗಳ ಬಳಿ ಅಕ್ರಮವಾಗಿ ಸಿಗರೇಟು ಸೇದುವಂತಿಲ್ಲ. ಮೂವತ್ತಕ್ಕೂ ಹೆಚ್ಚು ಜನ ಸೇರುವ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪ್ರತ್ಯೇಕ ವಾಗಿ ಸ್ಮೋಕಿಂಗ್ ಜೋನ್ ಇರಬೇಕು. ಶಾಲಾ ಕಾಲೇಜು ಗಳ ಬಳಿ ಸಿಗರೇಟು , ಗುಟ್ಕಾ ಜಾಹೀರಾತು ಹಾಕಿದ್ರೆ ದಂಡ ವಿಧಿಸಲಾಗುತ್ತದೆ. ನೋ ಸ್ಮೋಕಿಂಗ್ ಜೋನ್ ನಲ್ಲಿ ಸಿಗರೇಟು ಸೇದಿದ್ರೆ 200 , ಜಾಹೀರಾತು ಹಾಕಿದ್ರೆ 1000 ಸಾವಿರ ದಂಡ. ಕಳೆದ ಹದಿನೈದು ದಿನಗಳಲ್ಲಿ ನೋ ಸ್ಮೋಕಿಂಗ್ ಜೋನ್ ನಲ್ಲಿ ಧೂಮಪಾನ ಮಾಡಿರುವ ಅಪ್ರಾಪ್ತರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಕೇಸ್ ಗಳು ದಾಖಲು ಮಾಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ