ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ, ಘೋಷಣೆ; ಕೇಸ್ ಜಡಿದು ತನಿಖೆಗೆ ಮುಂದಾದ ಪೊಲೀಸರು

By Ravi Janekal  |  First Published Oct 17, 2023, 12:30 PM IST

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ನಿನ್ನೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಯಿತು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಂಗಳೂರು (ಅ.17) :  ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ನಿನ್ನೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಯಿತು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸೋಮವಾರ ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಂ.ಜಿರಸ್ತೆಯ ಮೆಟ್ರೋ ನಿಲ್ದಾಣದ ಪಾದಚಾರಿ ಮಾರ್ಹದವರೆಗೆ ಮಾನವ ಸರಪಳಿ ರಚಿಸಿಕೊಂಡ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಪರ ಘೋಷಣೆ ಕೂಗಿದ್ದರು. ಬೈಕ್'ಗೆ ಪ್ಯಾಲೆಸ್ಟೀನ್ ಧ್ವಜ ಕಟ್ಟಿಕೊಂಡು, ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಇಂಡಿಯಾ ವಿತ್ ಪ್ಯಾಲೆಸ್ತೀನ್, ಪ್ಯಾಲೆಸ್ತೀನ್, ಸಂತ್ರಸ್ತರ ಪರ ಧ್ವನಿ ಎತ್ತೋಣ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ್ದರು. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವಂತೆ ಭಾರತ ಒತ್ತಡ ಹಾಕಬೇಕು, ಪ್ಯಾಲೆಸ್ತೀನ್ ಪ್ರತ್ಯೇಕ ದೇಶವಾಗಿಸಬೇಕು ಘೋಷಣೆ ಕೂಗಿದ್ದ ಸಂಘಟನೆ ಕಾರ್ಯಕರ್ತರು. 

Tap to resize

Latest Videos

ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರ; ಪ್ಯಾಲೆಸ್ತೀನ್ ಪರ ನಿಲ್ಲುತ್ತೇವೆ: ಎಸ್‌ಡಿಪಿಐ

ಆದರೆ ಪ್ರತಿಭಟನೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿಲ್ಲ. ಅನುಮತಿ ಪಡೆಯದೇ ಏಕಾಏಕಿ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಸಂಘಟನೆ ವಿರುದ್ದ ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿರುವ ಕಬ್ಬನ್ ಪಾರ್ಕ್ ಪೊಲೀಸರು.

ಪ್ಯಾಲೆಸ್ತೀನ್ ಗೆ ಬೆಂಬಲ ನೀಡುವಂತೆ ಒತ್ತಾಯ:

ಭಾರತವು ಇಸ್ರೇಲ್'ಗೆ ಘೋಷಿಸಿರುವ ಬೆಂಬಲವನ್ನು ವಾಪಸ್ ಪಡೆದು ಪ್ಯಾಲೆಸ್ತೀನ್ ಬೆಂಬಲ ನೀಡಬೇಕು. ಇಸ್ರೇಲ್ ನಲ್ಲಿ ಮುಗ್ಧ ಜನತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹಿಂದೆ ಮಹಾತ್ಮಾ ಗಾಂಧೀಜಿ, ನೆಲ್ಸನ್ ಮಂಡೇಲಾ, ನೆಹರು ಸೇರಿ ಪ್ರಮುಖರು ಪ್ಯಾಲೆಸ್ತಾನ್ ಪರ ಧ್ವನಿ ಎತ್ತಿದ್ದರು. ಆದರೆ, ಪ್ರಧಾನಿ ಮೋದಿ ಹಾಗೂ ಇತರೆ ದೇಶಗಳ ಮುಖಂಡರು ಇಸ್ರೇಲ್'ಗೆ ಬೆಂಬಲ ಘೋಷಿಸಿರುವುದು ಖಂಡನೀಯ ಎಂದರು.

ಹಮಾಸ್ ಪ್ಯಾಲೆಸ್ತೀನ್ ನಡುವೆ ವ್ಯತ್ಯಾಸ:

ಜಾಗತಿಕ ನಾಗರೀಕರಾಗಿ ನಾವು ಪ್ಯಾಲೆಸ್ತೀನ್'ಗೆ ಬೆಂಬಲ ನೀಡಬೇಕು, ಹಮಾಸ್ ಹಾಗೂ ಪ್ಯಾಲೆಸ್ತೀನ್ ನಡುವಿನ ವ್ಯತ್ಯಾಯವನ್ನು ತಿಳಿಯುವುದು ಮುಖ್ಯವಾಗಿದೆ. ಇಸ್ರೇಲ್ ಪ್ರತಿಕ್ರಿಯೆಗೆ ಹಮಾಸ್ ಪ್ರತಿಕ್ರಿಯೆ ನೀಡಿದೆ. ಅದು ಎಲ್ಲಾ ಪ್ಯಾಲೆಸ್ತೀನ್'ನ್ನು ಪ್ರತಿನಿಧಿಸುವುದಿಲ್ಲ. ಇಸ್ರೇಲ್ ಗೂ ಮೊದಲಿನ ಇತಿಹಾಸವನ್ನು ಪ್ಯಾಲೆಸ್ತೀನ್ ಹೊಂದಿದೆ. ದೀರ್ಘಕಾಲದಿಂದಲೂ ನೋವನ್ನು ಸಹಿಸಿಕೊಂಡಿದೆ. ಮಾಧ್ಯಮಗಳ ವರದಿಗಳೂ ಇಸ್ರೇಲ್ ಪರವಾಗಿದೆ. ಇದು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ. 

ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಭಾರತದ ಪ್ಯಾಲೆಸ್ತೀನ್ ಪರ ನಿಲುವು ಬದಲಾಯ್ತಾ?

ಕಳೆದ 10 ದಿನಗಳಲ್ಲಿ 700ಕ್ಕೂ ಹೆಚ್ಚು ಮಕ್ಕಳ ಮೇಲೆ ಅಮಾನವೀಯತೆ ಮೆರೆಯಲಾಗಿದೆ. ಈ ದಬ್ಬಾಳಿಕೆಯ ವಿರುದ್ಧ ನಾವು ನಿಂತಿದ್ದೇವೆ. ಇಸ್ರೇಲ್ ದಬ್ಬಾಳಿಕೆಯನ್ನು ಪ್ಯಾಲೆಸ್ತೀನ್ ಎದುರಿಸುತ್ತಿದ್ದಾರೆ ಎಂದು ದುಬೈನ ವಿದ್ಯಾರ್ಥಿ ರುಕ್ಕಯ್ಯ ಐಮೆನ್ ಅವರು ಹೇಳಿದ್ದಾರೆ.

click me!