ದೇವಸ್ತಾನವೊಂದರ ನಂದಿ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ (ಅ.17): ದೇವಸ್ತಾನವೊಂದರ ನಂದಿ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಡೆದಿದೆ.
ಮುತ್ತಗಾ ಗ್ರಾಮದ ಹೊರವಲಯದಲ್ಲಿರುವ ಕಂಠಿ ಬಸವೇಶ್ವರ ದೇವಾಲಯ. ದೇವಸ್ಥಾನದೊಳಗೆ ನಂದಿ ಮೂರ್ತಿ ಇದೆ. ಭಕ್ತರು ದಿನನಿತ್ಯ ಪೂಜೆ ಸಲ್ಲಿಸುತ್ತಾರೆ. ಆದರೆ ನಿನ್ನೆ ರಾತ್ರಿವೇಳೆ ದೇವಸ್ತಾನದೊಳಗೆ ನುಗ್ಗಿ ನಂದಿ ಮೂರ್ತಿ ವಿರೂಪಗೊಳಿಸಿದ್ದಾರೆ. ಅಲ್ಲದೇ ದೇವರ ಮೂರ್ತಿಗಳನ್ನು ಗರ್ಭಗುಡಿಯಿಂದ ಕಿತ್ತು ಹೊರಗಡೆ ಬಿಸಾಡಿರುವ ಕಿಡಿಗೇಡಿಗಳು.
undefined
ಕಿಡಿಗೇಡಿಗಳಿಂದ ದೇವರ ಮೂರ್ತಿ ಧ್ವಂಸ: ಭಜರಂಗದಳ, ಹಿಂದೂ ಕಾರ್ಯಕರ್ತರ ಆಕ್ರೋಶ
ಎಂದಿನಂತೆ ಇಂದು ಮುಂಜಾನೆ ದೇವರ ಪೂಜೆಗೆ ಹೋಗಿರುವ ಗ್ರಾಮಸ್ಥರು. ಪೂಜೆಗೆ ಹೋಗಿದ್ದ ವೇಳೆ ದೇವಾಲಯದೊಳಗೆ ನಂದಿಮೂರ್ತಿ ವಿರೂಪಗೊಳಿಸಿರುವ ಕೃತ್ಯ ಬಯಲಾಗಿದೆ. ಘಟನೆ ತಿಳಿದು ದೇವಾಲಯ ಸುತ್ತ ಜಮಾಯಿಸಿದ ಭಕ್ತರು. ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ದೇವಸ್ಥಾನ ದೇವರ ಮೂರ್ತಿಗಳನ್ನು ಭಗ್ನಗೊಳಿಸುವ ಕೃತ್ಯಗಳು ಪದೇಪದೆ ಮರುಕಳಿಸುತ್ತಿದ್ದು, ಇಂಥ ಕೃತ್ಯಗಳ ಜರುಗದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಬಹಳಷ್ಟು ದೇವಾಲಯಗಳು ಹೊರವಲಯದಲ್ಲಿರುವುದು, ಸಿಸಿಟಿವಿ ಅಳವಡಿಸದೇ ಇರುವುದು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹಿನ್ನಡೆಯಾಗುತ್ತದೆ ಹೀಗಾಗಿ ದೇವಸ್ಥಾನದೊಳಗೆ ಸಿಸಿಟಿವಿ ಅಳವಡಿಸಬೇಕು. ಇದು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯಕ್ಕೆ ಬರುತ್ತದೆ.
ಇದೆಂಥಾ ದಾರ್ಷ್ಟ್ಯ? ಕೇದಾರನಾಥನ ಮೇಲೆ ಹಣ ಊದಿದ ಮಹಿಳೆ; ಎಫ್ಐಆರ್ ದಾಖಲು